- Kannada News Photo gallery Photography Camera 108 mega pixel Phone Moto G73 now available with big biscounts on Flipkart
ಫೋಟೋಗ್ರಫಿಗೆ ಮೊಬೈಲ್ ಬೇಕಿದ್ದರೆ ಕೂಡಲೇ ಈ ಸ್ಮಾರ್ಟ್‌ಫೋನ್ ಖರೀದಿಸಿ: ಕೇವಲ 16,999 ರೂ.
Photography Camera Smartphone: ನೀವು ಫೋಟೋಗ್ರಫಿ ಪ್ರಿಯರಾಗಿದ್ದಲ್ಲಿ ಇದನ್ನು ಖರೀದಿಸಬಹುದು. ಮೋಟೋ G72 ಸ್ಮಾರ್ಟ್‌ಫೋನಿನ 6GB RAM + 128GB ಸ್ಟೋರೇಜ್ ವೇರಿಯಂಟ್ ಮೂಲಬೆಲೆ 21,999 ರೂ. ಆದರೀಗ ಈ ಫೋನ್ ಮೇಲೆ ಬರೋಬ್ಬರಿ 5,000ರೂ. ಇಳಿಕೆ ಮಾಡಲಾಗಿದೆ. ಕೇವಲ 16,999ರೂ. ಗಳಿಗೆ ಸೇಲ್ ಆಗುತ್ತಿದೆ.
Updated on: Sep 30, 2023 | 6:55 AM

ಇಂದು ಫೋಟೋಗ್ರಫಿ ಮಾಡಲು ಡಿಎಸ್ಎಲ್ಆರ್ ಕ್ಯಾಮೆರಾವೇ ಬೇಕು ಎಂದಿಲ್ಲ. ಯಾಕೆಂದರೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ಫೋನ್ಗಳು ಕೂಡ ಮಾರುಕಟ್ಟೆಗೆ ಇಂದು ಲಗ್ಗೆಯಿಟ್ಟಿದೆ. ಆದರೆ, ಇದರ ಬೆಲೆ ದುಬಾರಿ ಆಗಿರುತ್ತದೆ. ಇದರ ಮಧ್ಯೆ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನ್ ಕೈಗೆಟುವ ಬೆಲೆಗೆ ಲಭ್ಯವಿರುತ್ತದೆ.

ಶವೋಮಿ, ರೆಡ್ಮಿ, ರಿಯಲ್ ಮಿ, ಮೋಟೋ, ಸ್ಯಾಮ್ಸಂಗ್ ಹೀಗೆ ಬಹುತೇಕ ಎಲ್ಲ ಮೊಬೈಲ್ ಬ್ರ್ಯಾಂಡ್ಗಳು 108 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಪರಿಚಯಿಸಿವೆ. ಇದೀಗ ಮೋಟೋರೊಲಾ ಕಂಪನಿ ಕಳೆದ ವರ್ಷ ಅನಾವರಣ ಮಾಡಿದ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಮೋಟೋ ಜಿ72 (Moto G72) ಸ್ಮಾರ್ಟ್‌ಫೋನ್ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ.

ನೀವು ಫೋಟೋಗ್ರಫಿ ಪ್ರಿಯರಾಗಿದ್ದಲ್ಲಿ ಇದನ್ನು ಖರೀದಿಸಬಹುದು. ಮೋಟೋ G72 ಸ್ಮಾರ್ಟ್‌ಫೋನಿನ 6GB RAM + 128GB ಸ್ಟೋರೇಜ್ ವೇರಿಯಂಟ್ ಮೂಲಬೆಲೆ 21,999 ರೂ. ಆದರೀಗ ಈ ಫೋನ್ ಮೇಲೆ ಬರೋಬ್ಬರಿ 5,000ರೂ. ಇಳಿಕೆ ಮಾಡಲಾಗಿದೆ. ಕೇವಲ 16,999ರೂ. ಗಳಿಗೆ ಸೇಲ್ ಆಗುತ್ತಿದೆ.

ಈ ಫೋನನ್ನು ನೀವು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್ ಮೂಲಕ ಖರೀದಿಸಬಹುದು. ಮೋಟೋ G72 ಸ್ಮಾರ್ಟ್‌ಫೋನಿನ ಮೇಲೆ ಶೇ. 21 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಇದರ ಜೊತೆಗೆ ಎಕ್ಸ್ಚೇಂಜ್ ಆಫರ್ ಕೂಡ ಲಭ್ಯವಿದೆ. ಈ ಫೋನ್ ಗ್ರೇ ಮತ್ತು ಪೋಲಾರ್ ಬ್ಲೂ ಬಣ್ಣದ ಆಯ್ಕೆ ಪಡೆದಿದೆ.

ಈ ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಫೋರ್ಟ್ ಪಡೆದಿದ್ದು, 6.6 ಇಂಚಿನ ಫುಲ್ ಹೆಚ್ಡಿ+ pOLED ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ನಿಂದ ಕೂಡಿದೆ. ಮೀಡಿಯಾ ಟೆಕ್ ಹಿಲಿಯೋ G99 ಪ್ರೊಸೆಸರ್ ವೇಗದ ಜೊತೆ ಆಂಡ್ರಾಯ್ಡ್ 12 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಮೆಮೊರಿ ಕಾರ್ಡ್ ಮೂಲಕ ಸಂಗ್ರಹ ವಿಸ್ತರಣೆಗೆ ಅವಕಾಶ ಇರಲಿದೆ. IP52 ರೇಟಿಂಗ್ ಅನ್ನು ಸಹ ಹೊಂದಿದ್ದು, ವಾಟರ್ ರೆಸಿಸ್ಟೆನ್ಸ್ ಆಯ್ಕೆ ಪಡೆದಿದೆ. ಡಾಬ್ಲಿ ಅಟ್ಮೋಸ್ ಆಡಿಯೋದೊಂದಿಗೆ ಸ್ಟಿರಿಯೊ ಸ್ಪೀಕರ್ ರಚನೆಯನ್ನು ಈ ಸ್ಮಾರ್ಟ್‌ಫೋನ್ ಪಡೆದಿರುವುದು ವಿಶೇಷ. ಮೋಟೋ G72 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಇದು ಫೋಟೋಗ್ರಫಿಗೆ ಹೇಳಿಮಾಡಿಸಿದಂತಿದೆ. ಸ್ಯಾಮ್ಸಂಗ್ HM6 ಸೆನ್ಸಾರ್ ನೀಡಲಾಗಿದೆ.

ಎರಡನೇ ಕ್ಯಾಮೆರಾ 8 ಮೆಗಾಫಿಕ್ಸೆಲ್ನ ಆಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್ ಪಡೆದಿದೆ. ಮೂರನೇ ಕ್ಯಾಮೆರಾ 2 ಮೆಗಾಫಿಕ್ಸೆಲ್ನ ಮೈಕ್ರೋ ಶೂಟರ್ ಸೆನ್ಸಾರ್ ಅನ್ನು ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿರಲಿದೆ.

ದೀರ್ಘ ಸಮಯ ಬಾಳಿಕೆ ಬರುವ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ನೀಡಲಾಗಿದ್ದು, 33W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡ ಇದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ ಎಂಬುದು ಬೇಸರದ ಸಂಗತಿ. 4 ಜಿ, ವೈ-ಫೈ, ಬ್ಲೂಟೂತ್ 5.0, ಎನ್‌ಎಫ್‌ಸಿ, ಜಿಪಿಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ನೀಡಲಾಗಿದೆ.



















