Updated on: Sep 30, 2023 | 8:59 PM
ಏಕದಿನ ವಿಶ್ವಕಪ್ ರಂಗೇರಲು ಇನ್ನು ದಿನಗಳು ಮಾತ್ರ ಉಳಿದಿವೆ. ಅಕ್ಟೋಬರ್ 5 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ವಿಶೇಷ ಎಂದರೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 22 ರನ್ಗಳಿಸಿದರೆ ಹೊಸ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ಅದು ಕೂಡ ವಿಶ್ವಕಪ್ ವಿಶ್ವ ದಾಖಲೆ ಎಂಬುದು ಮತ್ತೊಂದು ವಿಶೇಷ.
ಅಂದರೆ ಏಕದಿನ ವಿಶ್ವಕಪ್ನಲ್ಲಿ ಅತ್ಯಂತ ವೇಗವಾಗಿ 1000 ರನ್ ಕಲೆಹಾಕಿದ ವಿಶ್ವ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ಕೇವಲ 20 ಇನಿಂಗ್ಸ್ಗಳ ಮೂಲಕ ಏಕದಿನ ವಿಶ್ವಕಪ್ನಲ್ಲಿ ಸಾವಿರ ರನ್ ಪೂರೈಸಿ ದಾಖಲೆ ನಿರ್ಮಿಸಿದ್ದರು.
ಇದೀಗ ಈ ದಾಖಲೆ ಮುರಿಯಲು ರೋಹಿತ್ ಶರ್ಮಾಗೆ ಬೇಕಿರುವುದು ಕೇವಲ 22 ರನ್ಗಳು ಮಾತ್ರ. ಸದ್ಯ 17 ಇನಿಂಗ್ಸ್ಗಳಲ್ಲಿ 978 ರನ್ ಕಲೆಹಾಕಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಥವಾ ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಒಟ್ಟು 22 ರನ್ ಕಲೆಹಾಕಿದರೆ ಏಕದಿನ ವಿಶ್ವಕಪ್ನಲ್ಲಿ ಅತೀ ವೇಗವಾಗಿ 1000 ರನ್ ಪೂರೈಸಿದ ವಿಶ್ವ ದಾಖಲೆ ಹಿಟ್ಮ್ಯಾನ್ ಪಾಲಾಗಲಿದೆ.
ಇನ್ನು ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಸಾವಿರ ರನ್ ಪೂರೈಸಲು 25 ಇನಿಂಗ್ಸ್ಗಳನ್ನು ತೆಗೆದುಕೊಂಡಿದ್ದರು. ಇದೀಗ ಕೇವಲ ಎರಡು ವಿಶ್ವಕಪ್ (2015, 2019) ಮೂಲಕ ಸಾವಿರ ರನ್ ಪೂರೈಸಿ ಹೊಸ ಇತಿಹಾಸ ಬರೆಯುವ ಹೊಸ್ತಿಲಲ್ಲಿದ್ದಾರೆ ರೋಹಿತ್ ಶರ್ಮಾ.