Flipkart Big Billion Days sale: ಇ-ಕಾಮರ್ಸ್ ತಾಣಗಳಲ್ಲಿ ಹಬ್ಬದ ಮೇಳ: 20,000 ರೂ. ಒಳಗೆ ಸಿಗುತ್ತಿದೆ ಈ ಧಮಾಕ ಸ್ಮಾರ್ಟ್​ಫೋನ್ಸ್

2023 Best Smartphone Under Rs. 20,000: ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಅತಿ ಕಡಿಮೆ ಬೆಲೆಗೆ ಹಲವಾರಿ ಅತ್ಯುತ್ತಮ ಫೋನುಗಳು ಮಾರಾಟ ಕಾಣುತ್ತಿದೆ. ನಾವು ನಿಮಗೆ ಈ ಹಬ್ಬದ ಸಮಯದಲ್ಲಿ 20,000 ರೂ. ಒಳಗೆ ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್​ಗಳ ಬಗ್ಗೆ ತಿಳಿಸಿಕೊಡುತ್ತೇವೆ.

Flipkart Big Billion Days sale: ಇ-ಕಾಮರ್ಸ್ ತಾಣಗಳಲ್ಲಿ ಹಬ್ಬದ ಮೇಳ: 20,000 ರೂ. ಒಳಗೆ ಸಿಗುತ್ತಿದೆ ಈ ಧಮಾಕ ಸ್ಮಾರ್ಟ್​ಫೋನ್ಸ್
Smartphones
Follow us
Vinay Bhat
|

Updated on: Oct 09, 2023 | 1:49 PM

ಮಾರುಕಟ್ಟೆಯಲ್ಲಿ ಇಂದು ದಿನಕ್ಕೊಂದರಂತೆ ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗುತ್ತಿರುವ ಕಾರಣ ಯಾವುದನ್ನು ಖರೀದಿಸಬೇಕು ಎಂಬ ಗೊಂದಲ ಹೆಚ್ಚಿನವರಲ್ಲಿ ಉಂಟಾಗುತ್ತದೆ. ಅದೇನೇ ಇದ್ದರೂ ಸದ್ಯ ಸ್ಮಾರ್ಟ್​ಫೋನ್​ಗಳ ಮಾರಾಟ ಮಾತ್ರ ಭರ್ಜರಿ ಆಗಿ ನಡೆಯುತ್ತಿದೆ. ಅದರಲ್ಲೂ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ (Flipkart Big Billion Days sale) ಮಾರಾಟದ ಸಮಯದಲ್ಲಿ ಅತಿ ಕಡಿಮೆ ಬೆಲೆಗೆ ಹಲವಾರು ಅತ್ಯುತ್ತಮ ಫೋನುಗಳು ಸೇಲ್ ಕಾಣುತ್ತಿದೆ. ನಾವು ನಿಮಗೆ ಈ ಹಬ್ಬದ ಸಮಯದಲ್ಲಿ 20,000 ರೂ. ಒಳಗೆ ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್​ಫೋನ್​ಗಳ ಬಗ್ಗೆ ತಿಳಿಸಿಕೊಡುತ್ತೇವೆ.

ಮೋಟೋ ಜಿ 54

ಮೋಟೋರೊಲಾ ಕಂಪನಿಯ ಮೋಟೋ g54 5G ನಂಬಲಾಗದ ಬೆಲೆಗೆ ಲಭ್ಯವಿದೆ. ಇದು 15 ಸಾವಿರಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. 12GB RAM ಮತ್ತು 256 GB ಸಂಗ್ರಹಣೆ ಹೊಂದಿರುವ ಈ ಫೋನ್​ನಲ್ಲಿ ಗೇಮಿಂಗ್‌ಗಾಗಿ ಅತ್ಯಂತ ಶಕ್ತಿಶಾಲಿ ಮೀಡಿಯಾಟೆಕ್ ಡೈಮೆನ್ಸಿಟಿ 7020 ಆಕ್ಟಾ-ಕೋರ್ ಪ್ರೊಸೆಸರ್‌ ಅಳವಡಿಸಲಾಗಿದೆ. 6.5-ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ ಈಗ 12,999 ರೂ. ಗೆ ಸೇಲ್ ಆಗುತ್ತಿದೆ. 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. TurboPower 33W ಚಾರ್ಜರ್‌ಗೆ 6,000mAh ಬ್ಯಾಟರಿ ಇದೆ.

ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಸೂಪರ್: ಅಮೆಜಾನ್ ಸೇಲ್​ನಲ್ಲಿರುವ 30,000 ರೂ. ಒಳಗಿನ ಸ್ಮಾರ್ಟ್​ಫೋನ್ಸ್

ಇದನ್ನೂ ಓದಿ
Image
ಡಾಲ್ಬಿ ವಿಷನ್ ಎಂದರೇನು?: ಇದನ್ನು ಬಳಸಿದ್ರೆ ಏನು ಬದಲಾವಣೆ ಆಗುತ್ತೇ?
Image
ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Image
ಆಫರ್​ಗಳ ಸುರಿಮಳೆ: ಲೈವ್ ಆಗಿದೆ ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್
Image
ಧೂಳೆಬ್ಬಿಸುತ್ತಿರುವ ಕೆಂಪು ಬಣ್ಣದ ಒನ್​ಪ್ಲಸ್ 11R 5G ಮಾರಾಟ ಆರಂಭ

ಒನ್​ಪ್ಲಸ್ ನಾರ್ಡ್ CE 3 ಲೈಟ್

ಇದು 6.72-ಇಂಚಿನ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ನೀಡುತ್ತದೆ. ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 5,000mAh ಬ್ಯಾಟರಿ, 108MP ಕ್ಯಾಮೆರಾ, ಒನ್​ಪ್ಲಸ್​ನ 2 ವರ್ಷಗಳ OS ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುತ್ತದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಇದರ 8GB+128GB ರೂಪಾಂತರ 19,999 ರೂ. ಗೆ ಲಭ್ಯವಿದೆ.

ರೆಡ್ಮಿ ನೋಟ್ 12 5G

ಈ ಫೋನಿನ 4GB RAM + 128GB ಸಂಗ್ರಹಣೆಯು ಕೇವಲ ರೂ. 15,999 ಕ್ಕೆ ಲಭ್ಯವಾಗುತ್ತಿದೆ. ಅಂತೆಯೆ 6GB RAM + 128 GB ಬೆಲೆ 17,499 ರೂ. ಆಗಿದೆ. ಇದು 6.67-ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರವನ್ನು ನೀಡುತ್ತದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 4 Gen 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 5G ಮತ್ತು Wi-Fi ಬೆಂಬಲದೊಂದಿಗೆ, 48MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ. 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.

ರಿಯಲ್ ಮಿ 11 5G

ರಿಯಲ್ ಮಿ 11 5G ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ 8GB + 256GB ರೂ. 19,999 ಮತ್ತು 8GB + 128GB ಆಯ್ಕೆಯು 18,999 ರೂ. ಗೆ ಸೇಲ್ ಆಗುತ್ತಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.72-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್ ನೀಡಲಾಗಿದೆ. 108MP ಪ್ರಾಥಮಿಕ ಕ್ಯಾಮೆರಾ ಇದರಲ್ಲಿದ್ದು, ಆಕರ್ಷಕವಾಗಿದೆ. 5000mAh ಬ್ಯಾಟರಿಯನ್ನು ಹೊಂದಿದೆ. 67W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ