ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್ಫೋನ್ ಬಿಡುಗಡೆ: ಕೇವಲ 9,999 ರೂ.
Oppo A18 Launched in India: ಒಪ್ಪೋ A18 ಅನ್ನು ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 4GB + 64GB ರೂಪಾಂತರಕ್ಕೆ ಕೇವಲ 9,999 ರೂ. ಇದೆ. ಈ ಫೋನ್ ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಆನ್‌ಲೈನ್ ಸ್ಟೋರ್ ಮತ್ತು ದೇಶಾದ್ಯಂತ ಇತರ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.
ಚೀನಾ ಮೂಲದ ಪ್ರಸಿದ್ಧ ಸ್ಮಾರ್ಟ್ಫೋನ್ ತಯಾರಿಕ ಕಂಪನಿ ಒಪ್ಪೋ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಆಕರ್ಷಕ ಫೋನೊಂದನ್ನು ಬಿಡುಗಡೆ ಮಾಡಿದೆ. ಅದುವೇ ಒಪ್ಪೋ ಎ18 (Oppo A18). ಈ ಸ್ಮಾರ್ಟ್ಫೋನ್ ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ಅನಾವರಣಗೊಂಡಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆ ಕೇಳಿಬಂದ ಬಳಿಕ ಭಾರತದಲ್ಲೂ ರಿಲೀಸ್ ಮಾಡಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಉತ್ತಮ ಬ್ಯಾಟರಿ, ಕ್ಯಾಮೆರಾ ಆಯ್ಕೆ ಕೂಡ ಇದೆ. ಹಾಗಾದರೆ, ಒಪ್ಪೋ A18 ಫೋನಿನ ಬೆಲೆ, ಫೀಚರ್ಸ್ ಏನಿದೆ ನೋಡೋಣ.
ಭಾರತದಲ್ಲಿ ಒಪ್ಪೋ A18 ಬೆಲೆ:
ಒಪ್ಪೋ A18 ಅನ್ನು ಭಾರತದಲ್ಲಿ ಸದ್ಯಕ್ಕೆ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ 4GB + 64GB ರೂಪಾಂತರಕ್ಕೆ ಕೇವಲ 9,999 ರೂ. ಇದೆ. ಈ ಫೋನ್ ಗ್ಲೋಯಿಂಗ್ ಬ್ಲ್ಯಾಕ್ ಮತ್ತು ಗ್ಲೋಯಿಂಗ್ ಬ್ಲೂ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಒಪ್ಪೋ ಆನ್‌ಲೈನ್ ಸ್ಟೋರ್ ಮತ್ತು ದೇಶಾದ್ಯಂತ ಇತರ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿಸಬಹುದು.
ಒಪ್ಪೋ A18 ಫೀಚರ್ಸ್:
ಒಪ್ಪೋ A18 ಸ್ಮಾರ್ಟ್ಫೋನ್ 6.56-ಇಂಚಿನ HD+ (1,612 x 720 ಪಿಕ್ಸೆಲ್‌ಗಳು) IPS LCD ಡಿಸ್‌ಪ್ಲೇಯೊಂದಿಗೆ 90Hz ನ ರಿಫ್ರೆಶ್ ದರ ಮತ್ತು 720nits ನ ಬ್ರೈಟ್ನೆಸ್ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 SoC ನಿಂದ ಚಾಲಿತವಾಗಿದೆ ಮತ್ತು ಆಂಡ್ರಾಯ್ಡ್ 13-ಆಧಾರಿತ ColorOS 13.1 ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಏನಿದು ವಾಟ್ಸ್ಆ್ಯಪ್ನ ಇ-ಮೇಲ್ ವೆರಿಫಿಕೇಷನ್ ಫೀಚರ್: ಇಲ್ಲಿದೆ ನೋಡಿ ಮಾಹಿತಿ
ಕ್ಯಾಮೆರಾ ವಿಚಾರಕ್ಕೆ ಬಂದರೆ, ಒಪ್ಪೋ A18 ನಲ್ಲಿ ಡ್ಯುಯಲ್ ಹಿಂಬದಿಯ ಕ್ಯಾಮೆರಾ ಘಟಕವಿದೆ, ಇದು 8-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು 5-ಮೆಗಾಪಿಕ್ಸೆಲ್ ಸಂವೇದಕವನ್ನು ಡಿಸ್ ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ನೀಡಲಾಗಿದೆ.
ಈ ಸ್ಮಾರ್ಟ್ಫೋನ್ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿದೆ. ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, Wi-Fi, ಬ್ಲೂಟೂತ್ 5.3, GPS ಮತ್ತು USB ಟೈಪ್-ಸಿ ಸೇರಿವೆ. ಇದು 3.5 ಎಂಎಂ ಆಡಿಯೊ ಜಾಕ್‌ನೊಂದಿಗೆ ಬರುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:21 pm, Sat, 7 October 23