New Year 2024: ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ, ಅಲರ್ಟ್​ ಆದ ಪೊಲೀಸರು; ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನ್​

ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಮೋಜು ಮಸ್ತಿ ಜಾಸ್ತಿಯಾಗಿಯೇ ಇರುತ್ತದೆ. ಅದರಲ್ಲೂ ಬ್ರಿಗೇಡ್​ ರೋಡ್​, ಎಂಜಿ ರೋಡ್​ಗಳಲ್ಲಿ ಇದರ ಎಫೆಕ್ಟ್​ ತುಸು ಹೆಚ್ಚು ಇರುತ್ತದೆ. ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು(Bangalore City Police) ಅಲರ್ಟ್ ಆಗಿದ್ದಾರೆ.  ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನಿಂಗ್​ ನಡೆಸಿದ್ದಾರೆ.

New Year 2024: ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ, ಅಲರ್ಟ್​ ಆದ ಪೊಲೀಸರು; ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನ್​
ಹೊಸ ವರ್ಷ ಆಚರಣೆಗೆ ಬೆಂಗಳೂರಿನಲ್ಲಿ ಪೊಲೀಸ್​ ಬಂದೋಬಸ್ತ್​
Follow us
| Updated By: Digi Tech Desk

Updated on:Dec 20, 2023 | 3:34 PM

ಬೆಂಗಳೂರು, ಡಿ.15: ಇನ್ನೇನು ಹೊಸ ವರ್ಷ(New Year) ಸಮೀಪಿಸುತ್ತಿದೆ. ಈ ಹಿನ್ನಲೆ ಎಚ್ಚೆತ್ತ ಬೆಂಗಳೂರು ನಗರ ಪೊಲೀಸರು(Bangalore City Police) ಅಲರ್ಟ್ ಆಗಿದ್ದಾರೆ.  ಅಹಿತಕರ ಘಟನೆ ನಡೆಯದಂತೆ ಪ್ಲ್ಯಾನಿಂಗ್​ ನಡೆಸಿದ್ದಾರೆ. ನಗರದ ಬ್ರಿಗೇಡ್ ರೋಡ್(Brigade Road)​, ಎಂಜಿ ರಸ್ತೆ(MG Road)ಯಲ್ಲಿ ಹೊಸ ಅಲೆಯ ವರ್ಷಾಚರಣೆಗೆ ಹೆಚ್ಚಿನ ಜನ ಸೇರುತ್ತಾರೆ. ಹಾಗಾಗಿ ಪ್ರತಿ ಬಾರಿ ಒಂದಷ್ಟು ಗೊಂದಲ ಮತ್ತು ಅಹಿತಕರ ಘಟನೆ ನಡೆಯುತ್ತದೆ. ಈ ಬಾರಿ ಆ ರೀತಿ ಆಗದಂತೆ ಕೇಂದ್ರ ವಿಭಾಗ ಪೊಲೀಸರು, ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಸಿದ್ಧತೆ

ಇನ್ನು ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಮೋಜು ಮಸ್ತಿ ಜಾಸ್ತಿಯಾಗಿಯೇ ಇರುತ್ತದೆ. ಅದರಲ್ಲೂ ಬ್ರಿಗೇಡ್​ ರೋಡ್​, ಎಂಜಿ ರೋಡ್​ಗಳಲ್ಲಿ ಇದರ ಎಫೆಕ್ಟ್​ ತುಸು ಹೆಚ್ಚು ಇರುತ್ತದೆ. ಈ ಹಿನ್ನಲೆ ಪ್ರತಿಯೊಬ್ಬರಿಗೂ ಪ್ರತ್ಯೇಕ ಸಾಲು ಮಾಡಲು ಚಿಂತನೆ ನಡೆಸಲಾಗಿದೆ. ಪುರುಷರು, ಮಹಿಳೆಯರು, ಪ್ರೇಮಿಗಳು ಹಾಗೂ ವೃದ್ಧರಿಗೆ ಪ್ರತ್ಯೇಕ‌ ಸಾಲು ಮಾಡಿ, ಅದೇ ಸಾಲಿನಲ್ಲಿ ಸಂಚರಿಸಲು ಮಾತ್ರ ಅವಕಾಶ ನೀಡುವ ಬಗ್ಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ನೇತೃತ್ವದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಹೊಸ ವರ್ಷ ಹೊಸ್ತಿಲಲ್ಲಿ ಹೆಚ್ಚಾದ ಡ್ರಗ್ಸ್ ದಂಧೆ; ಪೊಲೀಸ್ ಆಯುಕ್ತರಿಂದ ಸಿಟಿ ಪೊಲೀಸರಿಗೆ ಹೊಸ ಟಾಸ್ಕ್

ಹೊಸ ವರ್ಷಾಚರಣೆಗೆ ಬೆಂಗಳೂರಿನಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಮಾದಕ ಲೋಕ ಕೂಡ ಸಿದ್ಧವಾಗಿದೆ. ಈ ಹಿನ್ನಲೆ ಬೆಂಗಳೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್​ಗೆ ಭಾರೀ ಬೇಡಿಕೆ ಇರುವುದರಿಂದ ನಗರಕ್ಕೆ 100 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಸಾಗಿಸಲು ಏಳೆಂಟು ಗುಂಪುಗಳಿಂದ ಪ್ಲ್ಯಾನ್ ಮಾಡಲಾಗಿದೆ ಎಂಬ ಮಾಹಿತಿಯು ಪೊಲೀಸರಿಗೆ ಸಿಕ್ಕಿದ್ದು, ಈಗಾಗಲೇ ಪೊಲೀಸರು ಅಲರ್ಟ್​ ಆಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:11 pm, Fri, 15 December 23