Emergency Alert: ಟೆಲಿಕಾಂ ಕಂಪನಿಯಿಂದ ಬಳಕೆದಾರರಿಗೆ ಫ್ಲ್ಯಾಶ್ ಎಚ್ಚರಿಕೆ ಸಂದೇಶ
Telecom Dept Sends Flash Alerts To Users: ಇಂದು ಅನೇಕ ಬಳಕೆದಾರರು ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ. ಭಾರತೀಯ ಎಮರ್ಜೆನ್ಸಿ ಅಲರ್ಟ್ ಸಿಸ್ಟಂನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಮೆಸೇಜ್ ಕಳುಹಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ಒದಗಿಸುವುದು ಮುಖ್ಯ ಉದ್ದೇಶ.
ಟೆಲಿಕಾಂ ಕಂಪನಿಗಳು (Telecom Company) ಬಳಕೆದಾರರಿಗೆ ಫ್ಲ್ಯಾಶ್ ಎಚ್ಚರಿಕೆಗಳನ್ನು ಕಳುಹಿಸುತ್ತದೆ. ಇಂದು ಅನೇಕ ಬಳಕೆದಾರರು ತುರ್ತು ಎಚ್ಚರಿಕೆಯನ್ನು ಸ್ವೀಕರಿಸಿದ್ದಾರೆ. “ಇದು ತುರ್ತು ಎಚ್ಚರಿಕೆ. ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್‌ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ನೀವು ಯಾವುದೇ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ. ಪ್ಯಾನ್ ಇಂಡಿಯಾ ಎಮರ್ಜೆನ್ಸಿ ಸಿಸ್ಟಂ ಅನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ,”. ಈ ರೀತಿಯ ಫ್ಲ್ಯಾಶ್ ಎಲ್ಲರಿಗೂ ಬರುತ್ತಿದೆ.
ಎಚ್ಚರಿಕೆಯನ್ನು ಸ್ವೀಕರಿಸಿದ ಕೆಲವು ಬಳಕೆದಾರರು ತಮ್ಮ ಫೋನ್‌ನಲ್ಲಿ ಜೋರಾಗಿ ಬೀಪ್ ಅನ್ನು ಕೇಳಿದ್ದಾರೆ ಮತ್ತು ಅವರ ಡಿಸ್ ಪ್ಲೇ ಮೇಲೆ ಪಾಪ್-ಅಪ್ ಸ್ವೀಕರಿಸಿದ್ದಾರೆ. ಇಂದು ಬೆಳಿಗ್ಗೆ 11:30 ಕ್ಕೆ ಎಲ್ಲಾ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಂದೇಶವು ಬಂದಿವೆ.
Dolby Vision: ಡಾಲ್ಬಿ ವಿಷನ್ ಎಂದರೇನು?: ವಿಡಿಯೋಕ್ಕೆ ಇದನ್ನು ಬಳಸಿದ್ರೆ ಏನು ಬದಲಾವಣೆ ಆಗುತ್ತದೆ?
ಭಾರತೀಯ ಎಮರ್ಜೆನ್ಸಿ ಅಲರ್ಟ್ ಸಿಸ್ಟಂನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಈ ಮೆಸೇಜ್ ಕಳುಹಿಸಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆಗಳನ್ನು ಒದಗಿಸುವುದು ಮುಖ್ಯ ಉದ್ದೇಶ.
ಕೆಲವು ತಿಂಗಳ ಹಿಂದೆ, ಭಾರತ ಸರ್ಕಾರ ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ ಪರೀಕ್ಷಾ ಫ್ಲಾಶ್ ಕಳುಹಿಸುವ ಮೂಲಕ ತನ್ನ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಿತ್ತು. ಬಳಕೆದಾರರು ತಮ್ಮ ಫೋನ್‌ಗಳಲ್ಲಿ ‘ತುರ್ತು ಎಚ್ಚರಿಕೆ’ ಫ್ಲ್ಯಾಷ್‌ನೊಂದಿಗೆ ರಿಸೀವ್ ಮಾಡಿದ್ದರು. ಮೊಬೈಲ್ ಆಪರೇಟರ್‌ಗಳು ಮತ್ತು ಸೆಲ್ ಬ್ರಾಡ್‌ಕಾಸ್ಟ್ ಸಿಸ್ಟಮ್‌ಗಳು ತುರ್ತು ಎಚ್ಚರಿಕೆ ಮೆಸೇಜ್ ಅನ್ನು ವಿವಿಧ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಪರೀಕ್ಷೆಗಳನ್ನು ನಡೆಸುತ್ತದೆ ಎಂದು ದೂರಸಂಪರ್ಕ ಇಲಾಖೆಯ ಹೇಳಿದೆ.
ಭಾರತದಲ್ಲಿನ ಆಂಡ್ರಾಯ್ಡ್ ಫೋನ್ ಬಳಕೆದಾರರು ಸೆಪ್ಟೆಂಬರ್ 15, ಜುಲೈ 20 ಮತ್ತು ಆಗಸ್ಟ್ 17 ರಂದು ಇದೇ ರೀತಿಯ ಪರೀಕ್ಷಾ ಎಚ್ಚರಿಕೆಗಳನ್ನು ಸ್ವೀಕರಿಸಿದ್ದರು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Tue, 10 October 23