- Kannada News Photo gallery Tech Tips How To Apply Driving Licence Online In India Here is the simple method
Driving Licence: ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Apply Driving Licence Online: ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ, ನೀವು ಮೊದಲು ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು. ಇದು ಸರ್ಕಾರದ ವಾಹನ ಪರವಾನಿಗಿಯ ನಿಯಮ. ಇದಕ್ಕೂ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ.
Updated on: Oct 09, 2023 | 6:55 AM

ಡ್ರೈವಿಂಗ್ ಲೈಸೆನ್ಸ್ ಭಾರತದಲ್ಲಿ ಪ್ರಮುಖ ದಾಖಲೆಯಾಗಿದೆ. ದೇಶದಲ್ಲಿ ವಾಹನವನ್ನು ಚಲಾಯಿಸ ಬೇಕೆಂದರೆ ಕಾನೂನುಬದ್ಧವಾಗಿ ಲೈಸೆನ್ಸ್ ಬೇಕೇಬೇಕು. ಡ್ರೈವಿಂಗ್ ಲೈಸೆನ್ಸ್ ಪಡೆಯಲು, ನೀವು ಸರ್ಕಾರದ ನಿಯಮದ ಮೂಲಕ ಹೋಗಬೇಕು. ಇದಕ್ಕೆ ಸಾಕಷ್ಟು ಸಮಯ ಹಿಡಿದು ನಂತರ ಪರವಾನಗಿ ಸಿಗುತ್ತದೆ.

ಭಾರತದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ, ನೀವು ಮೊದಲು ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು. ಇದು ಸರ್ಕಾರದ ವಾಹನ ಪರವಾನಿಗಿಯ ನಿಯಮ. ಇದಕ್ಕೂ ಒಂದಿಷ್ಟು ಸಮಯ ತೆಗೆದುಕೊಳ್ಳುತ್ತದೆ.

ಆದರೆ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಮನೆಯಿಂದ ಹೊರಹೋಗದೆ ಕೂತಲ್ಲಿಂದಲೇ ಆನ್‌ಲೈನ್‌ನಲ್ಲಿ ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ.

ಆದರೆ ನೀವಿಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ನೀವು ಆನ್‌ಲೈನ್‌ನಲ್ಲಿ ಪರವಾನಗಿಗಾಗಿ ಅರ್ಜಿ ಸಲ್ಲಿಸಿದರೂ, ನಿಮ್ಮ ಲೈಸೆನ್ಸ್ ಪಡೆಯಲು ನೀವು ಹತ್ತಿರದ ಆರ್ಟಿಒ ಆಫೀಸಿಗೆ ಹೋಗಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಅಲ್ಲದೆ, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು ಸಂಚಾರ ನಿಯಮಗಳ ಬಗ್ಗೆ ತಿಳಿದಿರಬೇಕು. ನಿಮ್ಮ ವಯಸ್ಸು ಮತ್ತು ಇತರ ಅವಶ್ಯಕತೆಕ ದಾಖಲೆಗಳನ್ನು ಹೊಂದಿರಬೇಕು.

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ಅಧಿಕೃತ ಸರ್ಕಾರಿ ವೆಬ್‌ಸೈಟ್ https://parivahan.gov.in/parivahan/ ಗೆ ಹೋಗಿ. ಆನ್‌ಲೈನ್ ಸರ್ವಿಸ್ ಆಯ್ಕೆಗೆ ಹೋಗಿ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಬಂಧಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ.

ಬಳಿಕ ನೀವು ವಾಸಿಸುವ ರಾಜ್ಯವನ್ನು ಆರಿಸಿ. ‘Learner’s Licence Application’ ಆಯ್ಕೆಯನ್ನು ಆರಿಸಬೇಕು. ಇಲ್ಲಿ ಪಟ್ಟಿ ಮಾಡಲಾದ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ.

ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ. ಲರ್ನಿಂಗ್ ಲೈಸೆನ್ಸ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಕೊನೆಯದಾಗಿ ಪರೀಕ್ಷೆಯ ದಿನಾಂಕವನ್ನು ಆಯ್ಕೆಮಾಡಿ ಮತ್ತು ಪಾವತಿ ಮಾಡಿ.



















