ಬಿಗ್ ಬಿಲಿಯನ್ ಡೇಸ್ ಆರಂಭದ ಮುನ್ನವೇ ಬಂಪರ್ ಆಫರ್: ಸ್ಮಾರ್ಟ್ಫೋನ್ಸ್ ಮೇಲೆ ಆಕರ್ಷಕ ಡಿಸ್ಕೌಂಟ್
Flipkart Big Billion Days sale Offers: ಫ್ಲಿಪ್‌ಕಾರ್ಟ್ ಕಂಪನಿಯು ಬಿಗ್ ಬಿಲಿಯನ್ ಡೇಸ್ ಮಾರಾಟಕ್ಕೆ ಮುಂಚಿತವಾಗಿ, ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಬಂಪರ್ ರಿಯಾಯಿತಿಗಳನ್ನು ಘೋಷಿಸಿದೆ. ಮೋಟೋ G32, ರಿಯಲ್ ಮಿ C55, ಸ್ಯಾಮ್ಸಂಗ್ ಗ್ಯಾಲಕ್ಸಿ F13 ಸೇರಿದಂತೆ ಹಲವಾರು ಫೋನ್‌ಗಳು ಈಗಾಗಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್ಗೆ ಸೇಲ್ ಆಗುತ್ತಿದೆ.
ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ (Flipkart Big Billion Days sale) ಮಾರಾಟಕ್ಕೆ ಕೆಲವೇ ದಿನಗಳು ಬಾಕಿ ಉಳಿದಿದೆ. ರಿಯಾಯಿತಿ ದರದಲ್ಲಿ ಯಾವ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದು ಎಂದು ತಿಳಿಯಲು ಜನರು ಉತ್ಸುಕರಾಗಿದ್ದಾರೆ. ಎಲ್ಲರಿಗೂ ಅಕ್ಟೋಬರ್ 8 ರಿಂದ ಬಿಗ್ ಬಿಲಿಯನ್ ಡೇಸ್ ಸೇಲ್ ಪ್ರಾರಂಭವಾಗುತ್ತದೆ. ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರು ಅಕ್ಟೋಬರ್ 7 ರಂದು ಒಂದು ದಿನ ಮುಂಚಿತವಾಗಿ ಪ್ರವೇಶವನ್ನು ಪಡೆಯುತ್ತಾರೆ. ಆದರೀಗ ಫ್ಲಿಪ್‌ಕಾರ್ಟ್ ಕಂಪನಿಯು ಮಾರಾಟಕ್ಕೆ ಮುಂಚಿತವಾಗಿ, ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಬಂಪರ್ ರಿಯಾಯಿತಿಗಳನ್ನು ಘೋಷಿಸಿದೆ.
ಮೋಟೋ G32, ರಿಯಲ್ ಮಿ C55, ಸ್ಯಾಮ್ಸಂಗ್ ಗ್ಯಾಲಕ್ಸಿ F13 ಸೇರಿದಂತೆ ಹಲವಾರು ಫೋನ್‌ಗಳು ಈಗಾಗಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಆಕರ್ಷಕ ಡಿಸ್ಕೌಂಟ್ಗೆ ಸೇಲ್ ಆಗುತ್ತಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ F13 – ರೂ. 9,199
ಸ್ಯಾಮ್ಸಂಗ್ ಗ್ಯಾಲಕ್ಸಿ F13 ಕೇವಲ 9,199 ರೂ. ಬೆಲೆಯಲ್ಲಿ ಲಭ್ಯವಿದೆ. ಈ ಫೋನ್‌ನ ಮೂಲಬೆಲೆ ರೂ. 14,999 ಮತ್ತು ಇದು 6.6-ಇಂಚಿನ ಪೂರ್ಣ HD ಡಿಸ್ ಪ್ಲೇ ಜೊತೆಗೆ 50-ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತದೆ. ಗೊರಿಲ್ಲಾ ಗ್ಲಾಸ್ ರಕ್ಷಣೆ ನೀಡಲಾಗಿದ್ದು, ಬೆಸ್ಟ್ ಬಜೆಟ್ ಫೋನಾಗಿದೆ.
15 ನಿಮಿಷದಲ್ಲಿ ಶೇ.50 ಚಾರ್ಜ್: ಇಂದಿನಿಂದ ಮೋಟೋ ಎಡ್ಜ್ 40 ನಿಯೋ ಖರೀದಿಗೆ ಲಭ್ಯ
ಇನ್ಫಿನಿಕ್ಸ್ ಸ್ಮಾರ್ಟ್ 7- ರೂ. 6,599
ಆಕರ್ಷಕವಾದ ಇನ್ಫಿನಿಕ್ಸ್ ಸ್ಮಾರ್ಟ್ 7 ಫೋನ್ ಕೈಗೆಟಕುವ ದರಕ್ಕೆ ಮಾರಾಟ ಆಗುತ್ತಿದೆ. ಈ ಫೋನ್ 6.6-ಇಂಚಿನ HD ಡಿಸ್ ಪ್ಲೇ, 13-ಮೆಗಾಪಿಕ್ಸೆಲ್ ಹಿಂಭಾಗದ ಕ್ಯಾಮೆರಾ ಮತ್ತು 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾದೊಂದಿಗೆ ಬರುತ್ತದೆ. ಯುನಿಸಕ್ Spreadtrum SC9863A1 ಪ್ರೊಸೆಸರ್‌ನಿಂದ ನಡೆಸಲ್ಪಡುವ ಈ ಫೋನ್ ರೂ. 6,599 ಬೆಲೆಯಲ್ಲಿ ಖರೀದಿಸಬಹುದು. ಈ ಫೋನ್‌ನ ಮೂಲಕಬೆಲೆ 9,999 ರೂ..
ರಿಯಲ್ ಮಿ C55- ರೂ. 10,999
ರಿಯಲ್ ಮಿ C55 ಮೂಲಬೆಲೆ 12,999 ರೂ. ಆದರೆ, ವಿಶೇಷ ರಿಯಾಯಿತಿಯಲ್ಲಿ ಈ ಫೋನ್ 10,999 ರೂ. ಗೆ ಸೇಲ್ ಕಾಣುತ್ತಿದೆ. ಇದು 6.72-ಇಂಚಿನ ಡಿಸ್ ಪ್ಲೇ ಜೊತೆಗೆ 1080×2400 px ರೆಸಲ್ಯೂಶನ್ ಮತ್ತು 680 nits ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. 90 Hz ರಿಫ್ರೆಶ್ ದರದೊಂದಿಗೆ ಇದು ಮೊದಲ C-ಸರಣಿ ಮಾದರಿಯಾಗಿದೆ.
ಒಪ್ಪೋ A17k- ರೂ. 8,999
ಒಪ್ಪೋ A17k ಸಹ ರೂ. 8,999 ಬೆಲೆಯಲ್ಲಿ ಲಭ್ಯವಿದೆ. ಈ ಫೋನ್‌ನ ಮೂಲಬೆಲೆ 12,999 ರೂ. 6.5-ಇಂಚಿನ HD+ ಡಿಸ್ ಪ್ಲೇ ಜೊತೆಗೆ 1612 x 720 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಈ ಫೋನ್ 8-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು 5,000 mAh ಬ್ಯಾಟರಿಯನ್ನು ಹೊಂದಿದೆ.
ಮೋಟೋ G32- ರೂ. 9,999
ಮೋಟೋ G32 ಸಹ ಭಾರೀ ರಿಯಾಯಿತಿಯಲ್ಲಿ ಲಭ್ಯವಿದೆ. ಇದರ ಮೂಲಬೆಲೆ ರೂ. 18,999 ಆಗಿದೆ. ಆದರೀಗ ಕೇವಲ 9,999 ರೂ. ಗೆ ಲಭ್ಯವಿದೆ. ಈ ಫೋನ್ 6.5-ಇಂಚಿನ ಪೂರ್ಣ HD ಡಿಸ್ ಪ್ಲೇ, 5000mAh ಲಿಥಿಯಂ ಪಾಲಿಮರ್ ಬ್ಯಾಟರಿ ಮತ್ತು 50MP + 8MP + 2MP ಹಿಂಭಾಗದ ಕ್ಯಾಮೆರಾ ಸೆಟಪ್ನೊಂದಿಗೆ ಬರುತ್ತದೆ. ಮುಂಭಾಗದ ಕ್ಯಾಮರಾ 16MP ಆಗಿದೆ. ಈ ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 680 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ