ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಬಿಡುಗಡೆ ದಿನಾಂಕ ಪ್ರಕಟ: ನಿಟ್ಟುಸಿರು ಬಿಟ್ಟ ಫ್ಯಾನ್ಸ್

Samsung Galaxy S23 FE Release Date: ಅಕ್ಟೋಬರ್ 4 ರಂದು ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಫೋನ್ ಅನಾವರಣಗೊಳ್ಳಲಿದೆ. ಇದರ ಜೊತೆಗೆ, ಅಮೆಜಾನ್ ಇಂಡಿಯಾ ಮುಂಬರುವ ಸ್ಯಾಮ್​ಸಂಗ್ ಗ್ಯಾಲಕ್ಸಿ Tab S9 FE ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಗ್ಯಾಲಕ್ಸಿ S23 FE ಅನಾವರಣಗೊಂಡ ಮರುದಿನ ಅಕ್ಟೋಬರ್ 5 ರಂದು ಟ್ಯಾಬ್ಲೆಟ್ ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.

ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಬಿಡುಗಡೆ ದಿನಾಂಕ ಪ್ರಕಟ: ನಿಟ್ಟುಸಿರು ಬಿಟ್ಟ ಫ್ಯಾನ್ಸ್
Galaxy S23 FE
Follow us
|

Updated on: Oct 02, 2023 | 11:36 AM

ಸ್ಯಾಮ್‌ಸಂಗ್ ತನ್ನ ಹೊಸ ಗ್ಯಾಲಕ್ಸಿ ಎಫ್‌ಇ ಸರಣಿಯ ಸ್ಮಾರ್ಟ್​ಫೋನ್ ಬಿಡುಗಡೆಯನ್ನು ಖಚಿತ ಪಡಿಸಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಸ್ಯಾಮ್​ಸಂಗ್ ಗ್ಯಾಲಕ್ಸಿ S23 ಎಫ್​ಇ (Samsung Galaxy S23 FE) ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದೆ. ಗ್ಯಾಲಕ್ಸಿ S23 FE ಬಗ್ಗೆ ಸ್ಯಾಮ್​ಸಂಗ್ ಕಂಪನಿ ತನ್ನ ಅಧಿಕೃತ X (ಹಿಂದೆ Twitter) ಖಾತೆಯಯಲ್ಲಿ ಟೀಸರ್ ಬಿಡುಗಡೆ ಮಾಡಿದ್ದು, ಇದರಲ್ಲಿ ಅಕ್ಟೋಬರ್ 4 ರಂದು ಈ ಫೋನ್ ಅನಾವರಣಗೊಳ್ಳಲಿದೆ ಎಂದು ಹೇಳಿದೆ.

ಇದರ ಜೊತೆಗೆ, ಅಮೆಜಾನ್ ಇಂಡಿಯಾ ಮುಂಬರುವ ಸ್ಯಾಮ್​ಸಂಗ್ ಗ್ಯಾಲಕ್ಸಿ Tab S9 FE ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಗ್ಯಾಲಕ್ಸಿ S23 FE ಅನಾವರಣಗೊಂಡ ಮರುದಿನ ಅಕ್ಟೋಬರ್ 5 ರಂದು ಟ್ಯಾಬ್ಲೆಟ್ ಅನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಪ್ರಾರಂಭವಾಗುತ್ತಿದ್ದಂತೆ ಇದು ಮೊದಲ ಸೇಲ್ ಕಾಣುವ ನಿರೀಕ್ಷೆಯಿದೆ.

17,499 ರೂ. ಗೆ 43 ಇಂಚಿನ ಹೊಸ ಸ್ಮಾರ್ಟ್​ ಟಿವಿ ಬಿಡುಗಡೆ: ನೆಟ್​ಫ್ಲಿಕ್ಸ್, ಪ್ರೈಮ್ ಎಲ್ಲವೂ ಇದೆ

ಇದನ್ನೂ ಓದಿ
Image
10 ಲಕ್ಷ ಡಂಡ: ಇಂದಿನಿಂದ ಸಿಮ್ ಕಾರ್ಡ್ ಹೊಸ ನಿಯಮ: ಏನದು?
Image
ವಿವೋ ತಯಾರಿಸುತ್ತದೆ Y200 ಎಂಬ ಸ್ಮಾರ್ಟ್‌ಫೋನ್: ಇದರ ವಿಶೇಷತೆ ಏನು ನೋಡಿ
Image
ಮೋಟೋ ಫೋನುಗಳಿಗೆ ಹಿಂದೆಂದೂ ಇರದಷ್ಟು ಡಿಸ್ಕೌಂಟ್: ಸೇಲ್ ಯಾವಾಗ ಆರಂಭ?
Image
ಮಡಚುವ ​ಫೋನ್ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಇಂದಿನಿಂದ ಖರೀದಿಗೆ ಲಭ್ಯ

ಗ್ಯಾಲಕ್ಸಿ S23 FE ಸ್ಮಾರ್ಟ್​ಫೋನ್​ನ ಫೀಚರ್ಸ್ ಬಗ್ಗೆ ಕಂಪನಿ ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಆದರೆ, ಮೂಲಗಳಿಂದ ಸೋರಿಕೆಯಾದ ಮಾಹಿತಿ ಇಲ್ಲಿದೆ.

ಬಣ್ಣದ ಆಯ್ಕೆಗಳು: ಡಿ ಆರ್ಕ್ ಪರ್ಪಲ್, ಕಪ್ಪು, ಬಿಳಿ ಮತ್ತು ತಿಳಿ ಹಸಿರು.

ಡಿಸ್ ಪ್ಲೇ: 6.4-ಇಂಚಿನ FHD+ ಡೈನಾಮಿಕ್ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು ಪಂಚ್-ಹೋಲ್ ಕಟೌಟ್ ನೀಡಲಾಗಿದೆಯಂತೆ.

ಪ್ರೊಸೆಸರ್: ಈ ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 8+ Gen 1 ಅಥವಾ ಎಕ್ಸಿನಾಸ್ 2200 ಚಿಪ್‌ಸೆಟ್ ಮೂಲಕ ಕಾರ್ಯನಿರ್ವಹಿಸುತ್ತದೆ.

RAM ಮತ್ತು ಸಂಗ್ರಹಣೆ: 12GB RAM ಮತ್ತು 256GB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆ ಆಯ್ಕೆ ಇದೆ.

OS: ಆಂಡ್ರಾಯ್ಡ್ 13-ಆಧಾರಿತ OneUI 5.1 ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್ ಮೂಲಕ ರನ್ ಆಗುತ್ತದೆ.

ಕ್ಯಾಮೆರಾಗಳು: ಸ್ಯಾಮ್​ಸಂಗ್ ಗ್ಯಾಲಕ್ಸಿ S23 FE ಹಿಂಬದಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿರುತ್ತದೆ. ಇದು OIS ಜೊತೆಗೆ 50MP ಪ್ರಾಥಮಿಕ ಸಂವೇದಕ, 8MP ಸಂವೇದಕ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 10MP ಮುಂಭಾಗದ ಕ್ಯಾಮೆರಾ ಇರಬಹುದು.

ಬ್ಯಾಟರಿ: 25W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,500mAh ಬ್ಯಾಟರಿ ನೀಡಬಹುದು.

ಇತರೆ: ಗ್ಯಾಲಕ್ಸಿ S23 FE 5ಜಿ ಬೆಂಬಲ ಪಡೆದುಕೊಂಡಿದೆ. ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿರಬಹುದು.

ಬೆಲೆಗೆ ಸಂಬಂಧಿಸಿದಂತೆ, ಟಿಪ್‌ಸ್ಟರ್ ಅಭಿಷೇಕ್ ಯಾದವ್ ಪ್ರಕಾರ, S23 FE 5G ಫೋನ್​ನ 8GB + 128GB ಮಾದರಿಗೆ ರೂ. 54,999 ಮತ್ತು 8GB + 256GB ಮಾದರಿಗೆ ರೂ. 59,999 ಇರಬಹುದು ಎನ್ನಲಾಗಿದೆ. ಆದರೆ, ಈ ವಿವರಗಳನ್ನು ಸ್ಯಾಮ್‌ಸಂಗ್ ಕಂಫನಿ ಅಧಿಕೃತವಾಗಿ ದೃಢೀಕರಿಸಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ