Google Gemini AI: ಗೂಗಲ್​ನಿಂದ ಅತ್ಯಂತ ಶಕ್ತಿಶಾಲಿ ಜೆಮಿನಿ AI ಬಿಡುಗಡೆ: ಚಾಟ್‌ಜಿಪಿಟಿಗೆ ಶುರುವಾಯಿತು ನಡುಕ

Google Gemini AI Release: ಗೂಗಲ್ ತನ್ನ ಅತಿದೊಡ್ಡ ಮತ್ತು ಶಕ್ತಿಶಾಲಿ ಎಐ ಮಾದರಿ 'ಜೆಮಿನಿ ಎಐ' ಅನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆಯ ಜಗತ್ತಿನಲ್ಲಿ ಇದು ChatGPT ಯೊಂದಿಗೆ ಸ್ಪರ್ಧಿಸುತ್ತದೆ. ಗೂಗಲ್ ಹೊಸ AI ಮಾದರಿಯನ್ನು ಸಾಕಷ್ಟು ಸುಧಾರಿತಗೊಳಿಸಿದೆ. ವಿಶ್ವಾದ್ಯಂತ ಬಾರ್ಡ್ ಮತ್ತು ಪಿಕ್ಸೆಲ್ ಬಳಕೆದಾರರಿಗೆ ಜೆಮಿನಿ AI ಲಭ್ಯವಾಗುತ್ತದೆ.

Google Gemini AI: ಗೂಗಲ್​ನಿಂದ ಅತ್ಯಂತ ಶಕ್ತಿಶಾಲಿ ಜೆಮಿನಿ AI ಬಿಡುಗಡೆ: ಚಾಟ್‌ಜಿಪಿಟಿಗೆ ಶುರುವಾಯಿತು ನಡುಕ
Google Gemini AI
Follow us
|

Updated on: Dec 07, 2023 | 1:49 PM

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಜಗತ್ತಿನಲ್ಲಿ ಪ್ರಸಿದ್ಧ ಗೂಗಲ್ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋಗಿದೆ. ಇಂದು ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿ ಜೆಮಿನಿ AI ಅನ್ನು ಪರಿಚಯಿಸಿದೆ. ಅಮೇರಿಕನ್ ಸರ್ಚ್ ಇಂಜಿನ್ ಕಂಪನಿಯು, ಇದುವರೆಗಿನ ತನ್ನ ಅತಿದೊಡ್ಡ ಮತ್ತು ಅತ್ಯಂತ ಸಮರ್ಥ AI ಮಾದರಿಯಾಗಿದೆ ಎಂದು ಹೇಳಿಕೊಂಡಿದೆ. ಈ ಮೂಲಕ AI ಪ್ರಪಂಚದಲ್ಲಿ, OpenAI ನ ChatGPT ಮತ್ತು Metaದ Llama 2 ನೊಂದಿಗೆ ನೇರ ಸ್ಪರ್ಧೆಗೆ ಇಳಿದಿದೆ.

ಗೂಗಲ್​ನ ಮೂಲ ಕಂಪನಿ ಆಲ್ಫಾಬೆಟ್ AI ಸಂಶೋಧನಾ ಘಟಕ ಡೀಪ್‌ಮೈಂಡ್ ಮತ್ತು ಗೂಗಲ್ ಬ್ರೈನ್ ಅನ್ನು ವಿಲೀನಗೊಳಿಸಿ ಗೂಗಲ್ ಡೀಪ್​ಮೈಂಡ್ ಘಟಕವನ್ನು ರಚಿಸಿದ್ದು, ಜೆಮಿನಿ AI ಈ ಘಟಕದ ಮೊದಲ AI ಮಾದರಿಯಾಗಿದೆ. ಈ ಮಾದರಿಯನ್ನು ವಿಶೇಷ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಅನೇಕ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾದ ಬಹುಮಾದರಿಯಂತಿದೆ.

ಜೆಮಿನಿ AI ನ ವೈಶಿಷ್ಟ್ಯಗಳು

ಜೆಮಿನಿ AI ಅನ್ನು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ನಿರ್ವಹಿಸಲು ಅಭಿವೃದ್ಧಿಪಡಿಸಲಾಗಿದೆ. ಇದು ಒಂದೇ ಸಮಯದಲ್ಲಿ ಪಠ್ಯ, ಕೋಡ್, ಆಡಿಯೋ, ಫೋಟೋ ಮತ್ತು ವಿಡಿಯೋದಂತಹ ವಿವಿಧ ರೀತಿಯ ಮಾಹಿತಿಯಲ್ಲಿ ಕೆಲಸ ಮಾಡುತ್ತದೆ.

ಇದನ್ನೂ ಓದಿ
Image
ಭಾರತದಲ್ಲಿ ಐಕ್ಯೂ 12 5G ಪ್ರಿ-ಬುಕಿಂಗ್ ಆರಂಭ: ಫೀಚರ್ಸ್ ಏನಿದೆ ನೋಡಿ
Image
ಫೋನ್ ಹಾಳಾಗಿದೆಯೆಂದು ಸರ್ವಿಸ್ ಸೆಂಟರ್​ಗೆ ಕೊಡುವ ಮುನ್ನ ಈ ಸ್ಟೋರಿ ಓದಿ
Image
ಭಾರತದ ಬರೋಬ್ಬರಿ 75 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್
Image
ಕೇವಲ 6,999 ರೂ. ಗಳಿಗೆ ಬಿಡುಗಡೆ ಆಯಿತು ಐಫೋನ್​ನಂತಹ ಸ್ಮಾರ್ಟ್​ಫೋನ್: ಖರೀದ

Tech Tips: ಹೊಸ ಮೊಬೈಲ್ ಖರೀದಿಸುವ ಮುನ್ನ ಏನೆಲ್ಲ ಚೆಕ್ ಮಾಡಬೇಕು?: ಇಲ್ಲಿದೆ ಮಾಹಿತಿ

ಜೆಮಿನಿ AIಯು ಜೆಮಿನಿ ಅಲ್ಟ್ರಾ, ಜೆಮಿನಿ ಪ್ರೊ ಮತ್ತು ಜೆಮಿನಿ ನ್ಯಾನೋ ಎಂಬ ಮೂರು ಗಾತ್ರಗಳಲ್ಲಿ ಲಭ್ಯವಿರುತ್ತದೆ. MMLU (ಮಾಸ್ಸಿವ್ ಮಲ್ಟಿಟಾಸ್ಕ್ ಲ್ಯಾಂಗ್ವೇಜ್ ಅಂಡರ್‌ಸ್ಟ್ಯಾಂಡಿಂಗ್) ಬೆಂಚ್‌ಮಾರ್ಕ್‌ನಲ್ಲಿ ಮಾನವ ತಜ್ಞರನ್ನು ಮೀರಿಸುವ ಮೊದಲ ಮಾದರಿ ಇದಾಗಿದೆ. ಇದು ಗಣಿತ, ಭೌತಶಾಸ್ತ್ರ, ಇತಿಹಾಸ, ಕಾನೂನು, ವೈದ್ಯಕೀಯ ಮತ್ತು ನೈತಿಕತೆಯಂತಹ 57 ವಿಷಯಗಳ ಸಂಯೋಜನೆಯನ್ನು ವಿಶ್ವದ ಜ್ಞಾನ ಮತ್ತು ಸಮಸ್ಯೆ-ಪರಿಹರಿಸುವ ಸಾಮರ್ಥ್ಯಗಳನ್ನು ಪರೀಕ್ಷಿಸಲು ಬಳಸುಲಾಗುತ್ತದೆ.

ಜೆಮಿನಿ ಪ್ರೊ ಆರಂಭದಲ್ಲಿ ಪಠ್ಯ-ಆಧಾರಿತ ಪ್ರಾಂಪ್ಟ್‌ಗಳನ್ನು ಬೆಂಬಲಿಸುತ್ತದೆ, ಮಲ್ಟಿಮೋಡಲ್ ಬೆಂಬಲವು ನಂತರ ಬರುತ್ತದೆ. ಹೊಸ ಮಾದರಿಯು 170 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಲ್ಲಿ ಇಂಗ್ಲಿಷ್‌ನಲ್ಲಿ ಲಭ್ಯವಿರುತ್ತದೆ. ಭವಿಷ್ಯದಲ್ಲಿ ಯುರೋಪ್‌ನಂತಹ ಹೆಚ್ಚಿನ ಭಾಷೆಗಳನ್ನು ಇದಕ್ಕೆ ಸೇರಿಸಲಾಗುತ್ತದಂತೆ.

ಹೊಸ ವರ್ಷದಲ್ಲಿ, ಜೆಮಿನಿ ಅಲ್ಟ್ರಾ ಬೆಂಬಲವು ಗೂಗಲ್ ಬರ್ಡ್‌ನಲ್ಲಿ ಲಭ್ಯವಿರುತ್ತದೆ. ಪಠ್ಯ, ಚಿತ್ರಗಳು, ಆಡಿಯೋ, ವಿಡಿಯೋ ಮತ್ತು ಕೋಡ್‌ನಂತಹ ವಿವಿಧ ರೀತಿಯ ಡೇಟಾವನ್ನು ನಿರ್ವಹಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಜೆಮಿನಿ ಅಲ್ಟ್ರಾ ವಿಶ್ವದ ಅತ್ಯಂತ ಜನಪ್ರಿಯ ಕೋಡಿಂಗ್ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ಕೋಡ್ ಅನ್ನು ಅರ್ಥಮಾಡಿಕೊಳ್ಳಬಹುದು ಮತ್ತು ರಚಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ