- Kannada News Photo gallery Amazon India Live Its Highly Anticipated Great Indian Festival 2023 for Prime users
ಪ್ರೈಮ್ ಚಂದಾದಾರರಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಲೈವ್: ಆಫರ್ ಏನಿದೆ ನೋಡಿ
Amazon Great Indian Festival Sale 2023 Live: ಅಮೆಜಾನ್ ಈ ಬಾರಿ ಸ್ಯಾಮ್ಸಂಗ್, ಇಂಟೆಲ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಫ್ಲಾಟ್ 10 ಪ್ರತಿಶತ ರಿಯಾಯಿತಿ ಘೋಷಿಸಲಾಗಿದೆ.
Updated on: Oct 07, 2023 | 6:55 AM

ಅಮೆಜಾನ್ ಇಂಡಿಯಾದ ಬಹು ನಿರೀಕ್ಷಿತ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2023 (Amazon Great Indian Festival Sale 2023) ಸೇಲ್ಗೆ ಚಾಲನೆ ಸಿಕ್ಕಿದೆ. ಪ್ರತಿ ವರ್ಷದಂತೆ, ಪ್ರೈಮ್ ಚಂದಾದಾರರು ಇದೀಗ ಸೇಲ್ನ ಪ್ರಯೋಜನ ಪಡೆಯಬಹುದು. ಉಳಿದ ಬಳಕೆದಾರರಿಗೆ ಇದು ನಾಳೆಯಿಂದ ಸಿಗಲಿದೆ.

ಅಮೆಜಾನ್ ಈ ಬಾರಿ ಸ್ಯಾಮ್ಸಂಗ್, ಇಂಟೆಲ್ ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಹಬ್ಬದ ಸಮಯದಲ್ಲಿ ಸ್ಯಾಮ್ಸಂಗ್ ಉತ್ಪನ್ನಗಳು ಮತ್ತು ಇಂಟೆಲ್-ಪ್ರೊಸೆಸರ್ ಆಧಾರಿತ ಕಂಪ್ಯೂಟರ್‌ಗಳ ಮೇಲೆ ಅತ್ಯಾಕರ್ಷಕ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ನಿರೀಕ್ಷಿಸಬಹುದು.

ಈ ಸೇಲ್ನಲ್ಲಿ ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಫ್ಲಾಟ್ 10 ಪ್ರತಿಶತ ರಿಯಾಯಿತಿ ಘೋಷಿಸಲಾಗಿದೆ. ವರದಿಗಳ ಪ್ರಕಾರ, ಅನೇಕ ಪ್ರಾಡಕ್ಟ್ಗಳ ಮೇಲೆ ಭರ್ಜರಿ ರಿಯಾಯಿತಿ ಇದೆಯಂತೆ. ಇದು ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಿದೆ.

ಸ್ಮಾರ್ಟ್ಫೋನ್ ವಿಭಾಗದಲ್ಲಿ ಪ್ರಮುಖವಾಗಿ ಒನ್ಪ್ಲಸ್ 11, ಸ್ಯಾಮ್ಸಂಗ್ ಗ್ಯಾಲಕ್ಸಿ S23 ಮತ್ತು ಮೋಟೋರೊಲಾ ರೇಜರ್ 40 ಆಲ್ಟ್ರಾ ದಂನಂತಹ ಮೊಬೈಲ್ಗಳು ಅತಿ ಕಡಿಮೆ ಬೆಲೆಗೆ ಮಾರಾಟ ಆಗಲಿದೆ. ಐಫೋನ್ 13 ಮತ್ತು ಐಫೋನ್ 14 ಸರಣಿಯ ಮಾದರಿಗಳು ಒಳಗೊಂಡಂತೆ ಆ್ಯಪಲ್ನ ಉತ್ಪನ್ನಗಳ ಶ್ರೇಣಿಯ ಮೇಲೆ ರಿಯಾಯಿತಿಗಳನ್ನು ನಿರೀಕ್ಷಿಸಲಾಗಿದೆ.

ಅತ್ತ ಫ್ಲಿಪ್‌ಕಾರ್ಟ್ ತನ್ನ ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ಸಜ್ಜಾಗಿದೆ. ಈ ಸೇಲ್ ಕೂಡ ನಾಳೆಯಿಂದ ಶುರುವಾಗಲಿದೆ. ಇದರಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S21 FE, ರಿಯಲ್ ಮಿ 11 ಪ್ರೊ+ ಮತ್ತು ಮೋಟೋರೊಲಾ ಎಡ್ಜ್ 40 ನಂತಹ ಸಾಧನಗಳಲ್ಲಿ ಕೊಡುಗೆಗಳನ್ನು ನಿರೀಕ್ಷಿಸಬಹುದು.

ಐಫೋನ್ 13 ಮೇಲೆ ಫ್ಲಿಪ್‌ಕಾರ್ಟ್ ಭಾರಿ ಬೆಲೆ ಕಡಿತ ಮಾಡಿ ಮಾರಾಟ ಮಾಡಲಿದೆ. ನೀವು ಈ ಸ್ಮಾರ್ಟ್ಫೋನ್ ಅನ್ನು 40,000 ರೂ. ಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಅನ್ನು ಹೊಂದಿದ್ದರೆ, ಕಡಿಮೆಯಾದ ಈ ಬೆಲೆಯಲ್ಲಿ ನೀವು ಹೆಚ್ಚುವರಿ 5% ರಿಯಾಯಿತಿಯನ್ನು ಪಡೆಯುತ್ತೀರಿ.



















