ಮಡಚುವ ಸ್ಮಾರ್ಟ್​ಫೋನ್ ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?

Tecno Phantom V Flip 5G Sale Today in India: ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಶೇಖರಣಾ ಆಯ್ಕೆಗೆ ಭಾರತದಲ್ಲಿ 49,999 ರೂ. ನಿಗದಿ ಮಾಡಲಾಗಿದೆ. ಈ ಫೋಲ್ಡಬಲ್ ಫೋನ್ ಅಮೆಜಾನ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ.

Vinay Bhat
|

Updated on: Oct 01, 2023 | 6:55 AM

ಕಳೆದ ವಾರ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಿದ್ದ ಟೆಕ್ನೋ ಕಂಪನಿಯ ನೂತನ ಮಡಚುವ ಫೋನ್ ಟೆಕ್ನೋ ಫ್ಯಾಂಟಮ್ ವಿ ಫ್ಲಿಪ್ 5 ಜಿ (Tecno Phantom V Flip 5G) ಇಂದಿನಿಂದ ದೇಶದಲ್ಲಿ ಖರೀದಿಗೆ ಸಿಗಲಿದೆ. ಇದು ಕಂಪನಿಯ ಎರಡನೇ ಮಡಚಬಹುದಾದ ಸ್ಮಾರ್ಟ್‌ಫೋನ್ ಆಗಿದೆ.

1 / 7
ಈ ಹಿಂದೆ ಕಂಪನಿ ಏಪ್ರಿಲ್‌ನಲ್ಲಿ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಬಿಡುಗಡೆ ಮಾಡಲಾಗಿತ್ತು. ಹೊಸ ಫ್ಯಾಂಟಮ್ ವಿ ಫ್ಲಿಪ್ ವೃತ್ತಾಕಾರದ ಹೊರ ಡಿಸ್‌ಪ್ಲೇಯೊಂದಿಗೆ ಬರುತ್ತದೆ ಮತ್ತು ಹಿಂಬದಿಯ ಕ್ಯಾಮೆರಾ ಘಟಕವು ಇದನ್ನು ಸುತ್ತುವರಿದಿದೆ. ಈ ಫೋನಿನ ಸಂಪೂರ್ಣ ಮಾಹಿತಿ ಇಲ್ಲಿದೆ.

2 / 7
ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಅನ್ನು ಐಕಾನಿಕ್ ಬ್ಲ್ಯಾಕ್ ಮತ್ತು ಮಿಸ್ಟಿಕ್ ಡಾನ್ ಬಣ್ಣ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಹ್ಯಾಂಡ್‌ಸೆಟ್ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM + 256GB ಶೇಖರಣಾ ಆಯ್ಕೆಗೆ ಭಾರತದಲ್ಲಿ 49,999 ರೂ. ನಿಗದಿ ಮಾಡಲಾಗಿದೆ. ಈ ಫೋಲ್ಡಬಲ್ ಫೋನ್ ಅಮೆಜಾನ್‌ನಲ್ಲಿ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯವಿರುತ್ತದೆ.

3 / 7
ಟೆಕ್ನೋ ಪ್ಯಾಂಟಮ್ V ಫ್ಲಿಪ್ 5G ಸ್ಮಾರ್ಟ್​ಫೋನ್ 6.9-ಇಂಚಿನ ಪೂರ್ಣ-HD+ (2400 x 1080 ಪಿಕ್ಸೆಲ್‌ಗಳು) AMOLED ಒಳಗಿನ ಡಿಸ್‌ಪ್ಲೇಯನ್ನು ಹೊಂದಿದೆ. 1000nits ನ ಬ್ರೈಟ್‌ನೆಸ್ ಮಟ್ಟದೊಂದಿಗೆ ಬರುತ್ತದೆ. ಆನ್ ಡಿಸ್ ಪ್ಲೇ ವೈಶಿಷ್ಟ್ಯದೊಂದಿಗೆ ವೃತ್ತಾಕಾರದ AMOLED ಕವರ್ ಪ್ಯಾನೆಲ್ 1.32 ಇಂಚುಗಳಿಂದ ಕೂಡಿದೆ. ಕವರ್ ಪರದೆಯಿಂದ ಬಳಕೆದಾರರು ನೋಟಿಫಿಕೇಷನ್​ಗೆ ಪ್ರತ್ಯುತ್ತರಿಸಲು ಸಾಧ್ಯವಾಗುತ್ತದೆ.

4 / 7
ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 8050 SoC ಯಿಂದ Arm Mali-G77 GPU ನೊಂದಿಗೆ ಜೋಡಿಸಲಾಗಿದೆ, 8GB ಯ LPDDR4X RAM ಅನ್ನು 16GB ವರೆಗೆ ವರ್ಚುವಲ್ ಆಗಿ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ 13.5 ನೊಂದಿಗೆ ರನ್ ಆಗುತ್ತದೆ ಮತ್ತು ಎರಡು ವರ್ಷಗಳ OS ನವೀಕರಣಗಳು ಮತ್ತು ಮೂರು ವರ್ಷಗಳ ಭದ್ರತಾ ಪ್ಯಾಚ್‌ಗಳನ್ನು ನೀಡುತ್ತದೆ.

5 / 7
ಫ್ಯಾಂಟಮ್ ವಿ ಫ್ಲಿಪ್‌ನ ಹಿಂಬದಿಯ ಕ್ಯಾಮೆರಾ ಘಟಕವು 64-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು ವೈಡ್-ಆಂಗಲ್ ಲೆನ್ಸ್‌ನೊಂದಿಗೆ 13-ಮೆಗಾಪಿಕ್ಸೆಲ್ ಸಂವೇದಕವನ್ನು ಒಳಗೊಂಡಿದೆ. ಇದು ಕ್ವಾಡ್ ಫ್ಲ್ಯಾಶ್‌ಲೈಟ್ ಘಟಕದೊಂದಿಗೆ ಇರುತ್ತದೆ. ಮುಂಭಾಗದ ಕ್ಯಾಮೆರಾವನ್ನು ಪ್ರಾಥಮಿಕ ಡಿಸ್ ಪ್ಲೇಯ ಮೇಲ್ಭಾಗದ ಮಧ್ಯದಲ್ಲಿ ಜೋಡಿಸಲಾಗಿದೆ ಮತ್ತು 32-ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ.

6 / 7
ಈ ಫೋನ್ 4,000mAh ಬ್ಯಾಟರಿಯನ್ನು ಹೊಂದಿದ್ದು, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಆಗಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ 5G, Wi-Fi 6, NFC ಮತ್ತು ಬ್ಲೂಟೂತ್ 5.1 ಸಂಪರ್ಕದ ಜೊತೆಗೆ ಎಲ್ಲಾ GPT 3.0 ಅನ್ನು ಸಹ ಬೆಂಬಲಿಸುತ್ತದೆ.

7 / 7
Follow us