ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿಯಲ್ಲಿ ಭಾರತ ಭರ್ಜರಿ ಶುಭಾರಂಭ ಮಾಡಿದೆ. ಭಾನುವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಶತಕದ ಜೊತೆಯಾಟ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಆಸ್ಟ್ರೇಲಿಯಾ 49.3 ಓವರ್ಗಳಲ್ಲಿ ಕೇವಲ 199 ರನ್ಗಳಿಗೆ ಆಲೌಟ್ ಆದರು. ಟಾರ್ಗೆಟ್ ಬೆನ್ನಟ್ಟಿದ ಭಾರತ 2 ರನ್ಗೆ ಮೂರು ವಿಕೆಟ್ ಕಳೆದುಕೊಂಡಿತು. ಆದರೆ, ಕೆಎಲ್ ರಾಹುಲ್ (ಅಜೇಯ 97) ಹಾಗೂ ವಿರಾಟ್ ಕೊಹ್ಲಿ (85) 165 ರನ್ಗಳ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೆಲವೊಂದು ವಿಚಾರ ಹಂಚಿಕೊಂಡಿದ್ದಾರೆ. ಕೊಹ್ಲಿ-ರಾಹುಲ್ ಆಟವನ್ನು ಹೊಗಳಿದ್ದಾರೆ. ಇಲ್ಲಿದೆ ನೋಡಿ ಹಿಟ್ಮ್ಯಾನ್ ಮಾಡಿದ ಮಾತುಗಳ ವಿವರ.
ನಾನು ತುಂಬಾ ಉತ್ಸುಕನಾಗಿದ್ದೆ. ಗೆಲುವು ಸಾಧಿಸಿರುವುದು ಖುಷಿಯಾಗಿದೆ. ವಿಶ್ವಕಪ್ ಪಂದ್ಯಾವಳಿಯನ್ನು ಜಯದ ಮೂಲಕ ಪ್ರಾರಂಭಿಸಿದ್ದೇವೆ. ನಮ್ಮ ಕಡೆಯಿಂದ ಅದ್ಭುತವಾದ ಆಟ ಬಂದಿದೆ. ವಿಶೇಷವಾಗಿ ಫೀಲ್ಡಿಂಗ್ ನಾವು ಇಂದು ಪ್ರತಿಯೊಬ್ಬರ ಪ್ರಯತ್ನವನ್ನು ನೋಡಿದ್ದೇವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ನಮ್ಮ ಬೌಲರ್‌ಗಳು ಕೂಡ ಒಳ್ಳೆಯ ಪ್ರದರ್ಶನ ತೋರಿದ್ದಾರೆ. ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಬಳಸಿಕೊಂಡರು. ಸೀಮರ್‌ಗಳು ಸಹ ಸ್ವಲ್ಪ ರಿವರ್ಸ್ ಪಡೆದರು, ಸ್ಪಿನ್ನರ್‌ಗಳು ಉತ್ತಮ ಜಾಗದಲ್ಲಿ ಬೌಲ್ ಮಾಡಿದ್ದಾರೆ. ಒಟ್ಟಾರೆಯಾಗಿ ತಂಡದಿಂದ ಉತ್ತಮ ಪ್ರಯತ್ನಬಂದಿದೆ ಎಂಬುದು ರೋಹಿತ್ ಶರ್ಮಾ ಮಾತು.
ಆಸೀಸ್ ಬೌಲರ್‌ಗಳು ಉತ್ತಮ ಲಯದಲ್ಲಿ ಬೌಲ್ ಮಾಡಿದರು. ಯಾರು ಕೂಡ ಇನ್ನಿಂಗ್ಸ್ ಅನ್ನು ಹಾಗೆ ಪ್ರಾರಂಭಿಸಲು ಬಯಸುವುದಿಲ್ಲ. ನೀವು ಈ ರೀತಿಯ ಟಾರ್ಗೆಟ್ ಇದ್ದಾಗ ಸಾಧ್ಯವಾದಷ್ಟು ಪವರ್‌ಪ್ಲೇನಲ್ಲಿ ರನ್ ಗಳಿಸಲು ಪ್ರಯತ್ನಿಸಬೇಕು. ಆರಂಭದಲ್ಲೆ ವಿಕೆಟ್ ಕಳೆದುಕೊಂಡರು ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಆಟ ಪ್ರದರ್ಶಿಸಿದರು. ಕ್ರೆಡಿಟ್ ಅವರಿಗೆ ಸಲ್ಲಬೇಕು - ರೋಹಿತ್ ಶರ್ಮಾ.
ಪಂದ್ಯ ಒಂದೊಂದು ಕಡೆ ಇರುವುದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಒಂದು ಚಾಲೆಂಜ್. ಆದರೆ, ಯಾರು ಪರಿಸ್ಥಿತಿಗೆ ಸರಿಹೊಂದುತ್ತಾರೆಯೋ ಅವರು ಬಂದು ಕೆಲಸ ಮಾಡಬೇಕಾಗುತ್ತದೆ. ಚೆನ್ನೈ ಎಂದಿಗೂ ನಿರಾಸೆಗೊಳಿಸುವುದಿಲ್ಲ. ಅವರು ಕ್ರಿಕೆಟ್ ಅನ್ನು ತುಂಬಾ ಪ್ರೀತಿಸುತ್ತಾರೆ. ಆ ಬಿಸಿಯಲ್ಲಿ ಕುಳಿತು ತಂಡವನ್ನು ಹುರಿದುಂಬಿಸಿದ್ದು ಖುಷಿ ಆಯಿತು ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
Published On - 7:27 am, Mon, 9 October 23