ವಿಶ್ವಕಪ್ ಶುರುವಾಗುತ್ತಿದ್ದಂತೆ ಜಿಯೋದಿಂದ ಊಹಿಸಲಾಗದ ಆಫರ್: ಧಮಾಕ ಪ್ಲಾನ್​ನಲ್ಲಿ ಏನಿದೆ ನೋಡಿ

Watch the Cricket World Cup for FREE: ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ರಿಲಯನ್ಸ್ ಜಿಯೋ ಐಸಿಸಿ ಏಕದಿನ ವಿಶ್ವಕಪ್ ಸಂದರ್ಭ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದೆ.

ವಿಶ್ವಕಪ್ ಶುರುವಾಗುತ್ತಿದ್ದಂತೆ ಜಿಯೋದಿಂದ ಊಹಿಸಲಾಗದ ಆಫರ್: ಧಮಾಕ ಪ್ಲಾನ್​ನಲ್ಲಿ ಏನಿದೆ ನೋಡಿ
Jio World Cup Hot Star
Follow us
Vinay Bhat
|

Updated on:Oct 06, 2023 | 11:41 AM

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗೆ ಚಾಲನೆ ಸಿಕ್ಕಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿತು. ಇಂದು ಪಾಕಿಸ್ತಾನ-ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗಲಿದೆ. ವಿಶ್ವಕಪ್​ನ ಎಲ್ಲ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಲೈವ್ ಸ್ಟ್ರೀಮ್ ಇರುತ್ತದೆ. ಹಾಟ್‌ಸ್ಟಾರ್‌ ಮೊಬೈಲ್ ಆವೃತ್ತಿಯಲ್ಲಿ ಮಾತ್ರ ವಿಶ್ವಕಪ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ದೊಡ್ಡ ಪರದೆಯಲ್ಲಿ ಪಂದ್ಯ ಆನಂದಿಸಲು ಬಯಸುವವರು ಚಂದಾದಾರಿಕೆಯನ್ನು ಹೊಂದಿರಬೇಕು.

ಹೀಗಿರುವಾಗ ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ರಿಲಯನ್ಸ್ ಜಿಯೋ ಐಸಿಸಿ ಏಕದಿನ ವಿಶ್ವಕಪ್ ಸಂದರ್ಭ  ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಪ್ಲಾನ್​ಗಳನ್ನು ಅಳವಡಿಸುವ ಮೂಲಕ ನೀವು ಟಿವಿ ಅಥವಾ ಲ್ಯಾಪ್​ಟಾಪ್​ನಂತಹ ದೊಡ್ಡ ಪರದೆಯ ಮೇಲೆ ಡಿಸ್ನಿ+ ಹಾಟ್​ಸ್ಟಾರ್ ಮೂಲಕ ಪಂದ್ಯವನ್ನು ವೀಕ್ಷಿಸಬಹುದು.

PAK vs NED ICC WC Match Preview: ವಿಶ್ವಕಪ್​ನಲ್ಲಿಂದು ಪಾಕಿಸ್ತಾನ-ನೆದರ್ಲೆಂಡ್ಸ್ ಮುಖಾಮುಖಿ: ಬಾಬರ್ ಪಡೆಯ ಮೇಲೆ ಎಲ್ಲರ ಕಣ್ಣು

ಇದನ್ನೂ ಓದಿ
Image
ಏಷ್ಯನ್ ಗೇಮ್ಸ್​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಕ್ರಿಕೆಟ್ ತಂಡ
Image
ಶುಭ್​ಮನ್ ಗಿಲ್​ಗೆ ಡೆಂಗ್ಯೂ ಸೋಂಕು ದೃಢ: ಭಾರತಕ್ಕೆ ದೊಡ್ಡ ಆಘಾತ
Image
ಭಾರತದ ಬೌಲಿಂಗ್ ದಾಳಿಗೆ ಬಾಂಗ್ಲಾ ತತ್ತರ: ರುತುರಾಜ್ ಪಡೆಗೆ ಸುಲಭ ಟಾರ್ಗೆಟ್
Image
ಟೀಮ್ ಇಂಡಿಯಾ ಟ್ರೈನಿಂಗ್ ಸೆಷನ್​ನಿಂದ ಬಯಲಾಯಿತು ದೊಡ್ಡ ಸುದ್ದಿ

ಮೂರು ತಿಂಗಳ ಯೋಜನೆಗಳು:

  • 328 ರೂ. : 1.5GB ದೈನಂದಿನ ಡೇಟಾ, 28-ದಿನಗಳ ಮಾನ್ಯತೆ
  • 388 ರೂ. : 2GB ದೈನಂದಿನ ಡೇಟಾ, 28-ದಿನಗಳ ಮಾನ್ಯತೆ
  • 758 ರೂ. : 1.5GB ದೈನಂದಿನ ಡೇಟಾ, 84-ದಿನಗಳ ಮಾನ್ಯತೆ
  • 808 ರೂ. : 2GB ದೈನಂದಿನ ಡೇಟಾ, 84-ದಿನಗಳ ಮಾನ್ಯತೆ

ವಾರ್ಷಿಕ ಯೋಜನೆಗಳು:

  • 598 ರೂ. : 2GB ದೈನಂದಿನ ಡೇಟಾ, 28-ದಿನಗಳ ಮಾನ್ಯತೆ
  • 3,178 ರೂ. : 2GB ದೈನಂದಿನ ಡೇಟಾ, 1 ವರ್ಷದ ಮಾನ್ಯತೆ

ಪ್ರತಿ ಯೋಜನೆಯು 100 ದೈನಂದಿನ SMS, ಅನಿಯಮಿತ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶದಂತಹ ಹೆಚ್ಚುವರಿ ಸೌಲಭ್ಯದೊಂದಿಗೆ ಬರುತ್ತದೆ.

ಜಿಯೋ ಆಡ್-ಆನ್:

ಜಿಯೋದಲ್ಲಿ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ, ಮೂರು ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಳಿಸಿಕೊಂಡು 30 ದಿನಗಳವರೆಗೆ ಹೆಚ್ಚುವರಿ 40GB ಡೇಟಾವನ್ನು ಒದಗಿಸುವ 331 ರೂ. ಆಡ್-ಆನ್ ಪ್ಯಾಕ್ ಇದೆ.

ಇನ್ನು ನೀವು ಮನೋರಂಜನೆ ಪ್ಯಾಕ್ ಬೇಕಿದ್ದರೆ ಜಿಯೋದ 1099 ರೂ. ಪ್ಲಾನ್ ಆಯ್ಕೆ ಮಾಡಿ. ಈ ಯೋಜನೆಯು ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಬೇಕು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ನೀವು ಜಿಯೋ ವೆಲ್​ಕಮ್ ಆಫರ್​ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 2GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಅಂತೆಯೆ ಜಿಯೋದ 1499 ರೂ. ಪ್ಲಾನ್ ಕೂಡ ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಮೊಬೈಲ್‌ಗಳಿಗೆ ಸೀಮಿತವಾಗಿಲ್ಲ, ನೀವು ಇದನ್ನು ದೊಡ್ಡ ಪರದೆಯ ಮೇಲೆ ಸಹ ನೋಡಬಹುದು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ವೆಲ್​ಕಮ್ ಆಫರ್​ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 3GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:41 am, Fri, 6 October 23

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?