ಒಪ್ಪೋದಿಂದ ಮಹತ್ವದ ಘೋಷಣೆ: ಅ. 12ಕ್ಕೆ ಬಿಡುಗಡೆ ಆಗುತ್ತೆ ಹೊಸ ಮಡಚುವ ಸ್ಮಾರ್ಟ್​ಫೋನ್

Oppo Find N3 Flip India Launch Date: ಒಪ್ಪೋ ತನ್ನ ಹೊಸ ಒಪ್ಪೋ ಫೈಂಡ್ N3 ಫ್ಲಿಪ್ ಫೋನಿನ ಕೆಲವು ಪ್ರಮುಖ ವಿಶೇತೆಗಳನ್ನು ಸಹ ದೃಢಪಡಿಸಿದೆ ಮತ್ತು ಇದು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದಂತೆಯೇ ಇದೆ. ಆದರೆ, ಇದರ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಒಪ್ಪೋ ಫೈಂಡ್ N3 ಫ್ಲಿಪ್ 90,000 ರೂ. ಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

ಒಪ್ಪೋದಿಂದ ಮಹತ್ವದ ಘೋಷಣೆ: ಅ. 12ಕ್ಕೆ ಬಿಡುಗಡೆ ಆಗುತ್ತೆ ಹೊಸ ಮಡಚುವ ಸ್ಮಾರ್ಟ್​ಫೋನ್
Oppo Find N3 Flip
Follow us
Vinay Bhat
|

Updated on: Oct 07, 2023 | 1:30 PM

ಒಪ್ಪೋ ಇಂಡಿಯಾ ಭಾರತದಲ್ಲಿ ಮುಂದಿನ ವಾರ ಅಕ್ಟೋಬರ್ 12 ರಂದು ತನ್ನ ಹೊಸ ಮಡಚುವ ಸ್ಮಾರ್ಟ್​ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಈವೆಂಟ್ ಅನ್ನು ಸಂಜೆ 7 ಗಂಟೆಯಿಂದ ಒಪ್ಪೋ ಯೂಟ್ಯೂಬ್ ಚಾನೆಲ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಒಪ್ಪೋ ಫೈಂಡ್ N3 ಫ್ಲಿಪ್ ಭಾರತದಲ್ಲಿ ಕಂಪನಿಯ ಎರಡನೇ ಫೋಲ್ಡಬಲ್‌ ಸ್ಮಾರ್ಟ್​ಫೋನ್ ಆಗಿದೆ. ಹಿಂದಿನದು ಫೈಂಡ್ N2 ಫ್ಲಿಪ್ ಆಗಿದೆ. ಇದು ಈ ವರ್ಷದ ಆರಂಭದಲ್ಲಿ ಅನಾವರಣಗೊಂಡಿತ್ತು.

ಒಪ್ಪೋ ತನ್ನ ಹೊಸ ಫೋನಿನ ಕೆಲವು ಪ್ರಮುಖ ವಿಶೇತೆಗಳನ್ನು ಸಹ ದೃಢಪಡಿಸಿದೆ ಮತ್ತು ಇದು ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದಂತೆಯೇ ಇದೆ. ಆದರೆ, ಇದರ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಒಪ್ಪೋ ಫೈಂಡ್ N3 ಫ್ಲಿಪ್ 90,000 ರೂ. ಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

ಒಪ್ಪೋ ಫೈಂಡ್ N3 ಫ್ಲಿಪ್ ಫೀಚರ್ಸ್:

ಒಪ್ಪೋ ಫೈಂಡ್ N3 ಫ್ಲಿಪ್ ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಮೂಲಕ ರನ್ ಆಗುತ್ತದೆ. ಇದು 2 ನೇ ತಲೆಮಾರಿನ TSMC 4nm ಪ್ರಕ್ರಿಯೆಯನ್ನು ಆಧರಿಸಿದೆ. 3GHzನ ARM ಕಾರ್ಟೆಕ್ಸ್ X3 ಕೋರ್, ಮೂರು ಕಾರ್ಟೆಕ್ಸ್-A715 ಕೋರ್‌ ಮತ್ತು ನಾಲ್ಕು ಕಾರ್ಟೆಕ್ಸ್-A510 ಕೋರ್‌ಗಳನ್ನು ಒಳಗೊಂಡಿದೆ. SoC AI ಕಾರ್ಯಗಳಿಗೆ ಸಹಾಯ ಮಾಡಲು ಮೀಡಿಯಾಟೆಕ್ APU 690 ಮತ್ತು ಹಾರ್ಡ್‌ವೇರ್-ಆಧಾರಿತ ರೇ ಟ್ರೇಸಿಂಗ್‌ ಬೆಂಬಲದೊಂದಿಗೆ ARM ನ Immortalis-G715 GPU ಅನ್ನು ಒಳಗೊಂಡಿದೆ.

ಇದನ್ನೂ ಓದಿ
Image
ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್​ಫೋನ್ ಬಿಡುಗಡೆ
Image
ಪ್ರೈಮ್ ಚಂದಾದಾರರಿಗೆ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಲೈವ್
Image
ಅಭಿಮಾನಿಗಳ ನಿದ್ದೆ ಕದ್ದಿದ್ದ ಕೆಂಪು ಬಣ್ಣದ ಒನ್​ಪ್ಲಸ್ 11R 5G ಬಿಡುಗಡೆ
Image
ಪಿನ್ ಚಾಟ್: ವಾಟ್ಸ್​ಆ್ಯಪ್​ನಿಂದ ಸದ್ದಿಲ್ಲದೆ ಅಚ್ಚರಿಯ ಫೀಚರ್

ಪೋಕೋ X5 ಪ್ರೊ ಸ್ಮಾರ್ಟ್​ಫೋನ್ ಮೇಲೆ ದಾಖಲೆಯ ರಿಯಾಯಿತಿ: ಈ ಆಫರ್ ಮಿಸ್ ಮಾಡ್ಬೇಡಿ

ಫೈಂಡ್ N3 ಫ್ಲಿಪ್ 12GB LPDDR5X RAM ಅನ್ನು ಹೊಂದಿರುತ್ತದೆ, ಇದು ಹಿಂದಿನ ತಲೆಮಾರಿನ LPDDR5 ಗಿಂತ 33 ಪ್ರತಿಶತ ವೇಗವಾಗಿದೆ ಎಂದು ಹೇಳಲಾಗುತ್ತದೆ. ಈ ಫೋನ್‌ನ ಮುಖ್ಯ ಕ್ಯಾಮೆರಾವು ಸೋನಿ IMX709 ಸಂವೇದಕವನ್ನು ಮತ್ತು AI ಸ್ಮಾರ್ಟ್‌ಗಳನ್ನು ಒಳಗೊಂಡಿದೆ. 4,300mAh ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು 44W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 56 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಆಗುತ್ತದೆ.

ಒಪ್ಪೋ ಇಂಡಿಯಾ ಅಧಿಕೃತವಾಗಿ ಹೇಳದಿದ್ದರೂ ಇದು ಚೀನಾದಲ್ಲಿ ಬಿಡುಗಡೆಯಾದ ರೂಪಾಂತರದಂತೆಯೇ ಇರಬಹುದು ಎನ್ನಲಾಗಿದೆ. ಫೈಂಡ್ N3 ಫ್ಲಿಪ್ ಪೂರ್ಣ-HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ ಫೋಲ್ಡಿಂಗ್ ಡಿಸ್ ಪ್ಲೇಯನ್ನು ಹೊಂದಿದೆ. ಹೊರಗಿನ ಡಿಸ್ ಪ್ಲೇಯು 3.26 ಇಂಚುಗಳಿಂಧ ಕೂಡಿರುತ್ತದೆ. ಮುಖ್ಯ ಕ್ಯಾಮೆರಾದ ಜೊತೆಗೆ, ಈ ಫೋನ್ 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 32-ಮೆಗಾಪಿಕ್ಸೆಲ್ ಪೋಟ್ರೇಟ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ