ಬರೋಬ್ಬರಿ ಶೇ. 80 ರಷ್ಟು ಡಿಸ್ಕೌಂಟ್: ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ನಲ್ಲಿ ದಾಖಲೆಯ ರಿಯಾಯಿತಿ
Flipkart Big Billion Days 2023: ಫ್ಲಿಪ್‌ಕಾರ್ಟ್ ಸೇಲ್ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಇದೆ. 4K ಸ್ಮಾರ್ಟ್ ಟಿವಿಗಳು ಬ್ಯಾಂಕ್ ರಿಯಾಯಿತಿಯ ನಂತರ ಕೇವಲ 17,000 ರೂ. ಗಳಿಗೆ ಖರೀದಿಸಬಹುದು. ಗೇಮಿಂಗ್ ಮಾನಿಟರ್‌ಗಳನ್ನು 6,569 ರೂ. ಗಳಿಗೆ ನಿಮ್ಮದಾಗಿಸಬಹುದು.
ಈಗಾಗಲೇ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ 2023 (Flipkart Big Billion Days sale) ಪ್ರಾರಂಭವಾಗಿದ್ದು ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಅತ್ತ ಅಮೆಜಾನ್ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಕೂಡ ನಡೆಯುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಬಂಪರ್ ಆಫರ್ ನೀಡಲಾಗಿದ್ದು, ಬ್ಯಾಂಕ್ ಕೊಡುಗೆಗಳು, ವಿನಿಮಯ ಕೊಡುಗೆಗಳು ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ಐಫೋನ್‌ಗಳ ಮೇಲೆ ಆಕರ್ಷಕ ರಿಯಾಯಿತಿ ಘೋಷಿಸಲಾಗಿದೆ. ಐಫೋನ್ 14, ಐಫೋನ್ 13 ಮತ್ತು ಹೆಚ್ಚಿನವುಗಳು ಭಾರಿ ರಿಯಾಯಿತಿಯಲ್ಲಿ ಮಾರಾಟವಾಗುತ್ತಿವೆ.
ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಬ್ಯಾಂಕ್ ಆಫರ್‌ಗಳು
ಅಧಿಕೃತ ವೆಬ್‌ಸೈಟ್‌ನಲ್ಲಿ, ಆಯ್ದ ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಬ್ಯಾಂಕ್ ಕಾರ್ಡ್‌ಗಳ ಮೂಲಕ ಫ್ಲಿಪ್‌ಕಾರ್ಟ್ 10 ಪ್ರತಿಶತ ರಿಯಾಯಿತಿಯನ್ನು ನೀಡುತ್ತಿದೆ. ಜೊತೆಗೆ, ಕಂಪನಿಯು Paytm ವ್ಯಾಲೆಟ್ ಮೂಲಕವೂ ಆಫರ್ ಪಡೆಯಬಹುದು.
ಒಪ್ಪೋದಿಂದ ಅಚ್ಚರಿಯ ಬೆಲೆಗೆ ಒಪ್ಪೋ A18 ಸ್ಮಾರ್ಟ್ಫೋನ್ ಬಿಡುಗಡೆ: ಕೇವಲ 9,999 ರೂ.
ಎಲೆಕ್ಟ್ರಾನಿಕ್ಸ್ ಮೇಲೆ ಶೇ. 80 ರಷ್ಟು ಡಿಸ್ಕೌಂಟ್
ಫ್ಲಿಪ್‌ಕಾರ್ಟ್ ಸೇಲ್ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಪರಿಕರಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿ ಇದೆ. 4K ಸ್ಮಾರ್ಟ್ ಟಿವಿಗಳು ಬ್ಯಾಂಕ್ ರಿಯಾಯಿತಿಯ ನಂತರ ಕೇವಲ 17,000 ರೂ. ಗಳಿಗೆ ಖರೀದಿಸಬಹುದು. ಗೇಮಿಂಗ್ ಮಾನಿಟರ್‌ಗಳನ್ನು 6,569 ರೂ. ಗಳಿಗೆ ನಿಮ್ಮದಾಗಿಸಬಹುದು. ಹೆಡ್‌ಫೋನ್‌ಗಳು/ಸ್ಪೀಕರ್‌ಗಳು 599 ರೂ. ಮತ್ತು ರೂ. 799 ರಿಂದ ಪ್ರಾರಂಭವಾಗುತ್ತವೆ. ನೀವು ಲ್ಯಾಪ್‌ಟಾಪ್‌ಗಳ ಹುಡುಕಾಟದಲ್ಲಿದ್ದರೆ, ಲ್ಯಾಪ್‌ಟಾಪ್‌ಗಳ ಡೀಲ್‌ಗಳು ರೂ. 8,990 ರಿಂದ ಪ್ರಾರಂಭವಾಗುತ್ತವೆ. ಟ್ಯಾಬ್ಲೆಟ್‌ಗಳನ್ನು 7,999 ರೂ. ಗಳಿಗೆ ಖರೀದಿಸಬಹುದು.
ಕಳೆದ ವರ್ಷ ಬಿಡುಗಡೆಯಾದ ಐಫೋನ್ 14 ಈಗಲೂ ಮಾರಾಟ ಆಗುತ್ತಿರುವ ಬಹುಬೇಡಿಕೆ ಸ್ಮಾರ್ಟ್ಫೋನ್ ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇದು 52,999 ರೂ. ಗೆ ಮಾರಾಟವಾಗುತ್ತಿದೆ. ಇದೇ ಮೊದಲ ಬಾರಿಗೆ ಐಫೋನ್ 14 60,000 ರೂಪಾಯಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಇಷ್ಟೇ ಅಲ್ಲ, ನಿಮ್ಮ ಹಳೆಯ ಫೋನ್ ಎಕ್ಸ್ ಚೇಂಜ್ ಮಾಡಿ 40,000 ರೂ. ವರೆಗೆ ಪಡೆಯಬಹುದು. ನೀವು ಆಂಡ್ರಾಯ್ಡ್ ಇಷ್ಟಪಡುವವರಾಗಿದ್ದರೆ ಗೂಗಲ್ ಕಂಪನಿಯ ಪಿಕ್ಸೆಲ್ 7a ಖರೀದಿಸಬಹುದು. ಇದರ ಮೂಲ ಬೆಲೆ 43,999 ರೂ. ಆಗಿದೆ. ಆದರೆ, ಇದು ಈಗ ಕೇವಲ 35,999ರೂ. ಗೆ ಸೇಲ್ ಆಗುತ್ತಿದೆ ನಥಿಂಗ್ ಫೋನ್ (2) ಸಹ ಬಂಪರ್ ಡಿಸ್ಕೌಂಟ್ ಪಡೆದುಕೊಂಡಿದೆ. ಇದರ ಮೂಲ ಬೆಲೆ 49,999 ರೂ. ಯಿಂದ 39,999 ರೂ. ಗೆ ಇಳಿದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ