AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮೋಮೋಸ್​ ಪ್ರಿಯರಾ?; ಆರೋಗ್ಯದ ಬಗ್ಗೆ ಇರಲಿ ಎಚ್ಚರ

ಮೋಮೋಸ್ ಮಾಡುವಾಗ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ನಾಶವಾಗುತ್ತದೆ. ಹೀಗಾಗಿ, ಮೋಮೋಸ್ ಅನ್ನು ಹಿತಮಿತವಾಗಿ ತಿನ್ನುವುದು ಒಳಿತು.

ಸುಷ್ಮಾ ಚಕ್ರೆ
|

Updated on: Sep 08, 2023 | 6:36 PM

ಹೊಸ ಹೊಸ ರೀತಿಯ ತಿಂಡಿ- ತಿನಿಸುಗಳು ಹೋಟೆಲ್​ಗಳಲ್ಲಿ, ರಸ್ತೆ ಬದಿಯ ಫುಡ್​ ಸ್ಟಾಲ್​ಗಳಲ್ಲಿ ಸ್ಥಾನ ಪಡೆಯುತ್ತಲೇ ಇರುತ್ತದೆ. ಅದರಲ್ಲಿ ಇತ್ತೀಚೆಗೆ ಸೇರ್ಪಡೆಯಾಗಿರುವ ತಿಂಡಿ ಮೋಮೋಸ್.

1 / 10
ಎಣ್ಣೆ ಉಪಯೋಗಿಸದೆ ಹಬೆಯಲ್ಲಿ ಬೇಯಿಸಿ ಮಾಡಲಾಗುವ ಈ ತಿಂಡಿಯನ್ನು ಬಹಳ ಆರೋಗ್ಯಯುತವಾದ ಸ್ನ್ಯಾಕ್ಸ್​ ಎಂದು ಅನೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ.

2 / 10
ಗೋಬಿ ಮಂಚೂರಿ, ಪಾನಿ ಪೂರಿಯಂತೆ ರಸ್ತೆ ಬದಿಯ ಸ್ಟಾಲ್​ನಿಂದ ದೊಡ್ಡ ರೆಸ್ಟೋರೆಂಟ್​ಗಳವರೆಗೆ, ಎಲ್ಲ ದರಗಳಲ್ಲೂ ಈ ಮೋಮೋಸ್ ಲಭ್ಯವಿದೆ.

3 / 10
ಈ ಮೋಮೋಸ್ ಅನ್ನು ಮೊದಲು ನೇಪಾಳದ ಜನರು ಇಷ್ಟದ ಆಹಾರವಾಗಿ ತಿನ್ನಲು ಆರಂಭಿಸಿದರು. ಬಳಿಕ ಭಾರತದಲ್ಲಿ ಅಸ್ಸಾಂ ಮತ್ತು ಮಣಿಪುರದಲ್ಲಿ ಮೊಮೋಸ್ ಜನಪ್ರಿಯತೆ ಪಡೆಯಿತು.

4 / 10
ಇದೀಗ ಭಾರತದ ಎಲ್ಲ ನಗರಗಳಲ್ಲೂ, ಊರುಗಳಲ್ಲೂ ಮೋಮೋಸ್​ ತಯಾರಿಸಲಾಗುತ್ತಿದೆ.

5 / 10
ಆದರೆ, ನಿಜಕ್ಕೂ ಈ ಮೋಮೋಸ್ ತಿನ್ನುವುದು ಆರೋಗ್ಯಕರವೇ? ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯ ಮುಖ್ಯ ಆಹಾರ ತಜ್ಞರಾದ ಭಕ್ತಿ ಸಾಮಂತ್ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

6 / 10
ನೀವು ಮೋಮೋಸ್ ಪ್ರಿಯರಾಗಿದ್ದರೆ ಪದೇ ಪದೆ ಈ ತಿಂಡಿಯನ್ನು ತಿನ್ನದಿರುವುದೇ ಉತ್ತಮ. ಇದರಿಂದ ನಿಮ್ಮ ಆರೋಗ್ಯಕ್ಕೆ ಅಪಾಯ ಉಂಟಾದೀತು.

7 / 10
ಇದನ್ನು ಆವಿಯಲ್ಲಿ ಬೇಯಿಸಿ ಮತ್ತು ತರಕಾರಿಗಳು ಅಥವಾ ಮಾಂಸದಿಂದ ತುಂಬಿದ್ದರೂ ಇದರಲ್ಲಿ ಪೌಷ್ಠಿಕಾಂಶದ ಪ್ರಯೋಜನಗಳು ಕಡಿಮೆ ಇರುತ್ತದೆ.

8 / 10
ಸಮಂತ್ ಅವರ ಪ್ರಕಾರ, ಇದನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದನ್ನು ಹೊಸತಾಗೇನೂ ಹೇಳಬೇಕಾಗಿಲ್ಲ. ಪ್ರತಿದಿನ ಮೊಮೊಸ್ ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಕುಗ್ಗಿ  ರೋಗನಿರೋಧಕ ಶಕ್ತಿ ದುರ್ಬಲಗೊಂಡು ದೇಹಕ್ಕೆ ಆಯಾಸ ಉಂಟಾಗುತ್ತದೆ.

9 / 10
ಮೊಮೊಸ್ ಹಿಟ್ಟನ್ನು ಹಬೆಯಲ್ಲಿ ಬೇಯಿಸುವುದರಿಂದ ಅದರಲ್ಲಿರುವ ಪ್ರೋಟೀನ್ ಅಂಶವನ್ನು ಹೊರ ಹಾಕಿ ಆಮ್ಲೀಯತೆಯನ್ನು ಉತ್ಪಾದಿಸುತ್ತದೆ. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಇದರ ಸೇವನೆಯಿಂದ ರಕ್ತದಲ್ಲಿ ಗ್ಲೂಕೋಸ್ ಸಂಗ್ರಹಿಸಿ ಸಂಧಿವಾತ ಮತ್ತು ಹೃದಯ ಸಂಬಂಧಿ ರೋಗಗಳು ಉಂಟಾಗಬಹುದು.

10 / 10
Follow us