ಭೂಮಿಗೆ ಸೂರ್ಯನ‌ ಮೊದಲ ಛಾಯಾಚಿತ್ರ ರವಾನೆ- ಮಣಿಪಾಲದ ಮಾಹೆ ಸಂಸ್ಥೆಯ ಪಾತ್ರ ದೊಡ್ಡದು, ಇಲ್ಲಿದೆ ವಿಡಿಯೋ

ಭೂಮಿಗೆ ಸೂರ್ಯನ‌ ಮೊದಲ ಛಾಯಾಚಿತ್ರ ರವಾನೆ- ಮಣಿಪಾಲದ ಮಾಹೆ ಸಂಸ್ಥೆಯ ಪಾತ್ರ ದೊಡ್ಡದು, ಇಲ್ಲಿದೆ ವಿಡಿಯೋ

ಪ್ರಜ್ವಲ್ ಅಮೀನ್​, ಉಡುಪಿ
| Updated By: ಸಾಧು ಶ್ರೀನಾಥ್​

Updated on: Dec 15, 2023 | 2:26 PM

ಆದಿತ್ಯ ಎಲ್ 1 ಕಳುಹಿಸಿದ ಮೊದಲ ಸೂರ್ಯನ ಛಾಯಾಚಿತ್ರ ಬೆನ್ನಲ್ಲೇ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉಪಗ್ರಹದ ಸೂಟ್ ಆಪರೇಷನ್ ವಿಜ್ಞಾನಿ, ಮಾಹೆ ಸಂಸ್ಥೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶ್ರೀಜಿತ್ ಪದ್ಹಿನ್ನತೇರಿ ತಮ್ಮ ಕಾರ್ಯ ಸಾಧನೆ ವಿವರಿಸಿದ್ದಾರೆ.

ಬಹುನಿರೀಕ್ಷಿತ ಆದಿತ್ಯ ಎಲ್ 1 ಉಪಗ್ರಹ ಇತ್ತೀಚೆಗೆ ಸೂರ್ಯನ‌ (Sun) ಮೊದಲ ಛಾಯಾಚಿತ್ರ (Photograph) ಭೂಮಿಗೆ ರವಾನಿಸಿದೆ. ಸೂರ್ಯನ‌ ಅಧ್ಯಯನಕ್ಕಾಗಿ ಕಳುಹಿಸಿದ ಭಾರತದ ಮೊದಲ ಅಂತರಿಕ್ಷ ವೀಕ್ಷಣಾಲಯ ಯಶಸ್ಸನ್ನ ಗಳಿಸಿದೆ.‌ ಈ‌ ಯಶಸ್ಸಿನ ಹಿಂದೆ ಉಡುಪಿಯ ಮಣಿಪಾಲದ (Manipal) ಮಾಹೆ (Mahe) ಸಂಸ್ಥೆಯ ಪಾತ್ರವೂ ದೊಡ್ಡದು. ಹೀಗಾಗಿ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಹೌದು, ಇಸ್ರೋ ಕಳುಹಿಸಿದ ಆದಿತ್ಯ ಎಲ್ 1 ಉಪಗ್ರಹದಲ್ಲಿರುವ ಸೋಲಾರ್ ಅಲ್ಟ್ರಾವಾಯಿಲೆಟ್ ಇಮೆಜಿಂಗ್ ಟೆಲಿಸ್ಕೋಪ್ ಮೂಲಕ ಸೂರ್ಯನ ಮೊದಲ ಛಾಯಾಚಿತ್ರವನ್ನ ಕಳುಹಿಸಲು ಉಪಗ್ರಹ ದಲ್ಲಿರುವ ಹಲವು ಟೆಲಿಸ್ಕೋಪ್ ಗಳಲ್ಲಿ (ನೇರ ಸರಳಾತೀತ ಚಿತ್ರಣ ದೂರದರ್ಶಕ) ಸೂಟ್ ನದ್ದು ಮುಖ್ಯ ಪಾತ್ರ.‌ ಈ ಸೂಟ್ ಅಭಿವೃದ್ಧಿ ಪಡಿಸುವಲ್ಲಿ ಹಲವು ಸಂಸ್ಥೆಗಳು ಕೈಜೋಡಿಸಿವೆ. ಮುಖ್ಯವಾಗಿ ಇಸ್ರೋ ಹಾಗೂ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಮಾಹೆ ಸಹ ಕೈಜೋಡಿಸಿದೆ.

ಹೀಗಾಗಿ ಆದಿತ್ಯ ಎಲ್ 1 ಕಳುಹಿಸಿದ ಮೊದಲ ಸೂರ್ಯನ ಛಾಯಾಚಿತ್ರ ಬೆನ್ನಲ್ಲೇ ಮಾಹೆ ಸಂಸ್ಥೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉಪಗ್ರಹದ ಸೂಟ್ ಆಪರೇಷನ್ ಮ್ಯಾನೇಜರ್ ಹಾಗೂ ಯೋಜನಾ ವಿಜ್ಞಾನಿಯೂ ಆಗಿರುವ ಮಾಹೆ ಸಂಸ್ಥೆಯ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಶ್ರೀಜಿತ್ ಪದ್ಹಿನ್ನತೇರಿ ಸಂತಸ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಮೊದಲ ಬಾರಿ ಈ ಮೂಲಕ ಸೂರ್ಯನನ್ನ ಪೂರ್ತಿಯಾಗಿ ವೀಕ್ಷಿಸಲು ಸಾಧ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.