ಮೋಟೋ ಫೋನುಗಳಿಗೆ ಹಿಂದೆಂದೂ ಇರದಷ್ಟು ಡಿಸ್ಕೌಂಟ್: ಸೇಲ್ ಯಾವಾಗ ಆರಂಭ?
Motorola phone offers, Flipkart Big Billion Days Sale 2023: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ರಲ್ಲಿ ಮೋಟೋರೊಲಾ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಮಾರಾಟ ಕಾಣಲಿದೆ. ಮೋಟೋರೋಲಾ ಇಂಡಿಯಾ ಕೆಲವು ಮಾಹಿತಿಯನ್ನು ಮುಂಚಿತವಾಗಿ ತಿಳಿಸಿದೆ. ಮೋಟೋರೊಲಾ ಎಡ್ಜ್, ಮೋಟೋ G ಮತ್ತು ಮೋಟೋ E ಸರಣಿಯ ಫೋನ್‌ಗಳು ಈ ಮಾರಾಟದಲ್ಲಿ ಆಕರ್ಷಕ ಬೆಲೆಗಳೊಂದಿಗೆ ಪಡೆದುಕೊಳ್ಳಬಹುದು.
2023 ರ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ನಲ್ಲಿ (Flipkart Big Billion Days Sale) ಹಲವಾರು ಮೋಟೋರೊಲಾ ಫೋನ್‌ಗಳು ಕಡಿಮೆ ಬೆಲೆಯಲ್ಲಿ ಮಾರಾಟ ಕಾಣಲಿದೆ. ಫ್ಲಿಪ್‌ಕಾರ್ಟ್ ಮಾರಾಟದ ಈವೆಂಟ್ ಅಕ್ಟೋಬರ್ 8 ರಿಂದ ಪ್ರಾರಂಭವಾಗಲಿದೆ. ಜನಪ್ರಿಯ ಬ್ರ್ಯಾಂಡ್‌ಗಳ ಡೀಲ್‌ಗಳನ್ನು ಇನ್ನೂ ಬಹಿರಂಗಪಡಿಸದಿದ್ದರೂ, ಮೋಟೋರೋಲಾ ಇಂಡಿಯಾ ಕೆಲವು ಮಾಹಿತಿಯನ್ನು ಮುಂಚಿತವಾಗಿ ತಿಳಿಸಿದೆ. ಮೋಟೋರೊಲಾ ಎಡ್ಜ್, ಮೋಟೋ G ಮತ್ತು ಮೋಟೋ E ಸರಣಿಯ ಫೋನ್‌ಗಳನ್ನು ಈ ಮಾರಾಟದಲ್ಲಿ ಆಕರ್ಷಕ ಬೆಲೆಗಳೊಂದಿಗೆ ಪಡೆದುಕೊಳ್ಳಬಹುದು.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2023 ರಲ್ಲಿ ಮೋಟೋರೊಲಾ ಫೋನ್ ಕೊಡುಗೆಗಳು
ಮೋಟೋರೊಲಾ ಎಡ್ಜ್ 40 ನಿಯೋ 144Hz P-OLED ಡಿಸ್ ಪ್ಲೇ, ಆಂಡ್ರಾಯ್ಡ್ 13, ಮೀಡಿಯಾಟೆಕ್ ಡೈಮೆನ್ಸಿಟಿ 7030 5G SoC, 50MP ಮುಖ್ಯ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 68W ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇದರ 8GB + 256GB ಮಾದರಿಯು ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳ ನಂತರ ಕೇವಲ 19,999 ರೂ. ಗಳಲ್ಲಿ ಲಭ್ಯವಿರುತ್ತದೆ. 12GB + 256GB ಮಾದರಿಯು 21,999 ರೂ. ಗೆ ಸೇಲ್ ಕಾಣಲಿದೆ.
40,000 ರೂ. ಗಿಂತ ಕಡಿಮೆ ಬೆಲೆ: ಐಫೋನ್ ಮೇಲೆ ಕಣ್ಣಿಟ್ಟಿದ್ದರೆ ಸ್ವಲ್ಪ ದಿನ ಕಾಯಿರಿ
ಮೋಟೋ G84 ಸ್ಮಾರ್ಟ್ಫೋನ್ 120Hz P-OLED ಸ್ಕ್ರೀನ್, ಕ್ಲೋಸ್-ಟು-ಸ್ಟಾಕ್ ಆಂಡ್ರಾಯ್ಡ್ 13, ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್, 50MP ಪ್ರಾಥಮಿಕ ಕ್ಯಾಮೆರಾ, 5,000mAh ಬ್ಯಾಟರಿ ಮತ್ತು 30W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದರ 12+256GB ರೂಪಾಂತರವು ಆಫರ್‌ಗಳೊಂದಿಗೆ ರೂ. 16,999 ಕ್ಕೆ ಲಭ್ಯವಿರುತ್ತದೆ.
ಮೋಟೋ G54 ಫೋನ್ 120Hz LCD ಪ್ಯಾನೆಲ್, ಆಂಡ್ರಾಯ್ಡ್ 13 ಸಾಫ್ಟ್‌ವೇರ್, ಮೀಡಿಯಾಟೆಕ್ ಡೈಮೆನ್ಸಿಟಿ 7020 5G ಪ್ರೊಸೆಸರ್, 50MP ಮುಖ್ಯ ಸ್ನ್ಯಾಪರ್, 6,000mAh ಬ್ಯಾಟರಿ ಮತ್ತು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ನೀವು ಮೋಟೋ G54 ಫೋನಿನ 8+128GB ಮಾದರಿಯನ್ನು 12,999 ರೂಗಳಲ್ಲಿ ಆಫರ್‌ಗಳೊಂದಿಗೆ ಪಡೆದುಕೊಳ್ಳಬಹುದು.
ನೀವು ಅತ್ಯಂತ ಕೈಗೆಟುಕುವ 8GB RAM ಫೋನ್ ಮೋಟೋ E13 6.5-ಇಂಚಿನ IPS LCD ಪ್ಯಾನೆಲ್, ಆಂಡ್ರಾಯ್ಡ್ 13 Go ಆವೃತ್ತಿ, Unisoc T606 ಚಿಪ್‌ಸೆಟ್, 13MP ಮುಖ್ಯ ಕ್ಯಾಮೆರಾ ಮತ್ತು 5,000mAh ಬ್ಯಾಟರಿಯನ್ನು ಸಹ ಪಡೆಯುತ್ತೀರಿ. ಇದರ 8+128GB ಮಾದರಿಯು 6,749 ರೂ. ಗಳಿಗೆ (ಆಫರ್‌ಗಳೊಂದಿಗೆ) ಕೈಗೆ ಸಿಗಲಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ