ಸಿಮ್ ಕಾರ್ಡ್‌ ಕುರಿತು ಸರ್ಕಾರದಿಂದ ಮಹತ್ವದ ನಿರ್ಧಾರ: ಹೊಸ ವರ್ಷದಿಂದ ಹೊಸ ನಿಯಮ

Sim Card KYC New Rules: ಬಹಳ ದಿನಗಳಿಂದ ನಡೆಯುತ್ತಿದ್ದ ಪೇಪರ್ ಆಧಾರಿತ ಕೆವೈಸಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ. ದೂರಸಂಪರ್ಕ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಈ ನಿಯಮವು ಹೊಸ ವರ್ಷದ ಮೊದಲ ದಿನದಿಂದ ಅಂದರೆ ಜನವರಿ 1, 2024 ರಿಂದ ಜಾರಿಗೆ ಬರಲಿದೆ.

ಸಿಮ್ ಕಾರ್ಡ್‌ ಕುರಿತು ಸರ್ಕಾರದಿಂದ ಮಹತ್ವದ ನಿರ್ಧಾರ: ಹೊಸ ವರ್ಷದಿಂದ ಹೊಸ ನಿಯಮ
Sim Card
Follow us
Vinay Bhat
|

Updated on: Dec 08, 2023 | 2:06 PM

ಟೆಲಿಕಾಂ ವಲಯದಲ್ಲಿ, ಮೊಬೈಲ್ ಬಳಕೆದಾರರನ್ನು ನೋಂದಾಯಿಸಲು ಬಹಳ ಸಮಯದಿಂದ ನಡೆಯುತ್ತಿದ್ದ ಪೇಪರ್ ಆಧಾರಿತ ಕೆವೈಸಿ ಪ್ರಕ್ರಿಯೆ ಇದೀಗ ಸ್ಥಗಿತಗೊಳ್ಳಲಿದೆ. ದೂರಸಂಪರ್ಕ ಇಲಾಖೆ (DoT) ತನ್ನ ಪ್ರಕಟಣೆಯಲ್ಲಿ ನೂತನ ನಿಯಮವನ್ನು ಜಾರಿಗೆ ತಂದಿದ್ದು, ಇದನ್ನು ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೋಡಾಫೋನ್ ಐಡಿಯಾ ದಂತಹ ಟೆಲಿಕಾಂ ಕಂಪನಿಗಳು ಸ್ವಾಗತಿಸಿವೆ. ಈ ನಿಯಮವು ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1, 2024 ರಿಂದ ಜಾರಿಗೆ ಬರಲಿದೆ. ಟೆಲಿಕಾಂ ಕಂಪನಿಗಳ ಪರಿಶೀಲನೆ ಪ್ರಕ್ರಿಯೆಯ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಸಿಮ್ ಕಾರ್ಡ್ ವಂಚನೆಯನ್ನು ತಡೆಯಲು ಡಾಟ್ ಡಿಜಿಟಲ್ KYC ಪ್ರಕ್ರಿಯೆಯನ್ನು ಜಾರಿಗೆ ತರಲಿದೆ.

ಸದ್ಯ ಅಸ್ತಿತ್ವದಲ್ಲಿರುವ ಪರಿಶೀಲನಾ ವಿಧಾನ ಎಂದರೆ, ಪೇಪರ್ ಆಧಾರಿತ ನೋಂದಣಿಗೆ ಬಳಕೆದಾರರು ಫಾರ್ಮ್ ಅನ್ನು ಭರ್ತಿ ಮಾಡುವುದು, ಫೋಟೋವನ್ನು ಲಗತ್ತಿಸುವುದು ಮತ್ತು ವಿವಿಧ ಗುರುತಿನ ದಾಖಲೆಗಳನ್ನು ನೀಡಬೇಕಿದೆ. ಈಗ ಈ ಹಳೆಯ ಪ್ರಕ್ರಿಯೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದ್ದು, ಮೊಬೈಲ್ ಬಳಕೆದಾರರ ನೋಂದಣಿಗಾಗಿ ಡಿಜಿಟಲ್ KYC ಪ್ರಕ್ರಿಯೆಯನ್ನು ತರಲಾಗುತ್ತಿದೆ.

Google Gemini AI: ಗೂಗಲ್​ನಿಂದ ಅತ್ಯಂತ ಶಕ್ತಿಶಾಲಿ ಜೆಮಿನಿ AI ಬಿಡುಗಡೆ: ಚಾಟ್‌ಜಿಪಿಟಿಗೆ ಶುರುವಾಯಿತು ನಡುಕ

ಇದನ್ನೂ ಓದಿ
Image
ಫ್ಲಿಪ್​ಕಾರ್ಟ್​ನಿಂದ ಬಿಗ್ ಇಯರ್ ಎಂಡ್ ಸೇಲ್ ಘೋಷಣೆ: ಫೋನುಗಳಿಗೆ ಊಹಿಸಲಾಗದ
Image
ಭಾರತದಲ್ಲಿ ಇದೀಗ 6,999 ರೂ. ಗೆ ಐಫೋನ್​ನಂತಹ ಸ್ಮಾರ್ಟ್​ಫೋನ್ ಖರೀದಿಗೆ ಲಭ್ಯ
Image
84 ದಿನಗಳ ವ್ಯಾಲಿಡಿಟಿ, ಅನಿಯಮಿತ 5G ಡೇಟ: ಜಿಯೋದಿಂದ ಹೊಸ ಯೋಜನೆ ಬಿಡುಗಡೆ
Image
100W ಫಾಸ್ಟ್ ಚಾರ್ಜರ್: ಧೂಳೆಬ್ಬಿಸಲು ಬಂತು ರಿಯಲ್ ಮಿ ಜಿಟಿ 5 ಪ್ರೊ: ಬೆಲೆ?

“ಪ್ರಸ್ತುತ ಜಾರಿಯಲ್ಲಿರುವ KYC ಪ್ರಕ್ರಿಯೆಯಲ್ಲಿನ ವಿವಿಧ ಬದಲಾವಣೆಗಳು ಮತ್ತು ಪರಿಷ್ಕರಣೆಗಳನ್ನು ಪರಿಗಣಿಸಿ, 09.08.2012 ರಿಂದ ಕಾರ್ಯಾಚರಣೆಯಲ್ಲಿರುವ ಕಾಗದ ಆಧಾರಿತ ಪ್ರಕ್ರಿಯೆಯನ್ನು ಸ್ಕ್ರ್ಯಾಪ್ ಮಾಡಲು ನಾವು ನಿರ್ಧರಿಸಿದ್ದೇವೆ. ಹೊಸ ನಿಯಮಗಳು 1.1.2024 ರಿಂದ ಜಾರಿಗೆ ಬರಲಿವೆ” ಎಂದು DOT ಹೊರಡಿಸಿದ ಅಧಿಸೂಚನೆ ತಿಳಿಸಿದೆ. ಈ ಬದಲಾವಣೆಯು ಟೆಲಿಕಾಂ ಕಂಪನಿಗಳಿಗೆ ಗ್ರಾಹಕರ ಸ್ವಾಧೀನ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಮೋಸದ ಚಟುವಟಿಕೆಗಳನ್ನು ತಡೆಯುವ ಪ್ರಯತ್ನಗಳಲ್ಲಿ ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಕಾಗದ ಆಧಾರಿತ KYC ಅನ್ನು ರದ್ದುಗೊಳಿಸಿ ಮೊಬೈಲ್ ಬಳಕೆದಾರರ ದಾಖಲಾತಿಗಾಗಿ ಡಿಜಿಟಲ್‌ಗೆ ಹೋಗುವ ನಿರ್ಧಾರವು ಟೆಲಿಕಾಂ ಕಂಪನಿಗಳಿಗೆ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ. ಸಿಮ್ ಕಾರ್ಡ್ ವಂಚನೆಯನ್ನು ಪರಿಶೀಲಿಸಲು ಇದು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಎಲ್ಲಾ ಟೆಲಿಕಾಂ ಕಂಪನಿಗಳು ಸಿಮ್ ಕಾರ್ಡ್ ಸಂಬಂಧಿತ ವಂಚನೆಗಳ ಬಗ್ಗೆ ತಮ್ಮ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ಡಾಟ್​ನ ಈ ನಿರ್ಧಾರದಿಂದ ಆ ಕಾರ್ಯ ಸುಲಭವಾಗಲಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ