Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಂಧ್ರದಲ್ಲಿಯೂ ಕೆಜಿಎಫ್ ಮಾದರಿ ಚಿನ್ನದ ನಿಕ್ಷೇಪ ಪತ್ತೆ, ಗ್ರಾಮಸ್ಥರು ನೆಲ ಅಗೆಯಲು ಆರಂಭಿಸಿದ್ದಾರೆ! ವಿಡಿಯೋ ನೋಡಿ

ಆಂಧ್ರದಲ್ಲಿಯೂ ಕೆಜಿಎಫ್ ಮಾದರಿ ಚಿನ್ನದ ನಿಕ್ಷೇಪ ಪತ್ತೆ, ಗ್ರಾಮಸ್ಥರು ನೆಲ ಅಗೆಯಲು ಆರಂಭಿಸಿದ್ದಾರೆ! ವಿಡಿಯೋ ನೋಡಿ

ಸಾಧು ಶ್ರೀನಾಥ್​
|

Updated on:Dec 15, 2023 | 2:02 PM

ಈಗಾಗಲೇ ತುಗ್ಗಲಿ ಮಂಡಲದ ಜೊನ್ನಗಿರಿಯಲ್ಲಿ ವಜ್ರಗಳು ಪತ್ತೆಯಾಗುತ್ತಿದ್ದರೆ, ಪಗಿದಾರಾಯಿಯ ಚಿನ್ನದ ಗಣಿಗಳಿಂದ ಚಿನ್ನ ತೆಗೆಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಆಸ್ಪರಿನಲ್ಲಿ ಚಿನ್ನದ ನಿಕ್ಷೇಪಗಳಿರುವುದನ್ನು ಜಿಎಸ್ ಐ ತಂಡ ಬಹಿರಂಗಪಡಿಸಿದ್ದು, ಗ್ರಾಮಸ್ಥರು ಸಂತಸದಲ್ಲಿ ನೆಲ ಅಗೆಯಲು ಆರಂಭಿಸಿದ್ದಾರೆ.

ಕರ್ನೂಲು ಜಿಲ್ಲೆಗೆ ಒಂದು ವಿಶೇಷತೆ ಇದೆ. ಇಲ್ಲಿನ ಬೆಳೆ ಗದ್ದೆಗಳಲ್ಲಿ ಬೆಳೆಗಳಿಗಿಂತ ವಜ್ರಗಳು ದೊರೆಯುವುದೇ ಹೆಚ್ಚು. ಇದರಿಂದ ರೈತರು ಬೆಳೆ ಬೆಳೆಯುವುದಕ್ಕಿಂತ ವಜ್ರದ ಹುಡುಕಾಟದಲ್ಲಿಯೇ ಹೆಚ್ಚು ಆಸಕ್ತಿ ತೋರುತ್ತಿರುತ್ತಾರೆ. ರೈತರೊಂದಿಗೆ ಕೃಷಿ ಕಾರ್ಮಿಕರು ಹಾಗೂ ಸುತ್ತಮುತ್ತಲಿನ ಜನರು ವಜ್ರ ಬೇಟೆ ಮುಂದುವರಿಸಿದ್ದಾರೆ. ಎಲ್ಲರಿಗೂ ಆಶ್ಚರ್ಯವಾಗುವಂತೆ, ಕೇಂದ್ರ ಭೂವಿಜ್ಞಾನ ತಜ್ಞರು ಚಿನ್ನ ಸಹ (Gold Mines) ಸಿಗುತ್ತದೆ ಎಂಬ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಜಿಎಸ್‌ಐ ಸಮೀಕ್ಷೆಯಲ್ಲಿ ಮಹತ್ವದ ಮಾಹಿತಿಗಳು ಬಹಿರಂಗ
ಸಆಸ್ಪರಿ ಮಂಡಲ ಚಿರುಮಾನು ದೊಡ್ಡಿ, ಆಸ್ಪರಿ ಅಟ್ಟೆಕಲ್ಲು ಸೇರಿದಂತೆ 5 ಗ್ರಾಮಗಳ ಗಡಿ ಭಾಗದ ಗ್ರಾಮಗಳನ್ನು ಜಿಎಸ್‌ಐ (GSI Survey) ಭೂಗರ್ಭ ಇಲಾಖೆ ತಂಡ ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಆಸ್ಪರಿ ಮಂಡಲದ ಹಲವು ಗ್ರಾಮಗಳಲ್ಲಿ ಚಿನ್ನದ ನಿಕ್ಷೇಪಗಳಿವೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ನಿನ್ನೆ ಗುರುವಾರ ವಿಜಯವಾಡದಲ್ಲಿ ನಡೆದ ಜಿಎಸ್‌ಐ ರಾಜ್ಯ ಮಂಡಳಿ ಸಭೆಯಲ್ಲಿ ಅಧಿಕಾರಿಗಳು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕರ್ನೂಲ್ ಜಿಲ್ಲೆಯ ಆಸ್ಪರಿ ಮಂಡಲದಲ್ಲಿ ಚಿನ್ನದ ನಿಕ್ಷೇಪಗಳಿವೆ. ಈ ನಿಕ್ಷೇಪಗಳ ಗಾತ್ರ, ಗುಣಮಟ್ಟ ಮತ್ತು ವಿಸ್ತೀರ್ಣ ಕುರಿತು ಚರ್ಚೆ ನಡೆಯಿತು. ಉನ್ನತ ಅಧಿಕಾರಿಗಳು ಜಿಎಸ್‌ಐ ತಂಡಕ್ಕೆ ಸಂಪೂರ್ಣ ವಿವರಣೆ ನೀಡುವಂತೆ ಸೂಚಿಸಿದರು. ಶೀಘ್ರದಲ್ಲೇ ಆಸ್ಪರಿ ಮಂಡಲಕ್ಕೆ ಜಿಎಸ್‌ಐ ಜಿಎಸ್‌ಐ ತಂಡಗಳು ಭೇಟಿ ನೀಡುವ ಸಾಧ್ಯತೆ ಇದೆ ಎಂದು ತೋರುತ್ತದೆ.

ಈಗಾಗಲೇ ತುಗ್ಗಲಿ ಮಂಡಲದ ಜೊನ್ನಗಿರಿಯಲ್ಲಿ ವಜ್ರಗಳು ಪತ್ತೆಯಾಗುತ್ತಿದ್ದರೆ, ಪಗಿದಾರಾಯಿಯ ಚಿನ್ನದ ಗಣಿಗಳಿಂದ ಚಿನ್ನ ತೆಗೆಯುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಆಸ್ಪರಿನಲ್ಲಿ ಚಿನ್ನದ ನಿಕ್ಷೇಪಗಳಿರುವುದನ್ನು ಜಿಎಸ್ ಐ ತಂಡ ಬಹಿರಂಗಪಡಿಸಿದ್ದು, ಗ್ರಾಮಸ್ಥರು ಸಂತಸದಲ್ಲಿ ನೆಲ ಅಗೆಯಲು ಆರಂಭಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 15, 2023 01:59 PM