Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಲಾರ್​’ಗೆ ಎರಡು ಬಾರಿ ನೋ ಅಂದಿದ್ದ ಪೃಥ್ವಿರಾಜ್ ಸುಕುಮಾರ್ ಕೊನೆಗೆ ಒಪ್ಪಿದ್ದು ಏಕೆ?

Prithviraj Sukumaran: ‘ಸಲಾರ್’ ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರ್ ಸಹ ನಟಿಸಿದ್ದಾರೆ. ಬಹಳ ಪ್ರಾಮುಖ್ಯತೆ ಇರುವ ಪಾತ್ರ ಅವರದ್ದು, ಆದರೆ ‘ಸಲಾರ್’ ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್.

‘ಸಲಾರ್​’ಗೆ ಎರಡು ಬಾರಿ ನೋ ಅಂದಿದ್ದ ಪೃಥ್ವಿರಾಜ್ ಸುಕುಮಾರ್ ಕೊನೆಗೆ ಒಪ್ಪಿದ್ದು ಏಕೆ?
Follow us
ಮಂಜುನಾಥ ಸಿ.
|

Updated on:Dec 21, 2023 | 4:12 PM

ಪ್ರಭಾಸ್ (Prabhas) ನಟಿಸಿ, ಪ್ರಶಾಂತ್ ನೀಲ್ (Prashanth Neel) ನಿರ್ದೇಶನ ಮಾಡಿರುವ ‘ಸಲಾರ್’ ಸಿನಿಮಾ ಡಿಸೆಂಬರ್ 22ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ಅಷ್ಟೇ ಪ್ರಮುಖ ಪಾತ್ರದಲ್ಲಿ ಮಲಯಾಳಂನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಸಹ ನಟಿಸಿದ್ದಾರೆ. ಸಿನಿಮಾದಲ್ಲಿ ಪೃಥ್ವಿರಾಜ್ ಅವರ ವೇಷ-ಭೂಷಣ ನೋಡಿದರೆ ಅವರದ್ದು ಸಖತ್ ಭಿನ್ನ ಶೇಡ್​ಗಳುಳ್ಳ ಪಾತ್ರ ಎಂಬುದು ಖಾತ್ರಿಯಾಗುತ್ತದೆ. ಅವರ ಅತ್ಯುತ್ತಮ ಅಭಿನಯದ ಝಲಕ್​ಗಳು ಟ್ರೈಲರ್​ನಲ್ಲಿ ಕಾಣಲು ಸಿಗುತ್ತವೆ. ಆದರೆ ‘ಸಲಾರ್’ ಸಿನಿಮಾದಲ್ಲಿ ನಟಿಸಲು ಎರಡು ಬಾರಿ ನೋ ಎಂದಿದ್ದರಂತೆ ಪೃಥ್ವಿರಾಜ್, ಆದರೆ ಕೊನೆಗೆ ಒಪ್ಪಿದ್ದು ಹೇಗೆ?

ರಾಜಮೌಳಿ ಮಾಡಿರುವ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಪೃಥ್ವಿರಾಜ್ ಸುಕುಮಾರ್, ‘‘ನಾನು ಪ್ರಶಾಂತ್ ನೀಲ್ ಅನ್ನು ಖುದ್ದಾಗಿ ಭೇಟಿ ಆಗಿರಲಿಲ್ಲ. ಅವರಿಂದ ಮೊದಲಿಗೆ ಆಫರ್ ಬಂದಾಗ, ಅದೂ ಪ್ರಭಾಸ್ ಆ ಸಿನಿಮಾದ ನಾಯಕ ಎಂದಾಗ ನಾನು ನೋ ಹೇಳಲು ರೆಡಿಯಾಗಿದ್ದೆ’’ ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.

‘‘ನಾನು ಮಲಯಾಳಂ ಚಿತ್ರರಂಗದ ನಟ, ನಮಗೆ ವಿಶಾಲವಾಗಿ ಯೋಚಿಸುವುದು ಅಷ್ಟಾಗಿ ಬರುವುದಿಲ್ಲ. ಪರಭಾಷೆಯ ಆಫರ್ ಬಂದರೂ ಸಹ ಅದು ಸಣ್ಣ ಪಾತ್ರವೇ ಆಗಿರುತ್ತದೆ ಎಂಬುದು ನಮ್ಮ ಮನಸ್ಸಿನಲ್ಲಿ ಬೇರೂರಿ ಬಿಟ್ಟಿದೆ. ಬಹುತೇಕವಾಗಿ ಪರಭಾಷೆಯಿಂದ ಬರುವುದು ಸಹ ಸಣ್ಣ ಪಾತ್ರಗಳೇ. ಹಾಗಾಗಿ ಇದೂ ಸಹ ಸಣ್ಣ ಪಾತ್ರವೇ ಆಗಿರುತ್ತದೆ ಎಂದು ನಾನು ನೋ ಹೇಳಬೇಕು ಎಂದುಕೊಂಡಿದ್ದೆ. ಆದರೆ ಒಮ್ಮೆ ಭೇಟಿಯಾಗಿ ಕತೆ ಕೇಳಿದ ಬಳಿಕ ನೋ ಅನ್ನೋಣ ಎಂದು ನಿರ್ಧರಿಸಿದ್ದೆ’’ ಎಂದರು.

ಇದನ್ನೂ ಓದಿ:‘ಡಂಕಿ’ v/s‘ಸಲಾರ್’: ಮಲ್ಟಿಪ್ಲೆಕ್ಸ್​ನಿಂದ ತಾರತಮ್ಯ, ಪಾಠ ಕಲಿಸಲು ಮುಂದಾದ ಹೊಂಬಾಳೆ?

‘‘ಬಳಿಕ ಹೈದರಾಬಾದ್​ನಲ್ಲಿ ನೀಲ್​ರನ್ನು ಭೇಟಿಯಾದಾಗ ಅವರ ಕಚೇರಿಗೆ ಹೋಗಿದ್ದೆ, ಅಲ್ಲಿ ಅವರು ನನ್ನ ಕೈಗೆ ಚಿತ್ರಕತೆ ಕೊಟ್ಟು ಕೆಳಗೆ ಬೇರೆ ಕೆಲಸಕ್ಕೆ ಹೋದರು, ಅಲ್ಲೇ ಪಕ್ಕದಲ್ಲಿ ನೋಡಿದರೆ ದೊಡ್ಡ ಬೋರ್ಡ್​ನಲ್ಲಿ ‘ಸಲಾರ್’ ಸಿನಿಮಾದ ಅಷ್ಟೂ ಪಾತ್ರಗಳ ಚಾರ್ಟ್ ಇತ್ತು, ಅದರಲ್ಲಿ ಅವರ ಹಿನ್ನೆಲೆ ವ್ಯಕ್ತಿತ್ವ ಪರಸ್ಪರರ ಪಾತ್ರಗಳೊಟ್ಟಿಗೆ ಸಂಬಂಧ ಎಲ್ಲವೂ ಬರೆದಿತ್ತು. ಅದನ್ನು ನೋಡಿ ನನಗೆ ಆಶ್ಚರ್ಯವಾಯಿತು. ನನ್ನ ಪಾತ್ರದ ಬಗ್ಗೆ ನೀಲ್ ಹೇಳಿದಾಗಿ ಈ ಪಾತ್ರ ಮಾಡಲೇ ಬೇಕು ಅನ್ನಿಸಿ ಓಕೆ ಎಂದೆ’’ ಎಂದಿದ್ದಾರೆ ಪೃಥ್ವಿರಾಜ್.

ಆದರೆ ಅದಾದ ಬಳಿಕ ಸಮಸ್ಯೆ ಎದುರಾಯ್ತು, ನಾನು ನಟಿಸುತ್ತಿದ್ದ ‘ಆಡುಜೀವಿತಂ’ ಸಿನಿಮಾದ ಚಿತ್ರೀಕರಣ ಕೋವಿಡ್ ಕಾರಣದಿಂದ ತಡವಾಯ್ತು. ನಾನು ಆ ಸಿನಿಮಾಕ್ಕಾಗಿ 35 ಕೆಜಿ ತೂಕ ಇಳಿಸಿಕೊಂಡಿದ್ದೆ, ಉದ್ದ ಗಡ್ಡ ಬಿಟ್ಟಿದ್ದೆ, ಆ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ನಾನು ಜೋರ್ಡನ್​ಗೆ ಹೋಗಲೇ ಬೇಕಿತ್ತು. ಪ್ರಶಾಂತ್​ರನ್ನು ಭೇಟಿಯಾಗಿ ನಾನು ನಿಮ್ಮ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಬಿಟ್ಟೆ. ಪ್ರಶಾಂತ್ ಸಹ ಬಹಳ ಬೇಜಾರು ಮಾಡಿಕೊಂಡರು. ಇಬ್ಬರೂ ದೂರಾಗುತ್ತಿರುವ ಪ್ರೇಮಿಗಳಂತೆ ಮೌನವಾಗಿ ಅಂದು ದೂರಾಗಿದ್ದೆವು, ಆದರೆ ಕೊನೆಗೆ ‘ಸಲಾರ್’ ಸಿನಿಮಾದ ಚಿತ್ರೀಕರಣವೂ ಸಹ ತಡವಾಯ್ತು, ಹಾಗಾಗಿ ಮತ್ತೆ ನಾನು ‘ಸಲಾರ್’ ಸಿನಿಮಾದಲ್ಲಿ ನಟಿಸುವಂತಾಯ್ತು’’ ಎಂದು ನೆನಪು ಮಾಡಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Thu, 21 December 23

VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ