ಉಪಯೋಗ ಇಲ್ಲ ಅಂತ ಗೊತ್ತಾದಾಗ ಕಾರ್ತಿಕ್​ಗೆ ಬೆಲೆ ಕೊಡಲಿಲ್ಲ ಸಂಗೀತಾ; ಅಸಲಿ ಮುಖ ಬಹಿರಂಗ

ಉಪಯೋಗ ಇಲ್ಲ ಅಂತ ಗೊತ್ತಾದಾಗ ಕಾರ್ತಿಕ್​ಗೆ ಬೆಲೆ ಕೊಡಲಿಲ್ಲ ಸಂಗೀತಾ; ಅಸಲಿ ಮುಖ ಬಹಿರಂಗ

ಮದನ್​ ಕುಮಾರ್​
|

Updated on: Dec 21, 2023 | 3:56 PM

ಕಾರ್ತಿಕ್ ಮಹೇಶ್​ ಅವರು ಯಾರಿಗೂ ಬೇಡವಾಗಿದ್ದಾರೆ. ಅವರ ಬೆನ್ನಿಗೆ ಪೆಟ್ಟಾಗಿದೆ. ಹಾಗಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸ್ವತಃ ಸಂಗೀತಾ ಶೃಂಗೇರಿ ಕೂಡ ಸಿದ್ಧರಿಲ್ಲ. ಅತ್ತ, ತನಿಷಾ ಕುಪ್ಪಂಡ ಕೂಡ ಕಾರ್ತಿಕ್​ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಈ ಪರಿಸ್ಥಿತಿ ಕಂಡು ತುಕಾಲಿ ಸಂತೋಷ್​ ಮರುಕ ವ್ಯಕ್ತಪಡಿಸಿದ್ದಾರೆ.

ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ಕಾರ್ತಿಕ್​ ಮಹೇಶ್​ (Karthik Mahesh) ಅವರು ಓಡುವ ಕುದುರೆ ಆಗಿದ್ದರು. ಹಾಗಾಗಿ ಅವರಿಗೆ ಒಳ್ಳೆಯ ಬೇಡಿಕೆ ಇತ್ತು. ಎರಡು ತಂಡಗಳಾಗಿ ಟಾಸ್ಕ್​ ಆಡುವಾಗ ಪ್ರತಿಯೊಬ್ಬರು ಕೂಡ ತಮ್ಮ ತಂಡದಲ್ಲಿ ಕಾರ್ತಿಕ್​ ಇರಬೇಕು ಎಂದು ಬಯಸುತ್ತಿದ್ದರು. ಆದರೆ ಈಗ ಅದೇ ಕಾರ್ತಿಕ್ ಅವರು ಯಾರಿಗೂ ಬೇಡವಾಗಿದ್ದಾರೆ. ಅವರ ಬೆನ್ನಿಗೆ ಪೆಟ್ಟಾಗಿದೆ. ಹಾಗಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಸ್ವತಃ ಸಂಗೀತಾ ಶೃಂಗೇರಿ (Sangeetha Sringeri) ಕೂಡ ಸಿದ್ಧರಿಲ್ಲ. ಅತ್ತ, ತನಿಷಾ ಕುಪ್ಪಂಡ ಕೂಡ ಕಾರ್ತಿಕ್​ ಅವರನ್ನು ಆಯ್ಕೆ ಮಾಡಿಕೊಂಡಿಲ್ಲ. ಈಗ ಕಾರ್ತಿಕ್​ಗೆ ಎದುರಾಗಿರುವ ಪರಿಸ್ಥಿತಿ ಕಂಡು ತುಕಾಲಿ ಸಂತೋಷ್​ ಮರುಕ ವ್ಯಕ್ತಪಡಿಸಿದ್ದಾರೆ. ‘ಇವತ್ತು ಅವನನ್ನು 10 ರೂಪಾಯಿಗೂ ಕೇಳಲಿಲ್ಲ. ಅವನಿಗೆ ಓಡೋಕೆ ಆಗಲ್ಲ ಅಂತ ಗೊತ್ತಾದ ತಕ್ಷಣ ಅವನನ್ನು ಬಿಟ್ಟೇ ಬಿಟ್ಟರು’ ಎಂದು ತುಕಾಲಿ ಹೇಳಿದ್ದಾರೆ. ಡಿ.21ರಂದು ‘ಕಲರ್ಸ್​ ಕನ್ನಡ’ದಲ್ಲಿ ಈ ಸಂಚಿಕೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಉಚಿತವಾಗಿ ಲೈವ್​ ನೋಡಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.