Dolby Vision: ಡಾಲ್ಬಿ ವಿಷನ್ ಎಂದರೇನು?: ವಿಡಿಯೋಕ್ಕೆ ಇದನ್ನು ಬಳಸಿದ್ರೆ ಏನು ಬದಲಾವಣೆ ಆಗುತ್ತದೆ?

What is Dolby Vision? ನೀವು ಡಾಲ್ಬಿ ವಿಷನ್ ಬಗ್ಗೆ ಹಲವು ಬಾರಿ ಕೇಳಿರಬಹುದು. ಇತ್ತೀಚಿನ ದಿನಗಳಲ್ಲಿ, ಈ ತಂತ್ರಜ್ಞಾನವನ್ನು ಟಿವಿಗಳಲ್ಲಿ ಮತ್ತು ಸ್ಮಾರ್ಟ್​ಫೋನ್​ಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನಿಮಗೆ ಇದರ ಬಗ್ಗೆ ತಿಳಿದಿಲ್ಲ ಎಂದಾದರೆ, ಈ ಲೇಖನದಲ್ಲಿ ನಾವು ಡಾಲ್ಬಿ ವಿಷನ್ ಎಂದರೇನು? ಮತ್ತು ಸಾಮಾನ್ಯ ವಿಡಿಯೋದಿಂದ ಇದು ಹೇಗೆ ಭಿನ್ನವಾಗಿದೆ ಎಂದು ಹೇಳುತ್ತೇವೆ.

Dolby Vision: ಡಾಲ್ಬಿ ವಿಷನ್ ಎಂದರೇನು?: ವಿಡಿಯೋಕ್ಕೆ ಇದನ್ನು ಬಳಸಿದ್ರೆ ಏನು ಬದಲಾವಣೆ ಆಗುತ್ತದೆ?
What is Dolby Vision
Follow us
Vinay Bhat
|

Updated on: Oct 09, 2023 | 12:52 PM

ಡಾಲ್ಬಿ ವಿಷನ್ (Dolby Vision) ಎಂಬ ಹೆಸರು ನೀವು ಕೇಳಿರಬಹುದು. ಡಾಲ್ಬಿಯು ಅತ್ಯುತ್ತಮ ಸೌಂಡ್ ಸಿಸ್ಟಂ ಮತ್ತು ಸೌಂಡ್ ಕ್ವಾಲಿಟಿಗೆ ಹೆಸರುವಾಸಿಯಾಗಿದೆ. ಆದಾಗ್ಯೂ, ಈ ಕಂಪನಿಯು ಕೇವಲ ಧ್ವನಿಗೆ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ, ನಾವು ಸ್ಮಾರ್ಟ್ ಟಿವಿಗಳು ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ವೀಕ್ಷಿಸಬಹುದಾದ ಉತ್ತಮ ಗುಣಮಟ್ಟದ ವಿಡಿಯೋಗಳಲ್ಲಿ ಕೂಡ ಡಾಲ್ಬಿಯ ಕೈಚಳಕವಿದೆ. ಡಾಲ್ಬಿ ಲ್ಯಾಬೋರೇಟರೀಸ್ HDR ಗುಣಮಟ್ಟದ ವಿಡಿಯೋಗಾಗಿ ಡಾಲ್ಬಿ ವಿಷನ್ ತಂತ್ರಜ್ಞಾನವನ್ನು ಒದಗಿಸುತ್ತದೆ. ಈ ಲೇಖನದಲ್ಲಿ ನಾವು ಡಾಲ್ಬಿ ವಿಷನ್ ಅನ್ನು ವಿಡಿಯೋದಲ್ಲಿ ಏಕೆ ಬಳಸುತ್ತೇವೆ ಮತ್ತು ಸಾಮಾನ್ಯ ವಿಡಿಯೋದಿಂದ ಹೇಗೆ ಭಿನ್ನವಾಗಿದೆ ಎಂಬುದನ್ನು ಹೇಳುತ್ತೇವೆ.

ಡಾಲ್ಬಿ ವಿಷನ್ ಟಿವಿ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರವಲ್ಲದೆ ಇದನ್ನು ವಿವಿಧ ಕಡೆ ಬಳಸಲಾಗುತ್ತದೆ. ಚಲನಚಿತ್ರ ತಯಾರಕರು ಈ ತಂತ್ರಜ್ಞಾನವನ್ನು ವಿಡಿಯೋಗಳನ್ನು ಮಾಡಲು ಬಳಸುತ್ತಾರೆ. ಇದಲ್ಲದೆ, OTT ಮತ್ತು ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಬಳಸಲಾಗುತ್ತದೆ. ಹಾಗಾದರೆ ಡಾಲ್ಬಿ ವಿಷನ್ ಎಂದರೇನು?.

ಒಪ್ಪೋದಿಂದ ಮಹತ್ವದ ಘೋಷಣೆ: ಅ. 12ಕ್ಕೆ ಬಿಡುಗಡೆ ಆಗುತ್ತೆ ಹೊಸ ಮಡಚುವ ಸ್ಮಾರ್ಟ್​ಫೋನ್

ಇದನ್ನೂ ಓದಿ
Image
ಡ್ರೈವಿಂಗ್ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
Image
ಆಫರ್​ಗಳ ಸುರಿಮಳೆ: ಲೈವ್ ಆಗಿದೆ ಫ್ಲಿಪ್​ಕಾರ್ಟ್ ಬಿಗ್ ಬಿಲಿಯನ್ ಡೇಸ್
Image
ಧೂಳೆಬ್ಬಿಸುತ್ತಿರುವ ಕೆಂಪು ಬಣ್ಣದ ಒನ್​ಪ್ಲಸ್ 11R 5G ಮಾರಾಟ ಆರಂಭ
Image
ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಸೂಪರ್: 30,000 ರೂ. ಒಳಗಿನ ಫೋನ್

ಡಾಲ್ಬಿ ವಿಷನ್ ಎಂದರೇನು?

ಡಾಲ್ಬಿ ವಿಷನ್ ಎಂದರೆ ಹೈ ಡೈನಾಮಿಕ್ ರೇಂಜ್ (ಎಚ್‌ಡಿಆರ್). ಈಗ ಹಳೆಯ ವಿಡಿಯೋಗಳು ಅಥವಾ ಟಿವಿಯಲ್ಲಿರುವ ಉಪಕರಣಗಳು, ಬಣ್ಣಗಳು, ಪಿಕ್ಸೆಲ್‌ಗಳು ಮತ್ತು ನಿಟ್‌ಗಳು ಈಗಿನ ಸಮಯಕ್ಕೆ ಅನುಗುಣವಾಗಿಲ್ಲ. ಡಾಲ್ಬಿ ವಿಷನ್ ಈ ಸಮಸ್ಯೆಗಳಿಗೆ ಪರಿಹಾರವನ್ನು ಇದಗಿಸುತ್ತದೆ. ಕಂಪನಿಯು ಜನರ ಅನುಭವಕ್ಕೆ ಅನುಗುಣವಾಗಿ ಟಿವಿಯನ್ನು ತಯಾರು ಮಾಡಿಬಿಡುತ್ತದೆ.

ಡಾಲ್ಬಿ ವಿಷನ್: ಗುಣಮಟ್ಟದ ವಿಡಿಯೋ

ಡಾಲ್ಬಿ ವಿಷನ್ ಜನರಿಗೆ ನೈಜ ರೂಪದಲ್ಲಿರುವಂತೆ ವಿಡಿಯೋಗಳನ್ನು ತೋರಿಸಲು ಪ್ರಯತ್ನಿಸುತ್ತದೆ. ಇದು ಹೆಚ್ಚಿನ ಬ್ರೈಟ್​ನೆಸ್ ಅನ್ನು ನೀಡುತ್ತದೆ ಮತ್ತು 8,000 ರಿಂದ 10,000 ನಿಟ್‌ಗಳನ್ನು ನೀಡುತ್ತದೆ. ವಿಡಿಯೋಗಳನ್ನು ಉತ್ತಮ HDR ಗುಣಮಟ್ಟದಲ್ಲಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ಈ ತಂತ್ರಜ್ಞಾನವು ಪರದೆಯ ಮೇಲೆ ಉತ್ತಮವಾದ ವಿಡಿಯೋ ಶ್ರೇಣಿಯನ್ನು ಒದಗಿಸುತ್ತದೆ.

ಸಾಮಾನ್ಯ ವಿಡಿಯೋದಿಂದ ಎಷ್ಟು ಭಿನ್ನವಾಗಿದೆ?

ಡಾಲ್ಬಿ ವಿಷನ್ ಮೂಲಕ, ಜನರು ಉತ್ತಮ ಕ್ವಾಲಿಟಿ ಜೊತೆಗೆ ವಿಡಿಯೋವನ್ನು ಹೆಚ್ಚಿನ ಫ್ರೇಮ್ ದರದಲ್ಲಿ ಪಡೆಯುತ್ತಾರೆ. ಇದರಲ್ಲಿರುವ ಅತ್ಯುತ್ತಮ ರೆಸಲ್ಯೂಶನ್ ನಿಮ್ಮ ಅನುಭವವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನೆಟ್‌ಫ್ಲಿಕ್ಸ್‌ನಂತಹ OTT ಪ್ಲಾಟ್‌ಫಾರ್ಮ್‌ಗಳು ಡಾಲ್ಬಿ ವಿಷನ್ ಅನ್ನು ಬಳಸುತ್ತವೆ.

ಸಾಮಾನ್ಯ ವಿಡಿಯೋ ಅಥವಾ HDR ಗಾಗಿ Static metadata ವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಕಾರಣದಿಂದಾಗಿ ವಿಡಿಯೋವನ್ನು ಸಂಪೂರ್ಣವಾಗಿ ಆಪ್ಟಿಮೈಸ್ ಮಾಡಲಾಗುವುದಿಲ್ಲ. ಮತ್ತೊಂದೆಡೆ, ಡಾಲ್ಬಿ ವಿಷನ್ ಡೈನಾಮಿಕ್ ಮೆಟಾಡೇಟಾವನ್ನು ಬಳಸುತ್ತದೆ, ಇದು ಹೆಚ್ಚು ವಿವರವಾದ ಮಾಹಿತಿಯನ್ನು ನೀಡುತ್ತದೆ. ಇದು ದೃಶ್ಯವನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮಾಡುತ್ತದೆ.

ಕಂಟೆಂಟ್ ರಚನೆಕಾರರು, ವಿತರಕರು ಮತ್ತು ಸ್ಮಾರ್ಟ್​ ಟಿವಿ-ಸ್ಮಾರ್ಟ್‌ಫೋನ್‌ಗಳಂತಹ ಗ್ರಾಹಕರು ಡಾಲ್ಬಿ ವಿಷನ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಆದ್ದರಿಂದ, ಸಾಮಾನ್ಯ ವಿಡಿಯೋಗೆ ಹೋಲಿಸಿದರೆ, ಡಾಲ್ಬಿ ವಿಷನ್ ನಿಮಗೆ ಉತ್ತಮ ಬ್ರೈಟ್​ನೆಸ್, ನಿಟ್‌ಗಳು, ರೆಸಲ್ಯೂಶನ್ ಇತ್ಯಾದಿಗಳೊಂದಿಗೆ ವಿಡಿಯೋವನ್ನು ಒದಗಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ