Google Pixel 8a: ಬರುತ್ತಿದೆ ಗೂಗಲ್ ಪಿಕ್ಸೆಲ್ 8a: ಸೋರಿಕೆ ಆಗಿದೆ ಫೀಚರ್ಸ್, ಏನಿದೆ ನೋಡಿ

Google Pixel 8a Renders Leaked: ಸೋರಿಕೆಯಾದ ರೆಂಡರ್‌ಗಳ ಪ್ರಕಾರ, ಪಿಕ್ಸೆಲ್ 8 ಎ ಹಿಂಭಾಗ ಪಿಕ್ಸೆಲ್ 8 ಮತ್ತು 8 ಪ್ರೊ ಅನ್ನು ಹೋಲುತ್ತದೆ. ಇದು ಎರಡು ಕ್ಯಾಮೆರಾಗಳನ್ನು ಹೊಂದಿದೆ ಎಂದು ತೋರುತ್ತದೆ. ಎಲ್ಇಡಿ ಫ್ಲ್ಯಾಷ್ ಮಾಡ್ಯೂಲ್ ಅನ್ನು ಸಹ 8 ಮತ್ತು 8 ಪ್ರೊ ಪ್ರೀಮಿಯಂ ಮಾದರಿಗಳಂತೆಯೇ ಇರಿಸಲಾಗಿದೆ.

Google Pixel 8a: ಬರುತ್ತಿದೆ ಗೂಗಲ್ ಪಿಕ್ಸೆಲ್ 8a: ಸೋರಿಕೆ ಆಗಿದೆ ಫೀಚರ್ಸ್, ಏನಿದೆ ನೋಡಿ
Google Pixel 8a
Follow us
Vinay Bhat
| Updated By: Digi Tech Desk

Updated on:Oct 10, 2023 | 2:29 PM

ಗೂಗಲ್ ಕಂಪನಿ ಇತ್ತೀಚೆಗಷ್ಟೆ ಮೇಡ್ ಬೈ ಗೂಗಲ್ 2023 ಹಾರ್ಡ್‌ವೇರ್ ಲಾಂಚ್ ಈವೆಂಟ್‌ನಲ್ಲಿ ಪಿಕ್ಸೆಲ್ 8-ಸರಣಿಯ ಅಡಿಯಲ್ಲಿ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್​ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೇಳಿಬಂದ ಬೆನ್ನಲ್ಲೇ ಪಿಕ್ಸೆಲ್ 8a (Google Pixel 8a) ರೆಂಡರ್‌ಗಳು ಕಾಣಿಸಿಕೊಂಡಿವೆ. A-ಸರಣಿಯ ಪಿಕ್ಸೆಲ್ ಫೋನ್ ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಈ ಫೋನಿನ ಕೆಲವು ಫೀಚರ್​ಗಳು ಸೋರಿಕೆ ಆಗಿದ್ದು, ಮಾಹಿತಿಯ ಪ್ರಕಾರ ಪಿಕ್ಸೆಲ್ 8a ಗಾತ್ರವು ಪಿಕ್ಸೆಲ್ 8 ಗಿಂತ ದೊಡ್ಡದಾಗಿದೆ ಎಂದು ತಿಳಿದುಬಂದಿದೆ.

ಗೂಗಲ್ ಪಿಕ್ಸೆಲ್ 8a ವಿನ್ಯಾಸ:

ಆನ್‌ಲೀಕ್ಸ್‌ನಿಂದ (ಸ್ಮಾರ್ಟ್‌ಪ್ರಿಕ್ಸ್ ಮೂಲಕ) ಸೋರಿಕೆಯಾದ ರೆಂಡರ್‌ಗಳ ಪ್ರಕಾರ, ಪಿಕ್ಸೆಲ್ 8 ಎ ಹಿಂಭಾಗ ಪಿಕ್ಸೆಲ್ 8 ಮತ್ತು 8 ಪ್ರೊ ಅನ್ನು ಹೋಲುತ್ತದೆ. ಇದು ಎರಡು ಕ್ಯಾಮೆರಾಗಳನ್ನು ಹೊಂದಿದೆ ಎಂದು ತೋರುತ್ತದೆ. ಎಲ್ಇಡಿ ಫ್ಲ್ಯಾಷ್ ಮಾಡ್ಯೂಲ್ ಅನ್ನು ಸಹ 8 ಮತ್ತು 8 ಪ್ರೊ ಪ್ರೀಮಿಯಂ ಮಾದರಿಗಳಂತೆಯೇ ಇರಿಸಲಾಗಿದೆ.

Dolby Vision: ಡಾಲ್ಬಿ ವಿಷನ್ ಎಂದರೇನು?: ವಿಡಿಯೋಕ್ಕೆ ಇದನ್ನು ಬಳಸಿದ್ರೆ ಏನು ಬದಲಾವಣೆ ಆಗುತ್ತದೆ?

ಇದನ್ನೂ ಓದಿ
Image
ಟೆಲಿಕಾಂ ಕಂಪನಿಯಿಂದ ಬಳಕೆದಾರರಿಗೆ ಫ್ಲ್ಯಾಶ್ ಎಚ್ಚರಿಕೆ ಸಂದೇಶ
Image
ಮಳೆಗಾಲದಲ್ಲಿ ಮೊಬೈಲ್ ಮೇಲೆ ನೀರು ಬಿದ್ದರೂ ಉಪಯೋಗಿಸುವುದು ಹೇಗೆ?
Image
ಶೇ. 80 ರಷ್ಟು ಡಿಸ್ಕೌಂಟ್: ಫ್ಲಿಪ್‌ಕಾರ್ಟ್‌ನಲ್ಲಿ ದಾಖಲೆಯ ರಿಯಾಯಿತಿ
Image
20,000 ರೂ. ಒಳಗೆ ಸಿಗುತ್ತಿದೆ ಈ ಧಮಾಕ ಸ್ಮಾರ್ಟ್​ಫೋನ್ಸ್

ಫೋನಿನ ಸೈಡ್​ನಲ್ಲಿ ಪವರ್ ಬಟನ್, ವಾಲ್ಯೂಮ್ ರಾಕರ್, ಸಿಮ್ ಟ್ರೇ ಮತ್ತು ಸೆಲ್ಯುಲಾರ್ ಆಂಟೆನಾ ನೀಡಲಾಗಿದೆ. ಮೇಲಿನ ಭಾಗವು ಸಹ ಆಂಟೆನಾ ರೇಖೆಯನ್ನು ಹೊಂದಿದೆ. ನೀವು ಮೈಕ್ ಹೋಲ್ ಅನ್ನು ಸಹ ಪಡೆಯುತ್ತೀರಿ. ಕೆಳಭಾಗದಲ್ಲಿ USB-C ಪೋರ್ಟ್ ಮತ್ತು ಸ್ಪೀಕರ್ ಗ್ರಿಲ್ ಇದೆ.

ಗೂಗಲ್ ಪಿಕ್ಸೆಲ್ 8a ಫೀಚರ್ಸ್ (ಸೋರಿಕೆ ಆದ ಮಾಹಿತಿ)

ಡಿಸ್ ಪ್ಲೇ: ಹೊಸ ಗೂಗಲ್ ಪಿಕ್ಸೆಲ್ 8a ಸ್ಮಾರ್ಟ್​ಫೋನ್ 6.1 ಇಂಚಿನ ಡಿಸ್ ಪ್ಲೇ ಹೊಂದಿರುವ ಸಾಧ್ಯತೆ ಇದೆ. ಇದು ಪಿಕ್ಸೆಲ್ 8 ರ 6.2-ಇಂಚಿನ ಪ್ಯಾನೆಲ್‌ಗಿಂತ ಚಿಕ್ಕದಾಗಿದೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊಗೆ ಹೋಲಿಸಿದರೆ ಬೆಜೆಲ್‌ಗಳು ಹೆಚ್ಚು ಗಮನಾರ್ಹವಾಗಿವೆ. ಮುಂಭಾಗದ ಕ್ಯಾಮೆರಾಕ್ಕಾಗಿ ಪಂಚ್ ಹೋಲ್ ಕಟೌಟ್ ನೀಡಲಾಗಿದೆ.

CPU: ಗೂಗೂಲ್​ನ ಈ ಸ್ಮಾರ್ಟ್​ಫೋನ್ Tensor G3 SoC ನೊಂದಿಗೆ ಪವರ್ ಮಾಡುವ ನಿರೀಕ್ಷೆಯಿದೆ. ಇದು ಇತರ ಪಿಕ್ಸೆಲ್ 8 ಫೋನ್‌ಗಳಲ್ಲಿ ಕಂಡುಬರುವ ಚಿಪ್‌ನ ಅಂಡರ್‌ಲಾಕ್ಡ್ ಆವೃತ್ತಿ (ಗರಿಷ್ಠ ಆವರ್ತನ 2.91GHz) ಆಗಿರಬಹುದು. ಪಟ್ಟಿಯ ಪ್ರಕಾರ, ಈ ಫೋನ್ ಸಿಂಗಲ್-ಕೋರ್ ಟೆಸ್ಟ್​ನಲ್ಲಿ 1218 ಪಾಯಿಂಟ್ ಮತ್ತು ಮಲ್ಟಿ-ಕೋರ್ ಕಾರ್ಯಕ್ಷಮತೆ ಪರೀಕ್ಷೆಯಲ್ಲಿ 3175 ಅಂಕಗಳನ್ನು ಗಳಿಸಿದೆ.

GPU ಮತ್ತು ಇತರ ವೈಶಿಷ್ಟ್ಯಗಳು: ಈ CPU ಅನ್ನು Mali-G715 GPU ಜೊತೆಗೆ ಜೋಡಿಸಬಹುದು. ನೀವು ಇಲ್ಲಿ Titan G2 ಭದ್ರತಾ ಚಿಪ್ ಮತ್ತು ಕೆಲವು AI ಟೆಕ್ನಾಲಜಿ ಪಡೆಯುವ ಸಾಧ್ಯತೆಯಿದೆ.

ಮೆಮೊರಿ-ಬಣ್ಣಗಳು: 8GB RAM ಅನ್ನು ಹೊಂದಿದೆ ಎಂದು ಬಹಿರಂಗವಾಗಿದೆ. ಇದು ನೀಲಿ ಬಣ್ಣದಲ್ಲಿ ಬರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:22 pm, Tue, 10 October 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ