ಕೋವಿಡ್ ರೂಪಾಂತರಿ ತಳಿಯ ಬಗ್ಗೆ ಭಯ, ಆತಂಕ ಬೇಡ; ಆದರೆ ಎಚ್ಚರವಿರಲಿ: ಸಿದ್ದರಾಮಯ್ಯ, ಮುಖ್ಯಮಂತ್ರಿ
ರಾಜ್ಯದಲ್ಲಿ ಕೋವಿಡ್ 19 ಹೊಸ ಅಲೆ ಸೃಷ್ಟಿಯಾದ ಬಳಿಕ ಮೂರು ಜನ ಮೃತಪಟ್ಟಿರುವುದು ನಿಜವಾದರೂ, ಕೊರೋನಾ ವೈರಸ್ ರೂಪಾಂತರಿ ತಳಿ ಜೆಎನ್.1 ಸೋಂಕಿನಿಂದಲೇ ಬಲಿಯಾಗಿರುವುದು ದೃಢಪಟ್ಟಿಲ್ಲ. ಅಸುನೀಗಿದವರೆಲ್ಲ ಶ್ವಾಸಕೋಶ, ಮೂತ್ರಪಿಂಡ ಮತ್ತು ಹೃದ್ರೋಗಗಳಿಂದ ಬಳಲುತ್ತಿದ್ದಿದ್ದು ಗೊತ್ತಾಗಿದೆ. ಮಾಸ್ಕ್ ಧರಿಸಿಯೇ ಪತ್ರಿಕಾ ಗೋಷ್ಟಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಮಾದರಿ ಎನಿಸಿದ್ದಾರೆ.
ಬೆಂಗಳೂರು: ಕೋವಿಡ್-19 ಹೊಸ ತಳಿ ಜೆಎನ್. 1 (Covid JN. 1variant) ರಾಜ್ಯದೆಲ್ಲಡೆ ಭೀತಿ ಮೂಡಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಗೃಹ ಕಚೇರಿ ಕೃಷ್ಣಾದಲ್ಲಿ (Krishna) ಪತ್ರಿಕಾ ಗೋಷ್ಟಿ ನಡೆಸಿ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಕೊರೋನಾದ ರೂಪಾಂತರಿ ತಳಿ ದೇಶದೆಲ್ಲೆಡೆ ಭೀತಿಯ ವಾತಾವರಣ ಸೃಷ್ಟಿ ಮಾಡಿರುವುದು ನಿಜವಾದರೂ, ಭಯ ಬೀಳುವ, ಅತಂಕಪಡುವ ಅವಶ್ಯಕತೆಯಿಲ್ಲ, ಅದರೆ ತಾಂತ್ರಿಕ ಸಲಹಾ ಸಮಿತಿ ನೀಡಿರುವ ಮಾರ್ಗಸೂಚಿಯನ್ನು ಚಾಚೂತಪ್ಪದೆ ಪಾಲಿಸಬೇಕೆಂದು ಸಿದ್ದರಾಮಯ್ಯ ಹೇಳಿದರು. ಅರವತ್ತು ಮತ್ತು ಅದಕ್ಕೂ ಮೇಲ್ಪಟ್ಟು ವಯೋಮಾನದ ಹಿರಿಯ ನಾಗರಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಹೇಳಿದ ಮುಖ್ಯಮಂತ್ರಿಯವರು, ಹೆಚ್ಚು ಸಮಯವನ್ನು ಜನ ಸಂಪರ್ಕದಲ್ಲಿ ಕಳೆಯುವವರು, ಜನಸಂದಣಿ ಇರುವ ಪ್ರದೇಶಗಳಲ್ಲಿ ಓಡಾಡುವರು ತಪ್ಪದೆ ಮಾಸ್ಕ್ ಧರಿಸಬೇಕು ಎಂದು ಹೇಳಿದರು.
.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos