AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೋನ್ ಹಾಳಾಗಿದೆಯೆಂದು ಸರ್ವಿಸ್ ಸೆಂಟರ್​ಗೆ ಕೊಡುವ ಮುನ್ನ ಈ ಸ್ಟೋರಿ ಓದಿ

Smartphone Tips: ಸ್ಮಾರ್ಟ್​ಫೋನ್ ಬಳಸುವ ಸಂದರ್ಭ ಒಂದಲ್ಲ ಒಂದು ದಿನ ಅದು ಹಾಳಾಗಿಯೇ ಆಗುತ್ತದೆ. ಆಗ ಫೋನ್ ಅನ್ನು ಸರ್ವೀಸ್ ಸೆಂಟರ್​ಗೆ ನೀಡುತ್ತಾರೆ. ಆದರೆ ಹೀಗೆ ಸ್ಮಾರ್ಟ್ ಫೋನ್ ರಿಪೇರಿಗೆ ನೀಡುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು. ಅವು ಯಾವುದು?, ಇಲ್ಲಿದೆ ನೋಡಿ ಮಾಹಿತಿ.

ಫೋನ್ ಹಾಳಾಗಿದೆಯೆಂದು ಸರ್ವಿಸ್ ಸೆಂಟರ್​ಗೆ ಕೊಡುವ ಮುನ್ನ ಈ ಸ್ಟೋರಿ ಓದಿ
smartphone service center
Vinay Bhat
|

Updated on: Dec 05, 2023 | 1:43 PM

Share

ಇಂದಿನ ದಿನಗಳಲ್ಲಿ ಸ್ಮಾರ್ಟ್​ಫೋನ್ (Smartphone) ಬಳಕೆ ಅನಿವಾರ್ಯವಾಗಿದೆ. ಇದು ನಮ್ಮ ಅಗತ್ಯ ವಸ್ತುವಾಗಿ ಮಾರ್ಪಟ್ಟಿದೆ. ಸ್ಮಾರ್ಟ್​ಫೋನ್ ಕೇವಲ ಕರೆಗಳನ್ನು ಮಾಡಲು ಬಳಸಲಾಗುವ ಗ್ಯಾಜೆಟ್ ಮಾತ್ರವಲ್ಲದೆ, ಬ್ಯಾಂಕಿಂಗ್‌ನಿಂದ ಪ್ರಾರಂಭಿಸಿ ಅನೇಕ ಕಾರ್ಯಗಳಿಗೆ ಬಳಸಲಾಗುತ್ತದೆ. ವೈಯಕ್ತಿಕ ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ಇತರ ಹಲವು ವೈಯಕ್ತಿಕ ಡೇಟಾವು ಸ್ಮಾರ್ಟ್​ಫೋನ್‌ನಲ್ಲಿ ಇರುತ್ತದೆ. ಆದರೆ, ಈ ಫೋನ್ ಒಂದಲ್ಲ ಒಂದು ದಿನ ಹಾಳಾಗುವುದು ಖಂಡಿತ. ಆಗ ಫೋನ್ ಅನ್ನು ಸರ್ವಿಸ್ ಸೆಂಟರ್​ನಲ್ಲಿ ನೀಡಬೇಕಾಗುತ್ತದೆ. ಹೀಗೆ ಫೋನ್ ರಿಪೇರಿಗೆ ನೀಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.

  • ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಹೊಂದಿದ್ದರೆ, ನೀವು ಮೊದಲು ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು. ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವ ಮೊದಲು ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಅನ್ನು ಬರೆದಿಟ್ಟುಕೊಳ್ಳುವುದು ಉತ್ತಮ.
  • ಸ್ಮಾರ್ಟ್‌ಫೋನ್‌ನ ನೋಟ್ ಪ್ಯಾಡ್‌ನಲ್ಲಿ ಪಾಸ್‌ವರ್ಡ್ ಮತ್ತು ವೈಯಕ್ತಿಕ ವಿವರಗಳನ್ನು ಬರೆಯುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಫೋನ್ ಅನ್ನು ಯಾರಿಗಾದರೂ ನೀಡುವಾಗ ನೋಟ್ ಪ್ಯಾಡ್​ನಲ್ಲಿ ಇರುವುದನ್ನು ಅಳಿಸಲು ಮರೆಯಬೇಡಿ.
  • ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಸದವರೇ ಇಲ್ಲ. ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯನ್ನು ದುರುಪಯೋಗಪಡಿಸಿಕೊಳ್ಳದಿರಲು, ಎಲ್ಲಾ ಖಾತೆಗಳಿಂದ ಲಾಗ್ ಔಟ್ ಮಾಡಿದ ನಂತರವೇ ನೀವು ಫೋನ್ ಅನ್ನು ಸರ್ವಿಸ್​ಗೆ ನೀಡಬೇಕು.
  • ಜಿಮೇಲ್ ಖಾತೆಯೂ ಲಾಗ್ ಔಟ್ ಆದ ನಂತರವೇ ಫೋನ್ ಸರ್ವಿಸ್​ ಕೇಂದ್ರಕ್ಕೆ ನೀಡಬೇಕು. ಜಿಮೇಲ್ ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
  • ಫೋನ್ ಗ್ಯಾಲರಿಯಲ್ಲಿ ಯಾವುದೇ ವೈಯಕ್ತಿಕ ಫೋಟೋಗಳಿದ್ದರೆ, ಅವುಗಳನ್ನು ಡಿಲೀಟ್ ಮಾಡಿ. ಫೋಟೋಗಳು ಬೇಕು ಎಂದಿದ್ದರೆ, ಅವುಗಳನ್ನು ಮೆಮೊರಿ ಕಾರ್ಡ್ ಅಥವಾ ಪೆನ್ ಡ್ರೈವ್‌ಗೆ ವರ್ಗಾಯಿಸಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಕೇಸ್ ವಾಪಸ್ ತೆಗೆದುಕೊಂಡರೆ ಮನು ವಿರುದ್ಧ ಸಾಕ್ಷಿ ಬಿಡ್ತೀನಿ: ಸಂತ್ರಸ್ತೆ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಸಿನಿಮಾ ಆರಿಸಿಕೊಂಡಿದ್ದೇಕೆ? ಜನಾರ್ಧನ ರೆಡ್ಡಿ ಪುತ್ರನ ಉತ್ತರ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಪಕ್ಷದ ಕಾರ್ಯದರ್ಶಿ ಮತ್ತು ಅಧಿಕಾರಿಗಳ ಸಭೆ ರಾಮನಗರದಲ್ಲಿ ನಡೆಯಲಿದೆ: ಶಾಸಕ
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಮನೆಯಲ್ಲಿ ಯಾರೂ ಇಲ್ಲದಿದ್ದಾಗ 3ನೇ ಮಹಡಿಯ ಕಿಟಕಿಯಿಂದ ಹೊರಗೆ ನೇತಾಡಿದ ಮಗು
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸುರ್ಜೇವಾಲಾ ಶಾಸಕರನ್ನು ಭೇಟಿಯಾಗುತ್ತಿರುವುದು ಒಂದು ಪ್ರಕ್ರಿಯೆ: ಲಕ್ಷ್ಮಿ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಸರ್ಕಾರೀ ಕೆಲಸದ ನಿಮಿತ್ತ ಸಿಎಂ, ಡಿಸಿಎಂ ದೆಹಲಿ ಹೋಗಿರಬಹುದು: ದೇಶಪಾಂಡೆ
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಐಶ್ವರ್ಯಾ ಗೌಡ ವಂಚನೆ ಪ್ರಕರಣ: ಮತ್ತೆ ಇಡಿ ವಿಚಾರಣೆಗೆ ಹಾಜರಾದ ಡಿಕೆ ಸುರೇಶ್
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಊರಿಗೆ ರಸ್ತೆಗಿಂತ ಬಡವನ ಹೊಟ್ಟೆಗೆ ಅನ್ನ ಮತ್ತು ಮೈಗೆ ಬಟ್ಟೆ ಮುಖ್ಯ: ಸವದಿ
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ಇವತ್ತು ಸಿದ್ದೇಶ್ವರ ಹುಟ್ಟುಹಬ್ಬ, ವಿಶ್ ಮಾಡಲು ಬಂದಿದ್ದೇವೆ: ಹರೀಶ್
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ
ರೆಬೆಲ್ ನಾಯಕರಲ್ಲಿ ಕುಮಾರ ಬಂಗಾರಪ್ಪ ಉಳಿದವರಿಗಿಂತ ಜಾಸ್ತಿ ಜನಪ್ರಿಯ