ವಿಪಕ್ಷ ನಾಯಕ ಅಶೋಕ ಕೇಳಿದ ಅನಪೇಕ್ಷಿತ ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಉಪೇಕ್ಷಿಸಿದರು ಗೊತ್ತಾ?

ವಿಪಕ್ಷ ನಾಯಕ ಅಶೋಕ ಕೇಳಿದ ಅನಪೇಕ್ಷಿತ ಪ್ರಶ್ನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಗೆ ಉಪೇಕ್ಷಿಸಿದರು ಗೊತ್ತಾ?

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2023 | 5:13 PM

ಅಶೋಕ್ ಸಿಎಂರನ್ನು ಕೆಣಕಲು, ಡಿಕೆ ಶಿವಕುಮಾರ್ (DK Shivakumar) ಯಾವಾಗ ಸೀನಿಯರ್ ಆಗುತ್ತಾರೆ, ಸ್ವಾಮೀಜಿಯೊಬ್ಬರು ಅವರು ಮುಖ್ಯಮಂತ್ರಿಯಾಗಲಿದ್ದಾರೆ ಅಂತ ಹೇಳಿದ್ದಾರಲ್ಲ ಅನ್ನುತ್ತಾರೆ. ಈ ಪ್ರಶ್ನೆ ಕೇಳಿ ಕೇಳಿ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ, ಇಬ್ಬಂದಿಗೆ, ಪೇಚಿಗೆ ಸಿಲುಕಿಸಿದೆ ಅಂತ ಸಂತಸಪಡುತ್ತಿದ್ದ ಅಶೋಕ್ ಗೆ ಅದು ಕ್ಷಣಿಕವಾಗಿ ಬಿಡುತ್ತದೆ

ಬೆಳಗಾವಿ: ಸದನದಲ್ಲಿ ಅನಪೇಕ್ಷಿತ ವಿಷಯ ಅಥವಾ ಪ್ರಶ್ನೆ ಕೇಳಿದಾಗ ಅದನ್ನು ಹೇಗೆ ಉಪೇಕ್ಷಿಸಬೇಕು ಅನ್ನೋದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದ ಕಲಿಯಬೇಕು ಮಾರಾಯ್ರೇ. ಅದು ಇಂದಿನ ಕಾರ್ಯಕಲಾಪಗಳಲ್ಲಿ ವಿಪಕ್ಷ ನಾಯಕ ಆರ್ ಅಶೋಕ (R Ashoka) ಅವರಿಗೂ ಮನವರಿಕೆಯಾಗಿರಬಹುದು. ವಿಷಯವೊಂದರ ಬಗ್ಗೆ ಮಾತಾಡುತ್ತಾ ಸಿದ್ದರಾಮಯ್ಯನವರು ಅಧಿಕಾರ ಸಿಕ್ಕವರು ಸೀನಿಯರ್ ಗಳೆನಿಸಿಕೊಳ್ಳುತ್ತಾರೆ ಸಿಗದವರು ಜ್ಯೂನಿಯರ್ ಗಳಾಗುತ್ತಾರೆ ಅಂತ ಹೇಳಿ ಮಾತು ನಿಲ್ಲಿಸಿದಾಗ, ಅಶೋಕ್ ಸಿಎಂರನ್ನು ಕೆಣಕಲು, ಡಿಕೆ ಶಿವಕುಮಾರ್ (DK Shivakumar) ಯಾವಾಗ ಸೀನಿಯರ್ ಆಗುತ್ತಾರೆ, ಸ್ವಾಮೀಜಿಯೊಬ್ಬರು ಅವರು ಮುಖ್ಯಮಂತ್ರಿಯಾಗಲಿದ್ದಾರೆ ಅಂತ ಹೇಳಿದ್ದಾರಲ್ಲ ಅನ್ನುತ್ತಾರೆ. ಈ ಪ್ರಶ್ನೆ ಕೇಳಿ ಕೇಳಿ ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ, ಇಬ್ಬಂದಿಗೆ, ಪೇಚಿಗೆ ಸಿಲುಕಿಸಿದೆ ಅಂತ ಸಂತಸಪಡುತ್ತಿದ್ದ ಅಶೋಕ್ ಗೆ ಅದು ಕ್ಷಣಿಕವಾಗಿ ಬಿಡುತ್ತದೆ. ಅಶೋಕ್ ಹೇಳಿದ್ದು ತನ್ನ ಕಿವಿಗೆ ಬೀಳಲೇ ಎಂಬಂತೆ ಸಿದ್ದರಾಮಯ್ಯ ವರ್ತಿಸುತ್ತಾರೆ. ಸಭಾಧ್ಯಕ್ಷರ ಕಡೆ ತಿರುಗಿ, ಮಾನ್ಯ ಸಭಾಧ್ಯಕ್ಷರೇ, ಆರೋಗ್ಯ, ಶಿಕ್ಷಣ ಮತ್ತ ಆದಾಯ ಈ ಆಯಾಮಗಳ ಮೇಲೆ ಮಾನವ ಅಭಿವೃದ್ಧಿ ಸೂಚ್ಯಂಕ ವರದಿ ಬಿಡುಗಡೆ ಮಾಡುತ್ತಾರೆ, ಈ ವರದಿ 2022 ರಲ್ಲಿ ಬಿಡುಗಡೆಯಾಗಿದೆ ಅಂತ ಹೇಳಿದಾಗ ಅಶೋಕ ಪೆಚ್ಚುಮೋರೆ ಹಾಕಬೇಕಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ