17,499 ರೂ. ಗೆ 43 ಇಂಚಿನ ಹೊಸ ಸ್ಮಾರ್ಟ್ ಟಿವಿ ಬಿಡುಗಡೆ: ನೆಟ್ಫ್ಲಿಕ್ಸ್, ಪ್ರೈಮ್ ಎಲ್ಲವೂ ಇದೆ
Thomson Oath Pro Max QLED, FA Series TVs: ಥಾಮ್ಸನ್‌ನ ಈ ಟಿವಿಗಳನ್ನು QLED, Oath ಪ್ರೊ ಮ್ಯಾಕ್ಸ್ ಮತ್ತು FA ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟಿವಿಗಳು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. FA ಸರಣಿಯ ಟಿವಿಯನ್ನು ರಿಯಲ್ಟೆಕ್ ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗಿದೆ. ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಥಾಮ್ಸನ್ (Thomson) ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಮೂರು ಹೊಸ ಬಜೆಟ್ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಈ ಸರಣಿಯು ಎರಡು 43-ಇಂಚಿನ ಟಿವಿಗಳು ಮತ್ತು 55-ಇಂಚಿನ 4K ಟಿವಿಯನ್ನು ಒಳಗೊಂಡಿದೆ. 17 ಸಾವಿರ ಬಜೆಟ್‌ನಲ್ಲಿ ನೀವು ಸ್ಮಾರ್ಟ್ ಟಿವಿಯ ಆರಂಭಿಕ ಮಾದರಿಯನ್ನು ಪಡೆದುಕೊಳ್ಳಬಹುದು. ಈ ಟಿವಿಗಳು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು. ಥಾಮ್ಸನ್‌ನ ಈ ಟಿವಿಗಳನ್ನು QLED, Oath ಪ್ರೊ ಮ್ಯಾಕ್ಸ್ ಮತ್ತು FA ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ.
FA ಸರಣಿಯ ಟಿವಿಯನ್ನು ರಿಯಲ್ಟೆಕ್ ಪ್ರೊಸೆಸರ್‌ನೊಂದಿಗೆ ಪರಿಚಯಿಸಲಾಗಿದೆ. ಬೆಜೆಲ್-ಲೆಸ್ ವಿನ್ಯಾಸದೊಂದಿಗೆ ಈ ಸ್ಮಾರ್ಟ್ ಟಿವಿ ಆಂಡ್ರಾಯ್ಡ್ 11 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 30W ಸ್ಪೀಕರ್‌ಗಳನ್ನು ಹೊಂದಿದೆ. QLED (43 ಇಂಚು) ಟಿವಿ 40W ಸ್ಪೀಕರ್‌ಗಳನ್ನು ಹೊಂದಿದೆ ಮತ್ತು 55 ಇಂಚಿನ ಗೂಗಲ್ TV 40W ಸ್ಪೀಕರ್‌ಗಳನ್ನು ಹೊಂದಿದೆ. ಈ ಹೊಸ ಸ್ಮಾರ್ಟ್ ಟಿವಿಗಳ ವಿಶೇಷತೆ ಮತ್ತು ಬೆಲೆಗಳ ಬಗ್ಗೆ ನೋಡೋಣ.
ಫೋಟೋಗ್ರಫಿಗೆ ಮೊಬೈಲ್ ಬೇಕಿದ್ದರೆ ಕೂಡಲೇ ಈ ಸ್ಮಾರ್ಟ್ಫೋನ್ ಖರೀದಿಸಿ: ಕೇವಲ 16,999 ರೂ.
FA ಟಿವಿಯಲ್ಲಿ ಡಾಲ್ಬಿ ಡಿಜಿಟಲ್ ಬೆಂಬಲವನ್ನು ಒದಗಿಸಲಾಗಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಆ್ಯಪಲ್ ಟಿವಿ, ಡಿಸ್ನಿ+ ಹಾಟ್ಸ್ಟಾರ್, ವೂಟ್, ಝೀ5 ಮತ್ತು ಸೋನಿ ಲಿವ್ ಅನ್ನು ಈ ಟಿವಿಯಲ್ಲಿ ಆನಂದಿಸಬಹುದು. ಇತ್ತ QLED ಟಿವಿ ಡಾಲ್ಬಿ ವಿಷನ್‌ನೊಂದಿಗೆ HDR 10 ಪ್ಲಸ್ ಬೆಂಬಲವನ್ನು ಹೊಂದಿದೆ. ಟಿವಿ ಸ್ಪೀಕರ್‌ಗಳು ಡಾಲ್ಬಿ ಆಡಿಯೋ ಸ್ಟಿರಿಯೊ ಬಾಕ್ಸ್ ಬೆಂಬಲದೊಂದಿಗೆ ಬರುತ್ತವೆ. ಟಿವಿಯ RAM 2 GB ಮತ್ತು ಸಂಗ್ರಹಣೆ 16 GB ಆಗಿದೆ. ಇದನ್ನು ವೈಫೈಗೆ ಸಂಪರ್ಕಿಸಬಹುದು. ಇದಲ್ಲದೆ, ಒಟಿಟಿ ಅಪ್ಲಿಕೇಶನ್‌ಗಳಾದ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಆ್ಯಪಲ್ ಟಿವಿ, ಡಿಸ್ನಿ+ ಹಾಟ್ಸ್ಟಾರ್, ವೂಟ್, ಝೀ5 ಮತ್ತು ಸೋನಿ ಲಿವ್ ಗಳನ್ನು ಈ ಸ್ಮಾರ್ಟ್ ಟಿವಿಯಲ್ಲಿ ರನ್ ಮಾಡಬಹುದು.
55 ಇಂಚಿನ ಟಿವಿ ವೈಶಿಷ್ಟ್ಯಗಳು
ಥಾಮ್ಸನ್ 55 ಇಂಚಿನ ಗೂಗಲ್ ಟಿವಿಯಲ್ಲಿ ಡಾಲ್ಬಿ ಅಟ್ನೋಮಸ್, ಡಾಲ್ಬಿ ವಿಷನ್, ಡಾಲ್ಬಿ ಡಿಜಿಟಲ್ ಪ್ಲಸ್, ಹೆಚ್ಡಿಆರ್ 10+, ಡಿಟಿಎಸ್ ಟ್ರೂ ಸರೌಂಡ್ ಅನ್ನು ಬೆಂಬಲಿಸುತ್ತದೆ. ಈ ಟಿವಿ 2GB RAM ಮತ್ತು 16GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.
ಈ ಸ್ಮಾರ್ಟ್ ಟಿವಿಗಳ ಬೆಲೆ:
ಥಾಮ್ಸನ್ FA ಬೆಲೆ – 17,499 ರೂ.
ಥಾಮ್ಸನ್ OATH ಪ್ರೊ ಮ್ಯಾಕ್ಸ್ ಬೆಲೆ – 26,999 ರೂ.
ಥಾಮ್ಸನ್ QLED ಬೆಲೆ – 32,999 ರೂ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Sat, 30 September 23