ಭಾರತದಲ್ಲಿ ಸ್ಯಾಮ್‌ಸಂಗ್ ಅಭಿಮಾನಿಗಳಿಗಾಗಿ ಗ್ಯಾಲಕ್ಸಿ S23 FE ಬಿಡುಗಡೆ: ಏನು ವಿಶೇಷತೆ ನೋಡಿ
Samsung Galaxy S23 FE launched in India: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನಿನ 8GB RAM + 256GB ಸ್ಟೋರೇಜ್ ಮಾದರಿಗೆ 49,999 ರೂ. ಇದೆ. ಇದರ ಮೂಲ ಬೆಲೆ 59,999 ರೂ. ಆಗಿದೆ. ಆದರೆ, ಇದು 10,000 ರೂ. ಗಳ HDFC ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿರುತ್ತದೆ. ಇದರಿಂದ ಬೆಲೆ 49,999 ರೂ. ಗೆ ಖರೀದಿಸಬಹುದು.
ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಕಂಪನಿ ತನ್ನ ಅಭಿಮಾನಿಗಳಿಗಾಗಿ ಹೊಸ ಫ್ಯಾನ್ ಎಡಿಷನ್ ಸ್ಮಾರ್ಟ್ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE (Samsung Galaxy S23 FE) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಯ ಉತ್ತರಾಧಿಕಾರಿಯಾಗಿದೆ. ಯಾಕೆಂದರೆ ಕಂಪನಿ ಗ್ಯಾಲಕ್ಸಿ S22 FE ಫೋನನ್ನು ಬಿಡುಗಡೆ ಮಾಡಿರಲಿಲ್ಲ. ಈ ಹೊಸ ಫೋನ್ ಈ ವರ್ಷದ ಆರಂಭದಲ್ಲಿ ಪರಿಚಯಿಸಲಾದ ಗ್ಯಾಲಕ್ಸಿ S23 ಸರಣಿಯ ಟೋನ್-ಡೌನ್ ಆವೃತ್ತಿಯಾಗಿದೆ. ಗ್ಯಾಲಕ್ಸಿ S23 FE ಪ್ರೀಮಿಯಂ ಫೋನ್ 60,000 ಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಇದರ ಫೀಚರ್ಸ್, ಬೆಲೆ, ಮಾರಾಟದ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಬೆಲೆ:
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನಿನ 8GB RAM + 256GB ಸ್ಟೋರೇಜ್ ಮಾದರಿಗೆ 49,999 ರೂ. ಇದೆ. ಇದರ ಮೂಲ ಬೆಲೆ 59,999 ರೂ. ಆಗಿದೆ. ಆದರೆ, ಇದು 10,000 ರೂ. ಗಳ HDFC ಬ್ಯಾಂಕ್ ರಿಯಾಯಿತಿ ಕೊಡುಗೆಯೊಂದಿಗೆ ಲಭ್ಯವಿರುತ್ತದೆ. ಇದರಿಂದ ಬೆಲೆ 49,999 ರೂ. ಗೆ ಖರೀದಿಸಬಹುದು. ಇಂದಿನಿಂದ ಈ ಫೋನ್ ಅಮೆಜಾನ್ ಮೂಲಕ ಖರೀದಿಸಬಹುದು. ಇದು ಮಿಂಟ್, ಕ್ರೀಮ್, ಗ್ರ್ಯಾಫೈಟ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಭ್ಯವಿರುತ್ತದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೀಚರ್ಸ್:
ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ FE ಫೋನ್ 6.3-ಇಂಚಿನ FHD+ OLED ಡಿಸ್ ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ನಿಂದ ಕೂಡಿದೆ. ಇದರ ಹಿಂದಿನ ಪ್ಯಾನೆಲ್ ವಿನ್ಯಾಸವು S23 ಸರಣಿಯಂತೆಯೇ ಇದೆ. ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 1 SoC ಬದಲಿಗೆ ಕಂಪನಿಯ ಎಕ್ಸಿನೊಸ್ 2200 ಚಿಪ್‌ಸೆಟ್ ಅನ್ನು ಅಳವಡಿಸಲಾಗಿದೆ.
Big Billion Day: ಫ್ಲಿಪ್‌ಕಾರ್ಟ್ ವಾರ್ಷಿಕ ಮೆಗಾ ಬಿಗ್ ಬಿಲಿಯನ್ ಡೇ ಆಫರ್ ಸೇಲ್
ಕ್ಯಾಮೆರಾ ವಿಚಾರಕ್ಕೆ ಬಂದರೆ, ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಇದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 12-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 8-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾದೊಂದಿಗೆ 50-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 10-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ.
ಈ ಫೋನ್ನಲ್ಲಿ 4,500mAh ಬ್ಯಾಟರಿ ಇದೆ. ಕಂಪನಿಯು 25W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಒದಗಿಸುತ್ತದೆ. ಆದರೆ, ಸ್ಯಾಮ್‌ಸಂಗ್ ಚಿಲ್ಲರೆ ಬಾಕ್ಸ್‌ನಲ್ಲಿ ಚಾರ್ಜರ್ ಅನ್ನು ನೀಡುತ್ತಿಲ್ಲ. ಇದು 30 ನಿಮಿಷಗಳಲ್ಲಿ ಶೂನ್ಯದಿಂದ 50 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು ಸ್ಯಾಮ್‌ಸಂಗ್ ಹೇಳಿಕೊಂಡಿದೆ. ಉಳಿದಂತೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ. Wi-Fi, GPS, NFC ಮತ್ತು ಬ್ಲೂಟೂತ್ 5.3 ಸಂಪರ್ಕವನ್ನು ಸಹ ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ