ಹೊಸ ಬಣ್ಣ, ಕಡಿಮೆ ಬೆಲೆ: ಭಾರತದಲ್ಲಿ ವಿಶೇಷವಾಗಿ ಬಿಡುಗಡೆ ಆಯಿತು ಮೋಟೋ E13
Moto E13 Sky Blue colour variant: ಮೋಟೋರೊಲಾ ಇದೀಗ ಭಾರತದಲ್ಲಿ ಮೋಟೋ E13 ಅನ್ನು ಹೊಸ ಬಣ್ಣದ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ. ಇದು 8GB + 128GB ಮಾದರಿಗೆ ಮಾತ್ರ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಕೆನೆ ವೈಟ್, ಅರೋರಾ ಗ್ರೀನ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರಾಟ ಕಾಣುತ್ತಿದೆ.
ಮೋಟೋರೊಲಾ ಕಂಪನಿ ಈ ವರ್ಷದ ಆರಂಭದಲ್ಲಿ ತನ್ನ ಬಜೆಟ್ ಸ್ಮಾರ್ಟ್‌ಫೋನ್ ಮೋಟೋ E13 (Moto E13) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತು. ಅತ್ಯಂತ ಕಡಿಮೆ ಬೆಲೆ ಹಾಗೂ ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಫೋನಿಗೆ ಉತ್ತಮ ಪ್ರತಿಕ್ರಿಯೆ ಕೂಡ ಕೇಳಿ ಬಂದಿತ್ತು. ಆರಂಭದಲ್ಲಿ ಈ ಫೋನ್ 2GB + 64GB ಮತ್ತು 4GB + 64GB ಯ ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಯಿತು. ನಂತರ ಆಗಸ್ಟ್‌ನಲ್ಲಿ 8GB + 128GB ರೂಪಾಂತರವನ್ನು ಪರಿಚಯಿಸಿತು. ಮೋಟೋರೊಲಾ ಇದೀಗ ಭಾರತದಲ್ಲಿ ಮೋಟೋ E13 ಅನ್ನು ಹೊಸ ಬಣ್ಣದ ರೂಪಾಂತರದಲ್ಲಿ ಬಿಡುಗಡೆ ಮಾಡಿದೆ.
ಮೋಟೋ E13 ಹೊಸ ಬಣ್ಣ ಯಾವುದು?
ಮೋಟೋ E13 ಈಗ ಹೊಸ ‘ಸ್ಕೈ ಬ್ಲೂ’ ಬಣ್ಣದ ರೂಪಾಂತರದಲ್ಲಿ ಅನಾವರಣಗೊಂಡಿದೆ. ಇದು 8GB + 128GB ಮಾದರಿಗೆ ಮಾತ್ರ ಲಭ್ಯವಿದೆ. ಈ ಸ್ಮಾರ್ಟ್‌ಫೋನ್ ಈಗಾಗಲೇ ಕೆನೆ ವೈಟ್, ಅರೋರಾ ಗ್ರೀನ್ ಮತ್ತು ಕಾಸ್ಮಿಕ್ ಬ್ಲ್ಯಾಕ್ ಎಂಬ ಮೂರು ಬಣ್ಣದ ಆಯ್ಕೆಗಳಲ್ಲಿ ಮಾರಾಟ ಕಾಣುತ್ತಿದೆ. ಮೋಟೋರೊಲಾ X ನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಘೋಷಿಸಿದೆ. ಜೊತೆಗೆ ವಿಶೇಷ ಆಫರ್ ಕೂಡ ಪ್ರಕಟಿಸಿದೆ.
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್: ಸ್ಮಾರ್ಟ್‌ಫೋನ್ ಬೇಕಿದ್ದರೆ ಇದರಲ್ಲಿ ಖರೀದಿಸಿ: ಆಫರ್ ನೋಡಿ
ಮೋಟೋ E13 ಸ್ಮಾರ್ಟ್‌ಫೋನ್ 6,749 ರೂ. ಗೆ ವಿಶೇಷ ಬೆಲೆಯೊಂದಿಗೆ ಲಭ್ಯವಿರುತ್ತದೆ. ಇದರ ಮೂಲ ಬೆಲೆ 8,999 ರೂ. ಆಗಿದೆ. ಈ ರಿಯಾಯಿತಿಯು ಬ್ಯಾಂಕ್ ಕೊಡುಗೆಗಳನ್ನು ಒಳಗೊಂಡಿರುತ್ತದೆ. ಮೊಟೊರೊಲಾ ವೆಬ್‌ಸೈಟ್ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಸಬಹುದು. ಅಕ್ಟೋಬರ್ 8 ರಂದು ಪ್ರಾರಂಭವಾಗಲಿರುವ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 ರಲ್ಲೂ ಈ ಫೋನ್ ಖರೀದಿಸಬಹುದು.
ಮೋಟೋ E13 ಫೀಚರ್ಸ್:
ಡಿಸ್‌ಪ್ಲೇ: ಮೋಟೋ E13 ಸ್ಮಾರ್ಟ್‌ಫೋನ್ 6.5-ಇಂಚಿನ IPS LCD ಡಿಸ್‌ಪ್ಲೇ ಜೊತೆಗೆ 20:9 ಅನುಪಾತವನ್ನು ಹೊಂದಿದೆ.
ಪ್ರೊಸೆಸರ್: ಈ ಫೋನ್ ಯುನಿಸಾಕ್ T606 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ.
RAM ಮತ್ತು ಸಂಗ್ರಹಣೆ: ಇದು 2GB + 64GB, 4GB + 64GB, ಮತ್ತು 8GB + 128GB ಯ ಮೂರು ಶೇಖರಣಾ ರೂಪಾಂತರಗಳಲ್ಲಿ ಬರುತ್ತದೆ.
ಕ್ಯಾಮೆರಾಗಳು: ಈ ಸ್ಮಾರ್ಟ್‌ಫೋನ್ 13MP ಪ್ರಾಥಮಿಕ ಕ್ಯಾಮೆರಾ ಮತ್ತು 5MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಬ್ಯಾಟರಿ: ಮೋಟೋ E13 10W ಚಾರ್ಜಿಂಗ್ ವೇಗದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 13 (Go Edition) ಮೂಲಕ ರನ್ ಆಗುತ್ತದೆ.
ಇತರೆ ವೈಶಿಷ್ಟ್ಯಗಳು: IP52 ರೇಟಿಂಗ್ (ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ), 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-ಸಿ ಪೋರ್ಟ್, ಡಾಲ್ಬಿ ಅಟ್ಮಾಸ್ ಮತ್ತು ಬ್ಲೂಟೂತ್ 5.0.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ