- Kannada News Photo gallery Xiaomi 12 Pro phone now available with huge discount on Amazon India check price and specs
ಬರೋಬ್ಬರಿ 120W ಹೈಪರ್ ಚಾರ್ಜರ್ ಇರುವ ಶವೋಮಿ 12 ಪ್ರೊ ಫೋನ್ ಈಗ ಅತಿ ಕಡಿಮೆ ಬೆಲೆಗೆ ಲಭ್ಯ
Xiaomi 12 Pro Discounts on Amazon: ಶವೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಬಂಪರ್ ಡಿಸ್ಕೌಂಟ್ನಲ್ಲಿ ಸೇಲ್ ಆಗುತ್ತಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಫೋನಿನ ಮೇಲೆ ಶೇ. 48 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಶವೋಮಿ 12 ಪ್ರೊ 5Gಯ ಮೂಲಬೆಲೆ 79,999 ರೂ. ಆಗಿದೆ.
Updated on: Sep 09, 2023 | 6:55 AM

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಕಳೆದ ವರ್ಷ ಶವೋಮಿ 12 ಪ್ರೊ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಿತ್ತು. ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಈಗ ಬಂಪರ್ ಡಿಸ್ಕೌಂಟ್ನಲ್ಲಿ ಸೇಲ್ ಆಗುತ್ತಿದೆ.

ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಶವೋಮಿ 12 ಪ್ರೊ 5G ಫೋನಿನ ಮೇಲೆ ಶೇ. 48 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ಫೋನಿನ 8GB RAM ಮತ್ತು 256GB ರೂಪಾಂತರದ ಆಯ್ಕೆಯ ಮೂಲಬೆಲೆ 79,999 ರೂ. ಇದೆ. ಆದರೀಗ ಡಿಸ್ಕೌಂಟ್ನಲ್ಲಿ ಇದು ಕೇವಲ 41,999 ರೂ. ಗೆ ಸೇಲ್ ಆಗುತ್ತಿದೆ.

ಶವೋಮಿ 12 ಪ್ರೊ ಸ್ಮಾರ್ಟ್‌ಫೋನ್ 6.72 ಇಂಚಿನ WQHD+ E5 ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,440×3,200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ, 1Hz ಮತ್ತು 120Hz ನಡುವಿನ ರಿಫ್ರೆಶ್ ರೇಟ್ ಬೆಂಬಲಿಸುತ್ತದೆ.

ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 12 ಅನ್ನು MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256GB ಇಂಟರ್ ಸ್ಟೋರೇಜ್ ಅನ್ನು ಒಳಗೊಂಡಿದೆ.

ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX707 ಸೆನ್ಸಾರ್ ಅನ್ನು ಹೊಂದಿದ್ದು, ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಬೆಂಬಲಿಸುವ f/1.8 ಲೆನ್ಸ್ ನೀಡಲಾಗಿದೆ.

ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮೂರನೇ ಕ್ಯಾಮೆತಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಸಹ ಒಳಗೊಂಡಿದೆ. ಇನ್ನು ರಿಯರ್ ಕ್ಯಾಮೆರಾ 24fps ಫ್ರೇಮ್ ರೇಟ್‌ನಲ್ಲಿ 8K ವೀಡಿಯೊ ರೆಕಾರ್ಡಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗದೆ.

ಶವೋಮಿ 12 ಪ್ರೊ ಸ್ಮಾರ್ಟ್‌ಫೋನ್ 4,600mAh ಲಿ-ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಇದು 120W ಶವೋಮಿ ಹೈಪರ್ ಚಾರ್ಜ್ ವೇಗದ ವೈರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು 18 ನಿಮಿಷಗಳಲ್ಲಿ 0-100 % ಚಾರ್ಜ್ ಆಗುತ್ತದೆ.

ಇದಲ್ಲದೆ, ಶವೋಮಿ 12 ಪ್ರೊ ಸ್ಮಾರ್ಟ್‌ಫೋನ್ 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಉಳಿದಂತೆ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6E, ಬ್ಲೂಟೂತ್ v5.2, GPS/ A-GPS/ NavIC, ಇನ್ಫ್ರಾರೆಡ್ (IR) ಬ್ಲಾಸ್ಟರ್, NFC, ಮತ್ತು USB ಟೈಪ್-C ಪೋರ್ಟ್ ಸಪೋರ್ಟ್ ಪಡೆದುಕೊಂಡಿದೆ.



















