Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಅಧಿವೇಶನ: ವಿಪಕ್ಷ ನಾಯಕ ಅಶೋಕ ಮತ್ತೊಮ್ಮೆ ಹೋಂ ವರ್ಕ್ ಮಾಡದೆ ಸಿಎಂ ಸಿದ್ದರಾಮಯ್ಯರನ್ನು ಕೆಣಕಿದರು!

ಬೆಳಗಾವಿ ಅಧಿವೇಶನ: ವಿಪಕ್ಷ ನಾಯಕ ಅಶೋಕ ಮತ್ತೊಮ್ಮೆ ಹೋಂ ವರ್ಕ್ ಮಾಡದೆ ಸಿಎಂ ಸಿದ್ದರಾಮಯ್ಯರನ್ನು ಕೆಣಕಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 15, 2023 | 2:47 PM

ತಾನು ಮಾತಾಡುವಾಗ ಮಧ್ಯದಲ್ಲಿ ಯಾರೂ ಮಾತಾಡಬಾರದು ಅಂತ ಸದನದಲ್ಲಿದ್ದ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳಕಳಿಯಿಂದ ಮನವಿ ಮಾಡುತ್ತಾರೆ. ತಮ್ಮ ಮಾತು ಮುಗಿದ ಮೇಲೆ ಮಾತಾಡಿ, ಯಾವುದೇ ಪ್ರಶ್ನೆ ಕೇಳಿದರೂ ಉತ್ತರಿಸಲು ಸಿದ್ಧ, ಸದನದಿಂದ ಎಲ್ಲೂ ಓಡಿಹೋಗಲ್ಲ ಎಂದು ಅವರು ಹೇಳುತ್ತಾರೆ.

ಬೆಳಗಾವಿ: ವಿಪಕ್ಷ ನಾಯಕ ಅರ ಅಶೋಕ (R Ashoka) ಕೇಳಿದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಹಿಂದಿನ ಸರ್ಕಾರದ ಹೇಳಿಕೆಯೊಂದನ್ನು ಓದಿ ನಿಮ್ಮ ಪ್ರಶ್ನೆಗೆ ಇದೇ ಉತ್ತರ ಅನ್ನುತ್ತಾರೆ. ಅವರ ಉತ್ತರದಿಂದ ಸಂತುಷ್ಟರಾಗದ ಅಶೋಕ, ಹಿಂದಿನ ಇತಿಹಾಸವನ್ನು ಕೆದಕಲಾರಂಭಿಸುತ್ತಾರೆ. ಮಾತಾಡುವಾಗ ಅವರು ಅಂಕಿ ಅಂಶಗಳನ್ನು (statistics) ಸಹ ಸದನಕ್ಕೆ ಸರಿಯಾಗಿ ನೀಡಲ್ಲ, ಸಿದ್ದರಾಮಯ್ಯರನ್ನು ಕುರಿತು ನೀವು 2014 ರಿಂದ 2018 ರವರೆಗೆ ಮುಖ್ಯಮಂತ್ರಿಗಳಾಗಿದ್ದಿರಿ ಅನ್ನುತ್ತಾರೆ. ಸಿದ್ದರಾಮಯ್ಯ ಕೇವಲ 4 ವರ್ಷಗಳ ಅವಧಿಗೆ ಸಿಎಂ ಆಗಿದ್ದರೇ? ಅಸಲಿಗೆ, ಸಿದ್ದರಾಮಯ್ಯ 2013 ರಿಂದ 2018 ವರೆಗಿನ ಪೂರ್ಣಾವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅಮೇಲೆ ಅಶೋಕ, ಕಾಂಗ್ರೆಸ್ ಸರಕಾರಗಳು ರಾಜ್ಯವನ್ನು 50 ವರ್ಷಗಳ ಕಾಲ ಆಳಿವೆ, ಅದರೆ ಬಿಜೆಪಿ ಸರ್ಕಾರಗಳು ಕೇವಲ 9 ವರ್ಷ ಮಾತ್ರ, ಹಾಗಾಗಿ ಅಭಿವೃದ್ಧಿ ಅಂತ ಹೇಳುತ್ತಾ ಮಾತು ಮುಂದುವರಿಸಿದಾಗ, ಸಿದ್ದರಾಮಯ್ಯ ಅವರಿಗೆ ರೇಗುತ್ತದೆ. ಯಾವ ಇತಿಹಾಸ ಹೇಳ್ತಾ ಇದ್ದೀರಿ, ಹೇಳಿದ್ದನ್ನೇ ಹೇಳ್ತೀರಲ್ಲ ಅನ್ನುತ್ತಾ ಸಭಾಧ್ಯಕ್ಷರ ಕಡೆ ತಿರುಗಿ, ತಾನು ಇವರ ಮಾತಿಗೆ ಪ್ರತಿಕ್ರಿಯೆ ನೀಡಲ್ಲ ಅನ್ನುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ