‘ವೈಲೆನ್ಸ್​ ಬೇಡ, ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’: ಫಸ್ಟ್​ ಶೋ ವೀಕ್ಷಿಸಿದ ಫ್ಯಾನ್ಸ್​ ಪ್ರತಿಕ್ರಿಯೆ

‘ವೈಲೆನ್ಸ್​ ಬೇಡ, ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’: ಫಸ್ಟ್​ ಶೋ ವೀಕ್ಷಿಸಿದ ಫ್ಯಾನ್ಸ್​ ಪ್ರತಿಕ್ರಿಯೆ

ಮದನ್​ ಕುಮಾರ್​
|

Updated on: Dec 21, 2023 | 6:00 PM

ಕ್ರೌರ್ಯ ಇಲ್ಲದ, ಕ್ಲಾಸ್​ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರ ವರ್ಗ ದೊಡ್ಡದಿದೆ. ಅಂಥವರಿಗಾಗಿ ‘ಡಂಕಿ’ ಸಿನಿಮಾ ಹೇಳಿ ಮಾಡಿಸಿದಂತಿದೆ. ಆ ಕಾರಣಕ್ಕಾಗಿ ಅನೇಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಇಂದು (ಡಿಸೆಂಬರ್​ 21) ‘ಡಂಕಿ’ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಮೊದಲ ಶೋ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಇತ್ತೀಚೆಗೆ ಕೆಲವು ಸಿನಿಮಾಗಳು ಹಿಂಸೆಯಿಂದಲೇ ತುಂಬಿ ಹೋಗಿವೆ. ಎಲ್ಲ ಪ್ರೇಕ್ಷಕರಿಗೂ ಈ ಪ್ರಕಾರದ ಚಿತ್ರಗಳು ಇಷ್ಟ ಆಗುವುದಿಲ್ಲ. ಕ್ರೌರ್ಯ ಇಲ್ಲದ, ಕ್ಲಾಸ್​ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರ ವರ್ಗ ದೊಡ್ಡದಿದೆ. ಅಂಥವರಿಗಾಗಿ ಡಂಕಿ’ ಸಿನಿಮಾ (Dunki Movie) ಹೇಳಿ ಮಾಡಿಸಿದಂತಿದೆ. ಆ ಕಾರಣಕ್ಕಾಗಿ ಅನೇಕರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಇಂದು (ಡಿಸೆಂಬರ್​ 21) ‘ಡಂಕಿ’ ಬಿಡುಗಡೆ ಆಗಿದೆ. ಬೆಂಗಳೂರಿನಲ್ಲಿ ಮೊದಲ ಶೋ ನೋಡಿದ ಪ್ರೇಕ್ಷಕರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ವೈಲೆನ್ಸ್​ ಬೇಡ.. ಒಳ್ಳೆಯ ಸಿನಿಮಾ ಬೇಕಾದರೆ ಡಂಕಿ ನೋಡಿ’ ಎಂದು ಶಾರುಖ್​ ಖಾನ್​ ಅಭಿಮಾನಿಗಳು (Shah Rukh Khan Fans) ಹೇಳಿದ್ದಾರೆ. ಈ ಸಿನಿಮಾಗೆ ರಾಜ್​ಕುಮಾರ್​ ಹಿರಾನಿ (Rajkumar Hirani) ನಿರ್ದೇಶನ ಮಾಡಿದ್ದಾರೆ. ಶಾರುಖ್​ ಜತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್​, ಬೊಮನ್​ ಇರಾನಿ ಮುಂತಾದವರು ನಟಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.