- TV9 Kannada Kannada News Photos Samsung launching soon its Fan Edition FE model from Galaxy S23 series
ಸದ್ಯದಲ್ಲೇ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ ಬಿಡುಗಡೆ: ಬೆಲೆ, ಫೀಚರ್ಸ್ ಏನಿರಬಹುದು?
Samsung Galaxy S23 FE Launch Date: 2022ರ ಬಳಿಕ ಅನಾವರಣಗೊಳ್ಳುತ್ತಿರುವ ಮೊದಲ ಫ್ಯಾನ್ ಎಡಿಷನ್ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್ ಗ್ಯಾಲಕ್ಸಿ S23 ಆಗಿದೆ. ಈ ವರ್ಷದ ಆರಂಭದಿಂದಲೂ FE ಮಾದರಿ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದ್ದವು. ಈ ಸ್ಮಾರ್ಟ್‌ಫೋನ್ ಇದೇ ತಿಂಗಳು ಸೆಪ್ಟೆಂಬರ್ 23 ರಂದು ಅನಾವರಣಗೊಳ್ಳಲಿದೆ ಎನ್ನಲಾಗಿದೆ.
Updated on: Sep 08, 2023 | 11:46 AM

ಸ್ಯಾಮ್‌ಸಂಗ್ ತನ್ನ ಪ್ರಮುಖ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ (Samsung Galaxy S23 FE) ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಯಾಮ್‌ಸಂಗ್ 2022 ರಲ್ಲಿ ಕೊನೆಯದಾಗಿ ಗ್ಯಾಲಕ್ಸಿ S21 FE ಬಿಡುಗಡೆ ಮಾಡಿತ್ತು.

2022ರ ಬಳಿಕ ಅನಾವರಣಗೊಳ್ಳುತ್ತಿರುವ ಮೊದಲ ಫ್ಯಾನ್ ಎಡಿಷನ್ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S23 ಆಗಿದೆ. ಈ ವರ್ಷದ ಆರಂಭದಿಂದಲೂ FE ಮಾದರಿ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದ್ದವು. ಈ ಸ್ಮಾರ್ಟ್‌ಫೋನ್ ಇದೇ ತಿಂಗಳು ಸೆಪ್ಟೆಂಬರ್ 23 ರಂದು ಅನಾವರಣಗೊಳ್ಳಲಿದೆ ಎನ್ನಲಾಗಿದೆ.

”ನಾವು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಆವೃತ್ತಿಯನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ,” ಎಂದು ಕಂಪನಿ ಹೇಳಿದೆ. ಗ್ಯಾಲಕ್ಸಿ ಎಸ್ 23 ಎಫ್‌ಇ ಬಿಡುಗಡೆ ದಿನಾಂಕವನ್ನು ಸ್ಯಾಮ್‌ಸಂಗ್ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಪ್ರಕಾರ, ಲಾಂಚ್ ಟೈಮ್‌ಲೈನ್ ಅನ್ನು ಸೆಪ್ಟೆಂಬರ್ನಲ್ಲಿ ನಿಗದಿ ಮಾಡಲಾಗಿದೆ. ಇದರ ಬೆಲೆ 54,999 ರೂ. ಇರಬಹುದೆಂದು ಹೇಳಲಾಗಿದೆ.

ಡಿಸ್ ಪ್ಲೇ, ಪ್ರೊಸೆಸತಗ: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ FHD+ ಡೈನಾಮಿಕ್ AMOLED ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಗ್ಯಾಲಕ್ಸಿ S22 ಸರಣಿಯಲ್ಲಿ ಇದೇ ಚಿಪ್‌ಸೆಟ್ ನೀಡಲಾಗುತ್ತು.

ಕ್ಯಾಮೆರಾಗಳು: OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 8MP ಕ್ಯಾಮೆರಾ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. ಸೆಲ್ಫಿಗಾಗಿ, ಇದು 10MP ಮುಂಭಾಗದ ಕ್ಯಾಮೆರಾವನ್ನು ಹೊಂದಿರಬಹುದು. ಈ ಫೋನ್ IP ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ ಆದರೆ ನಿಖರವಾದ ರೇಟಿಂಗ್ ಇನ್ನೂ ತಿಳಿದುಬಂದಿಲ್ಲ.

ಬ್ಯಾಟರಿ, ಸಾಫ್ಟ್‌ವೇರ್: ಈ ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 13 ಅನ್ನು ಆಧರಿಸಿದ UI 5.1 ಮೂಲಕ ರನ್ ಆಗುತ್ತದೆ. ಸ್ಯಾಮ್‌ಸಂಗ್ ನಾಲ್ಕು ವರ್ಷಗಳವರೆಗೆ ಆಂಡ್ರಾಯ್ಡ್ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಐದು ವರ್ಷಗಳವರೆಗೆ ಭದ್ರತಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.
Read More



