ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಸೂಪರ್: ಅಮೆಜಾನ್ ಸೇಲ್​ನಲ್ಲಿರುವ 30,000 ರೂ. ಒಳಗಿನ ಸ್ಮಾರ್ಟ್​ಫೋನ್ಸ್

Amazon Great Indian Festival 2023: ನೀವು ಸ್ಮಾರ್ಟ್‌ಫೋನ್ ಅಪ್‌ಗ್ರೇಡ್‌ಗಾಗಿ ಹುಡುಕುತ್ತಿರುವವರಾಗಿದ್ದರೆ, ಅಮೆಜಾನ್​ನಲ್ಲಿ ಆಕರ್ಷಕ ಆಯ್ಕೆಗಳಿವೆ. ಇಲ್ಲಿದೆ ನೋಡಿ ಅಮೆಜಾನ್ ಸೇಲ್ 2023 ರ ಸಮಯದಲ್ಲಿ ನೀವು 30,000 ರೂ. ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್​ಗಳು.

ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಸೂಪರ್: ಅಮೆಜಾನ್ ಸೇಲ್​ನಲ್ಲಿರುವ 30,000 ರೂ. ಒಳಗಿನ ಸ್ಮಾರ್ಟ್​ಫೋನ್ಸ್
Amazon Sale
Follow us
Vinay Bhat
|

Updated on: Oct 07, 2023 | 3:27 PM

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Amazon Great Indian Festival) 2023 ಇಂದಿನಿಂದ ಪ್ರೈಮ್ ಸದಸ್ಯರಿಗೆ ಲೈವ್ ಆಗಿದೆ. ಚಂದಾದಾರಿಕೆ ಹೊಂದಿರುವವರು ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು. ಪ್ರೈಮ್ ಸದಸ್ಯರಲ್ಲದವರಿಗೆ, ಅಮೆಜಾನ್ ಮಾರಾಟವು ಅಕ್ಟೋಬರ್ 8 ರಂದು ಪ್ರಾರಂಭವಾಗುತ್ತದೆ. ನೀವು ಸ್ಮಾರ್ಟ್‌ಫೋನ್ ಅಪ್‌ಗ್ರೇಡ್‌ಗಾಗಿ ಹುಡುಕುತ್ತಿರುವವರಾಗಿದ್ದರೆ, ಅಮೆಜಾನ್​ನಲ್ಲಿ ಆಕರ್ಷಕ ಆಯ್ಕೆಗಳಿವೆ. ಇಲ್ಲಿದೆ ನೋಡಿ ಅಮೆಜಾನ್ ಸೇಲ್ 2023 ರ ಸಮಯದಲ್ಲಿ ನೀವು 30,000 ರೂ. ಒಳಗೆ ಖರೀದಿಸಬಹುದಾದ ಟಾಪ್ 5 ಸ್ಮಾರ್ಟ್‌ಫೋನ್​ಗಳು.

ಐಕ್ಯೂ ನಿಯೋ 7: ಈ ಸ್ಮಾರ್ಟ್‌ಫೋನ್ 6.78-ಇಂಚಿನ AMOLED ಡಿಸ್‌ಪ್ಲೇ, 120Hz ರಿಫ್ರೆಶ್ ದರದೊಂದಿಗೆ ಹೊಂದಿದೆ. ಇದು ಡೈಮೆನ್ಸಿಟಿ 8200 ಜೊತೆಗೆ 12GB RAM ಮತ್ತು 256GB ವರೆಗಿನ ಸಂಗ್ರಹಣೆಯಿಂದ ಕೂಡಿದೆ. 64MP OIS ಕ್ಯಾಮೆರಾವನ್ನು ಒಳಗೊಂಡಿರುವ ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ. 20W ಫ್ಲ್ಯಾಶ್‌ಚಾರ್ಜ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. ಈ ಸ್ಮಾರ್ಟ್‌ಫೋನ್​ನ ಮೂಲಬೆಲೆ 34999 ರೂ. ಆಗಿದ್ದರೂ ಅಮೆಜಾನ್ ಸೇಲ್ 2023 ರ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ನೀವು ಇದನ್ನು ರೂ. 25999 ಗೆ ಪಡೆಯಬಹುದು.

ಕ್ಯಾಮೆರಾ ಪ್ರಿಯರು ಶಾಕ್: ಭಾರತದಲ್ಲಿ ಗೂಗಲ್ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೋನ್ ಬಿಡುಗಡೆ

ಇದನ್ನೂ ಓದಿ
Image
ಒಪ್ಪೋದಿಂದ ಮಹತ್ವದ ಘೋಷಣೆ: ಅ. 12ಕ್ಕೆ ಬಿಡುಗಡೆ ಆಗುತ್ತೆ ಹೊಸ ಮಡಚುವ ​ಫೋನ್
Image
ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್​ಫೋನ್ ಬಿಡುಗಡೆ
Image
ಪ್ರೈಮ್ ಚಂದಾದಾರರಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಲೈವ್
Image
ಅಭಿಮಾನಿಗಳ ನಿದ್ದೆ ಕದ್ದಿದ್ದ ಕೆಂಪು ಬಣ್ಣದ ಒನ್​ಪ್ಲಸ್ 11R 5G ಬಿಡುಗಡೆ

ಸ್ಯಾಮ್​ಸಂಗ್ ಗ್ಯಾಲಕ್ಸಿ S20 FE: ಈ ಸ್ಮಾರ್ಟ್‌ಫೋನ್ 6.5-ಇಂಚಿನ ಸೂಪರ್ AMOLED ಡಿಸ್‌ಪ್ಲೇ 120Hz ರಿಫ್ರೆಶ್ ದರ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 856 ಪ್ರೊಸೆಸರ್‌ನೊಂದಿಗೆ ರನ್ ಆಗುತ್ತದೆ. 12MP ಪ್ರಾಥಮಿಕ ಶೂಟರ್, 12MP ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 8MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್​ಫೋನ್ 4,500mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಮೂಲಬೆಲೆ 74999. ಆದರೆ ಅಮೆಜಾನ್ ಮಾರಾಟದ ಸಮಯದಲ್ಲಿ, ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ನೀವು ಇದನ್ನು ರೂ. 24,999 ಗೆ ಖರೀದಿಸಬಹುದು.

ಟೆಕ್ನೋ ಕ್ಯಾಮನ್ 20 ಪ್ರೀಮಿಯರ್: ಇದು 6.67-ಇಂಚಿನ 10-ಬಿಟ್ AMOLED ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 8050 ಪ್ರೊಸೆಸರ್ ಜೊತೆಗೆ 8GB LPDDR4x RAM ಮತ್ತು 512GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇದು 108MP ಅಲ್ಟ್ರಾ-ವೈಡ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. 5000mAh ಬ್ಯಾಟರಿಯೊಂದಿಗೆ ಬೆಂಬಲಿತವಾಗಿದೆ ಇದು 45W ಫ್ಲ್ಯಾಷ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 ರಲ್ಲಿ ಈ ಫೋನ್ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ 27499 ರೂ. ಗೆ ಪಡೆಯಬಹುದು.

ಸ್ಯಾಮ್​ಸಂಗ್ ಗ್ಯಾಲಕ್ಸಿ A23: ಇದು 6.6-ಇಂಚಿನ FHD+ ಇನ್ಫಿನಿಟಿ-V ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಸಹ ಹೊಂದಿದೆ. 50 MP ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 8 MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 695 ಪ್ರೊಸೆಸರ್​ನಿಂದ ಚಾಲಿತವಾಗಿದೆ. ಈ ಫೋನನ್ನು ಅಮೆಜಾನ್​ನಲ್ಲಿ ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ 19999 ರೂ. ಗೆ ಖರೀದಿಸಬಹುದು.

ಹಾನರ್ 90: ಈ ಫೋನ್ 6.7-ಇಂಚಿನ ಕ್ವಾಡ್-ಕರ್ವ್ಡ್ ಫ್ಲೋಟಿಂಗ್ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಇದು ಕ್ವಾಲ್ಕಂ ಸ್ನಾಪ್​ಡ್ರಾಗನ್ 7 Gen 1 ಜೊತೆಗೆ 8GB RAM ಮತ್ತು 256GB ಆಂತರಿಕ ಸಂಗ್ರಹಣೆಯೊಂದಿಗೆ ಚಾಲಿತವಾಗಿದೆ. ಇದು 50MP ಸೆಲ್ಫಿ ಕ್ಯಾಮೆರಾದೊಂದಿಗೆ 200MP ಅಲ್ಟ್ರಾ-ಕ್ಲಿಯರ್ ಮುಖ್ಯ ಕ್ಯಾಮೆರಾದೊಂದಿಗೆ ಬರುತ್ತದೆ. 5000mAh ಬ್ಯಾಟರಿಯೊಂದಿಗೆ ಬೆಂಬಲಿತವಾಗಿದೆ. ಸ್ಮಾರ್ಟ್‌ಫೋನ್ ಮೂಲಲಬೆಲೆ 47,999 ರೂ.. ಆದಾಗ್ಯೂ, ಅಮೆಜಾನ್ ಮಾರಾಟದ ಸಮಯದಲ್ಲಿ ನೀವು ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಂತೆ ರೂ. 26,999 ಗೆ ಖರೀದಿಸಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?