ಪೋಕೋ X5 ಪ್ರೊ ಸ್ಮಾರ್ಟ್​ಫೋನ್ ಮೇಲೆ ದಾಖಲೆಯ ರಿಯಾಯಿತಿ: ಈ ಆಫರ್ ಮಿಸ್ ಮಾಡ್ಬೇಡಿ

Flipkart Big Billion Days sale Poco X5 Pro Offer: ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಪುಟದಲ್ಲಿ ಪೋಕೋ X5 ಪ್ರೊ ಬೆಲೆಯನ್ನು 16,499 ರೂ. ಎಂದು ತಿಳಿಸಲಾಗಿದೆ. ಅಂದರೆ ಇದರ 6GB RAM + 128GB ಸ್ಟೋರೇಜ್ ಮಾದರಿಯ ಮೇಲೆ 6,500 ರೂ. ಗಳ ರಿಯಾಯಿತಿ ಪಡೆಯಬಹುದು.

ಪೋಕೋ X5 ಪ್ರೊ ಸ್ಮಾರ್ಟ್​ಫೋನ್ ಮೇಲೆ ದಾಖಲೆಯ ರಿಯಾಯಿತಿ: ಈ ಆಫರ್ ಮಿಸ್ ಮಾಡ್ಬೇಡಿ
Poco X5 Pro
Follow us
Vinay Bhat
|

Updated on: Oct 06, 2023 | 12:48 PM

ಪೋಕೋ X5 ಪ್ರೊ ಸ್ಮಾರ್ಟ್​ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ (Flipkart Big Billion Days sale) ಮಾರಾಟದ ಸಮಯದಲ್ಲಿ ದೊಡ್ಡ ರಿಯಾಯಿತಿಯನ್ನು ಪಡೆಯಲಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಡೀಲ್ ಬೆಲೆಯನ್ನು ಪ್ರಕಟಿಸಿದ್ದು, ಈ 5G ಫೋನ್‌ನ ಬೆಲೆ ರೂ. 16,999 ಕ್ಕೆ ಇಳಿಯಲಿದೆ ಎಂದು ಬಹಿರಂಗಪಡಿಸಿದೆ. ಈ ಫೋನ್ ಕೆಲವು ತಿಂಗಳ ಹಿಂದೆ ಭಾರತದಲ್ಲಿ 22,999 ರೂ. ಬೆಲೆಯೊಂದಿಗೆ ಅನಾವರಣಗೊಂಡಿತ್ತು. ಫ್ಲಿಪ್​ಕಾರ್ಟ್​ನಲ್ಲಿ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಅಕ್ಟೋಬರ್ 8 ರಂದು ಪ್ರಾರಂಭವಾಗಲಿದೆ.

ಫ್ಲಿಪ್‌ಕಾರ್ಟ್‌ನ ಮಾರಾಟದ ಪುಟದಲ್ಲಿ ಪೋಕೋ X5 ಪ್ರೊ ಬೆಲೆಯನ್ನು 16,499 ರೂ. ಎಂದು ತಿಳಿಸಲಾಗಿದೆ. ಅಂದರೆ ಇದರ 6GB RAM + 128GB ಸ್ಟೋರೇಜ್ ಮಾದರಿಯ ಮೇಲೆ 6,500 ರೂ. ಗಳ ರಿಯಾಯಿತಿ ಪಡೆಯಬಹುದು. ಇದರೊಂದಿಗೆ ಬ್ಯಾಂಕ್ ಕಾರ್ಡ್ ಕೊಡುಗೆಯನ್ನು ಸೇರಿಸುವ ಸಾಧ್ಯತೆಗಳಿವೆ. ಫ್ಲಿಪ್‌ಕಾರ್ಟ್‌ನಲ್ಲಿ ಸೇಳ್ ಲೈವ್ ಆದ ನಂತರ ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ. ಅದೇ ರೀತಿ, 8GB + 256GB ಮಾದರಿಯು 17,499 ರೂ. ಗೆ ಸಿಗಲಿದೆ.

ಭಾರತದಲ್ಲಿ ಸ್ಯಾಮ್​ಸಂಗ್ ಅಭಿಮಾನಿಗಳಿಗಾಗಿ ಗ್ಯಾಲಕ್ಸಿ S23 FE ಬಿಡುಗಡೆ: ಏನು ವಿಶೇಷತೆ ನೋಡಿ

ಇದನ್ನೂ ಓದಿ
Image
ಏನಿದು ವಾಟ್ಸ್​ಆ್ಯಪ್​ನ ಇ-ಮೇಲ್ ವೆರಿಫಿಕೇಷನ್ ಫೀಚರ್: ಇಲ್ಲಿದೆ ಮಾಹಿತಿ
Image
ಆನ್​ಲೈನ್ ವಂಚಕರಿಂದ ಹಣ ಕಳೆದುಕೊಂಡರೆ ಹೀಗೆ ಮಾಡಿ: ಹಣ ಪುನಃ ಪಡೆಯಬಹುದು
Image
ಭಾರತದಲ್ಲಿ ಗ್ಯಾಲಕ್ಸಿ S23 FE ಬಿಡುಗಡೆ: ಏನು ವಿಶೇಷತೆ ನೋಡಿ
Image
ಕ್ಯಾಮೆರಾ ಪ್ರಿಯರು ಶಾಕ್: ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೋನ್ ಬಿಡುಗಡೆ

ಪೋಕೋ X5 ಪ್ರೊ ಕಡಿಮೆ ಬೆಲೆಯಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಫೋನ್. ಇದು ವೇಗವಾದ ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್ ಅನ್ನು ಹೊಂದಿದೆ. ಇದು 20,000 ರೂ. ಗಿಂತ ಕಡಿಮೆ ಬೆಲೆಯ ಫೋನ್‌ಗಳಲ್ಲಿ ಕಂಡುಬರುವುದಿಲ್ಲ. ಗೇಮಿಂಗ್ ಪವರ್‌ಹೌಸ್ ಅಲ್ಲದಿದ್ದರೂ, ಇದು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್ 6.7-ಇಂಚಿನ AMOLED ಡಿಸ್ ಪ್ಲೇ ಜೊತೆಗೆ ಪೂರ್ಣ HD+ ರೆಸಲ್ಯೂಶನ್ ಅನ್ನು ಹೊಂದಿದೆ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲ್ಪಟ್ಟಿದೆ. 120Hz ರಿಫ್ರೆಶ್ ದರ ಮತ್ತು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತದೆ. 5,000mAh ಬ್ಯಾಟರಿ ನೀಡಲಾಗಿದ್ದು, 67W ವೇಗದ ಚಾರ್ಜರ್‌ ಕೂಡ ಇದೆ. ಕೇವಲ 15 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಚಾರ್ಜ್ ಆಗುತ್ತದೆ. ಈ ಸ್ಮಾರ್ಟ್‌ಫೋನ್‌ನ 108-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆಟಪ್ ಹೊಂದಿದೆ. 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2-ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಇದು 4K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ.

ಆದರೆ, ಈ ಫೋನ್ ಹಳೆಯ ಆಂಡ್ರಾಯ್ಡ್ 12 ಓಎಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದನ್ನು ಕೇವಲ ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳಿಗೆ ಸೀಮಿತಗೊಳಿಸಲಾಗಿದೆ. ಇದರರ್ಥ ಬಳಕೆದಾರರು ಆಂಡ್ರಾಯ್ಡ್ 14 OS ಗೆ ಮಾತ್ರ ಪ್ರವೇಶವನ್ನು ಪಡೆಯುತ್ತಾರೆ. ಅದೇನೇ ಇದ್ದರೂ, ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಪೋಕೋ X5 ಪ್ರೊ ಕಡಿಮೆ ಬೆಲೆಗೆ ಲಭ್ಯವಿರುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?