ಟ್ರೋಫಿ ಗೆದ್ದಷ್ಟೇ ಖುಷಿಪಟ್ಟ ಬಿಗ್ ಬಾಸ್ ಸ್ಪರ್ಧಿಗಳು; ದೊಡ್ಮನೆಯಲ್ಲಿ ಅಂಥದ್ದೇನಾಯ್ತು?
‘ಬಿಗ್ ಬಾಸ್ ಕನ್ನಡ ಸೀಸನ್ 10’ ಕಾರ್ಯಕ್ರಮದಲ್ಲಿ ಈಗ 68 ದಿನಗಳು ಕಳೆದಿವೆ. ಸದ್ಯ 12 ಮಂದಿ ನಡುವೆ ಸ್ಪರ್ಧೆ ಮುಂದುವರಿದಿದೆ. ದಿನ ಕಳೆದಂತೆಲ್ಲ ವಾತಾವರಣ ಕಾವೇರುತ್ತಿದೆ. ಫ್ಯಾಮಿಲಿಯನ್ನು ಮಿಸ್ ಮಾಡಿಕೊಂಡ ಎಲ್ಲ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಒಂದು ಸರ್ಪ್ರೈಸ್ ನೀಡಿದ್ದಾರೆ.
ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ‘ಬಿಗ್ ಬಾಸ್ ಕನ್ನಡ ಸೀಸನ್ 10’ (Bigg Boss Kannada) ರಿಯಾಲಿಟಿ ಶೋ ಈಗ ಕೌತುಕದ ಹಂತ ತಲುಪಿದೆ. ಪೈಪೋಟಿಯ ಕಾವು ಜೋರಾಗಿದೆ. ಕಳೆದ ವಾರಗಳಲ್ಲಿ ಮಾತಿನ ಚಕಮಕಿ ಹೆಚ್ಚಾಗಿತ್ತು. ಆದರೆ ಈ ವಾರ ದೊಡ್ಮನೆಯ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಅದಕ್ಕಾಗಿ ಕಿಚ್ಚ ಸುದೀಪ್ (Kichcha Sudeep) ಅವರು ತಮ್ಮ ಕೈಯಾರೆ ಅಡುಗೆ ಮಾಡಿ ಕಳುಹಿಸಿದ್ದಾರೆ. ಅದರ ಜೊತೆಗೆ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ. ಕಿಚ್ಚನ ಕೈ ರುಚಿ ಮತ್ತು ಪ್ರೀತಿಯ ಪತ್ರ ಸಿಕ್ಕಿದ್ದಕ್ಕೆ ಟ್ರೋಫಿ ಗೆದ್ದಷ್ಟೇ ಖುಷಿಪಟ್ಟಿದ್ದಾರೆ ಬಿಗ್ ಬಾಸ್ (BBK 10) ಸ್ಪರ್ಧಿಗಳು. ಈ ಎಪಿಸೋಡ್ ಡಿಸೆಂಬರ್ 15ರ ರಾತ್ರಿ 9.30ಕ್ಕೆ ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ 24 ಗಂಟೆಯೂ ಲೈವ್ ನೋಡಬಹುದು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos