AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp New Feature: ಪಿನ್ ಚಾಟ್: ವಾಟ್ಸ್​ಆ್ಯಪ್​ನಿಂದ ಸದ್ದಿಲ್ಲದೆ ಅಚ್ಚರಿಯ ಫೀಚರ್

WhatsApp pin messages: ವಾಟ್ಸ್​ಆ್ಯಪ್ ತನ್ನ ಚಾಟ್‌ಗಳಲ್ಲಿ ಸಂದೇಶಗಳನ್ನು ಪಿನ್ ಮಾಡಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಹೊಸ ವೈಶಿಷ್ಟ್ಯವು ಇತ್ತೀಚಿನ ವಾಟ್ಸ್​ಆ್ಯಪ್​ ಬೀಟಾದ ಆಂಡ್ರಾಯ್ಡ್ 2.23.21.4 ಅಪ್‌ಡೇಟ್‌ನಲ್ಲಿ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಬಹುದು.

WhatsApp New Feature: ಪಿನ್ ಚಾಟ್: ವಾಟ್ಸ್​ಆ್ಯಪ್​ನಿಂದ ಸದ್ದಿಲ್ಲದೆ ಅಚ್ಚರಿಯ ಫೀಚರ್
WhatsApp New Feature
Vinay Bhat
|

Updated on: Oct 06, 2023 | 2:49 PM

Share

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ (WhatsApp) ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ತನ್ನ ಸ್ಟೇಟಸ್ ವಿಭಾಗದಲ್ಲಿ ಸ್ಟೇಟಸ್ ಅನ್ನು 24 ಗಂಟೆಗಳ ಸಮಯವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸುಳಿವು ನೀಡಿತ್ತು. ಇದೀಗ ವಾಟ್ಸ್​ಆ್ಯಪ್ ತನ್ನ ಚಾಟ್‌ಗಳಲ್ಲಿ ಸಂದೇಶಗಳನ್ನು ಪಿನ್ ಮಾಡಲು ಅನುಮತಿಸುವ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಭಿವೃದ್ಧಿಯಲ್ಲಿದ್ದ ಈ ಫೀಚರ್ ಇದೀಗ ಆಂಡ್ರಾಯ್ಡ್ ವಾಟ್ಸ್​ಆ್ಯಪ್ ಬೀಟಾದಲ್ಲಿ ಲಭ್ಯವಿದೆ.

ಈ ಹೊಸ ವೈಶಿಷ್ಟ್ಯವು ಇತ್ತೀಚಿನ ವಾಟ್ಸ್​ಆ್ಯಪ್​ ಬೀಟಾದ ಆಂಡ್ರಾಯ್ಡ್ 2.23.21.4 ಅಪ್‌ಡೇಟ್‌ನಲ್ಲಿ ಲಭ್ಯವಿದ್ದು, ಗೂಗಲ್ ಪ್ಲೇ ಸ್ಟೋರ್​ನಿಂದ ಡೌನ್‌ಲೋಡ್ ಮಾಡಬಹುದು. WABetaInfo ಹಂಚಿಕೊಂಡಿರುವ ಸ್ಕ್ರೀನ್‌ಶಾಟ್ ಪ್ರಕಾರ, ಈ ಫೀಚರ್ ಮೂಲಕ ಚಾಟ್‌ಗಳಲ್ಲಿ ಮೆಸೇಜ್ ಅನ್ನು ಪಿನ್ ಮಾಡಬಹುದು. ನೀವು ಪಿನ್ ಮಾಡಲು ಬಯಸುವ ಸಂದೇಶವನ್ನು ಆಯ್ಕೆ ಮಾಡಿದರೆ, ಅದು ಚಾಟ್‌ನ ಮೇಲ್ಭಾಗದಲ್ಲಿ ಗೋಚರಿಸುತ್ತದೆ.

ಅತಿಯಾಗಿ ಸ್ಮಾರ್ಟ್​ಫೋನ್ ಬಳಸುತ್ತೀರಾ?; ಟ್ರಿಗರ್ ಫಿಂಗರ್ ಸಮಸ್ಯೆ ಬಗ್ಗೆಯೂ ತಿಳಿದಿರಲಿ

ಇದನ್ನೂ ಓದಿ
Image
ಪೋಕೋ X5 ಪ್ರೊ ಮೇಲೆ ದಾಖಲೆಯ ರಿಯಾಯಿತಿ: ಈ ಆಫರ್ ಮಿಸ್ ಮಾಡ್ಬೇಡಿ
Image
ವಿಶ್ವಕಪ್ ಶುರುವಾಗುತ್ತಿದ್ದಂತೆ ಜಿಯೋದಿಂದ ಊಹಿಸಲಾಗದ ಆಫರ್
Image
ಏಷ್ಯನ್ ಗೇಮ್ಸ್​ನಲ್ಲಿ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಕ್ರಿಕೆಟ್ ತಂಡ
Image
ಶುಭ್​ಮನ್ ಗಿಲ್​ಗೆ ಡೆಂಗ್ಯೂ ಸೋಂಕು ದೃಢ: ಭಾರತಕ್ಕೆ ದೊಡ್ಡ ಆಘಾತ

ಪಿನ್ ಮಾಡಿದ ಸಂದೇಶದ ಅವಧಿಯನ್ನು ಆಯ್ಕೆ ಮಾಡಲು ಕೂಡ ವಾಟ್ಸ್​ಆ್ಯಪ್​ ನಿಮಗೆ ಅನುಮತಿಸುತ್ತದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಅದನ್ನು 24 ಗಂಟೆಗಳು, 7 ದಿನಗಳು ಅಥವಾ 30 ದಿನಗಳವರೆಗೆ ಇರಿಸಬಹುದು. ನೀವು ಯಾವಾಗ ಬೇಕಾದರೂ ಸಂದೇಶವನ್ನು ಅನ್‌ಪಿನ್ ಮಾಡಬಹುದು.

ಸದ್ಯಕ್ಕೆ ಈ ವೈಶಿಷ್ಟ್ಯವು ಇನ್ನೂ ಬೀಟಾದಲ್ಲಿದೆ ಮತ್ತು ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಚಾಟ್‌ನಲ್ಲಿ ಒಂದು ಮೆಸೇಜ್ ಅನ್ನು ದೀರ್ಘವಾಗಿ ಒತ್ತಿ ಹಿಡಿದರೆ ಪಿನ್ ಆಯ್ಕೆ ಲಭ್ಯವಾಗುತ್ತದೆ. ಇನ್ನು ವಾಟ್ಸ್​ಆ್ಯಪ್​ ಚಾಟ್‌ಗಳಿಗಾಗಿ ಅಟ್ಯಾಚ್‌ಮೆಂಟ್ ಮೆನುವನ್ನು ಸಹ ಮರುವಿನ್ಯಾಸಗೊಳಿಸಿದೆ.

ಇನ್ನುಂದೆ ಸ್ಟೇಟಸ್ 24 ಗಂಟೆ ಮಾತ್ರ ಅಲ್ಲ:

ವಾಟ್ಸ್​ಆ್ಯಪ್​ನಲ್ಲಿ ಪ್ರಸ್ತುತ ಬಳಕೆದಾರರು ತಮ್ಮ ಸ್ಟೇಟಸ್ ಅನ್ನು 24 ಗಂಟೆಗಳವರೆಗೆ ಇರುವ ರೀತಿಯಲ್ಲಿ ಪೋಸ್ಟ್ ಮಾಡಬಹುದು. ಆದರೆ ಇತ್ತೀಚಿನ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯನ್ನು ವಾಟ್ಸ್​ಆ್ಯಪ್​ ವಿಸ್ತರಿಸಲಿದೆ. ಮುಂಬರುವ ಅಪ್‌ಡೇಟ್‌ನಲ್ಲಿ, ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸ್ಟೇಟಸ್ ವಿಭಾಗದಲ್ಲಿ ನಾಲ್ಕು ಅವಧಿಯ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ: 24 ಗಂಟೆಗಳು, 3 ದಿನಗಳು, 1 ವಾರ ಮತ್ತು 2 ವಾರಗಳು. ಇದು ಬಳಕೆದಾರರು ತಮ್ಮ ಸ್ಟೇಟಸ್ ಅನ್ನು ಎಷ್ಟು ಸಮಯದವರೆಗೆ ವೀಕ್ಷಿಸಲು ಲಭ್ಯವಾಗಬೇಕೆಂದು ಬಯಸುತ್ತಾರೆ ಎಂಬುದರ ಕುರಿತು ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಅಘೋಷಿತ ಬಂದ್ ಸ್ಥಿತಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳು
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಮಂತ್ರಿ ಸ್ಥಾನ ಬೇಕಿಲ್ಲ, ಶಿವಕುಮಾರ್ ಮುಖ್ಯಮಂತ್ರಿಯಾದರೆ ಸಾಕು: ಯೋಗೇಶ್ವರ್
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
ಅಮ್ಮನಿಗೆ ಕಾರು ಗಿಫ್ಟ್ ಕೊಟ್ಟ ಪ್ರತಾಪ್, ಬಿಕ್ಕಿ ಬಿಕ್ಕಿ ಅತ್ತ ತಾಯಿ
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
Video: ವಿದ್ಯುತ್ ಶಾಕ್ ತಗುಲಿ ಬಿದ್ದ ಮರಿಯನ್ನು ರಕ್ಷಿಸಿದ ಕಾಡಾನೆ ಹಿಂಡು
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಮನೆಯಲ್ಲಿ ಅಡುಗೆ ಕೋಣೆ ಯಾವ ದಿಕ್ಕಿನಲ್ಲಿರಬೇಕು? ವಾಸ್ತು ವಿವರಣೆ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸುಬ್ರಹ್ಮಣ್ಯನ ಲಹರಿಗಳಿರುವ ಈ ದಿನದ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಗಂಡನ ಗೆಳೆಯನೊಂದಿಗೆ ಪ್ರೇಮ ಸಲ್ಲಾಪ: ಮದ್ವೆ ಆಸೆ ತೋರಿಸಿ ಕೈಕೊಟ್ಟ ಪ್ರಿಯಕರ!
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ: ಗೋಲ್ಡನ್ ಸ್ಟಾರ್ ಗಣೇಶ್
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಉತ್ತರಾಖಂಡದಲ್ಲಿ ಪ್ರವಾಹ, ಭೂಕುಸಿತದಿಂದ ರಸ್ತೆಗಳೇ ಮಾಯ!
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ
ಫೋಟೋಶೂಟ್ ಮಾಡಿಕೊಳ್ಳೋಕೆ ಬಂದ್ರಾ?; ಮಹಿಳೆಯ ಪ್ರಶ್ನೆಗೆ ಬೆವರಿದ ಕಂಗನಾ