ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ ಎಷ್ಟು ಸ್ಮಾರ್ಟ್​ಫೋನ್​ಗಳು ಬರಲಿವೆ?, ಯಾವುವು?: ಇಲ್ಲಿದೆ ಮಾಹಿತಿ

Upcoming smartphones this December 2023: ನೀವು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸಹ ಬದಲಾಯಿಸಲು ಯೋಜಿಸುತ್ತಿದ್ದರೆ, ಮುಂಬರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯು ನಿಮಗೆ ಬಹಳಷ್ಟು ಸಹಾಯ ಮಾಡಬಹುದು. ಇದರ ಮೂಲಕ ನಿಮ್ಮ ಆಯ್ಕೆಗೆ ತಕ್ಕಂತೆ ಫೋನ್ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿದೆ ನೋಡಿ ಡಿಸೆಂಬರ್​ನಲ್ಲಿ ಬಿಡುಗಡೆ ಆಗಲಿರುವ ಫೋನುಗಳ ಪಟ್ಟಿ.

ಡಿಸೆಂಬರ್​ನಲ್ಲಿ ಮಾರುಕಟ್ಟೆಗೆ ಎಷ್ಟು ಸ್ಮಾರ್ಟ್​ಫೋನ್​ಗಳು ಬರಲಿವೆ?, ಯಾವುವು?: ಇಲ್ಲಿದೆ ಮಾಹಿತಿ
Smartphones
Follow us
|

Updated on: Dec 04, 2023 | 2:46 PM

2023ನೇ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷದ ಕೊನೆಯ ತಿಂಗಳಲ್ಲಿ ನೀವು ಸ್ಮಾರ್ಟ್​ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ, ಡಿಸೆಂಬರ್​ನಲ್ಲಿ ಆಕರ್ಷಕ ಫೋನುಗಳ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಹೊಸ ನವೀಕರಿಸಿದ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಯೋಚಿಸುತ್ತಿದ್ದರೆ, ಈ ತಿಂಗಳು ಫೋನ್ ಖರೀದಿಗೆ ಬೆಸ್ಟ್ ಟೈಮ್. ಡಿಸೆಂಬರ್ 2023 ರಲ್ಲಿ ಬಿಡುಗಡೆ ಆಗಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವು ಇಲ್ಲಿ ಹೇಳುತ್ತೇವೆ. ಇದರಲ್ಲಿ ಶವೋಮಿ, ಒನ್​ಪ್ಲಸ್, ರಿಯಲ್ ಮಿ ಯಂತಹ ಜನಪ್ರಿಯ ಬ್ರಾಂಡ್‌ಗಳು ಇವೆ.

ರೆಡ್ಮಿ 13c

ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ತರುತ್ತಿರುವ ಶವೋಮಿ ತನ್ನ ಸಬ್​ಬ್ರಾಂಡ್​ ರೆಡ್ಮಿ ಅಡಿಯಲ್ಲಿ ರೂ. 10,000ಕ್ಕೆ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಕಂಪನಿಯು ತನ್ನ ರೆಡ್ಮಿ 13C 5G ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ರೆಡ್ಮಿ 13C ಈ ವರ್ಷದ ಆರಂಭದಲ್ಲಿ ನೈಜೀರಿಯಾದಲ್ಲಿ ಪದಾರ್ಪಣೆ ಮಾಡಿತ್ತು. ಇದು ದೇಶದಲ್ಲಿ ಡಿಸೆಂಬರ್ 6 ರಂದು ಬಿಡುಗಡೆಯಾಗಲಿದೆ.

ಬೆಸ್ಟ್ ಕ್ಯಾಮೆರಾ ಫೋನ್ ಬೇಕೇ?: ಒಪ್ಪೋ ರೆನೋ 10 ಪ್ರೊ ಫೋನ್ ಬೆಲೆಯಲ್ಲಿ ಇಳಿಕೆ

ಇದನ್ನೂ ಓದಿ
Image
12GB RAM ಹೊಂದಿರುವ ಈ 5G ಸ್ಮಾರ್ಟ್​ಫೋನ್ ಬೆಲೆ ಕೇವಲ 9,999 ರೂ.
Image
ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ?
Image
ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?
Image
ಬೆಲೆ ಘೋಷಿಸದೆ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಟೆಕ್ನೋ: ಯಾವುದು ನೋಡಿ

ಒನ್​ಪ್ಲಸ್ 12 5G

ಜನಪ್ರಿಯ ಬ್ರ್ಯಾಂಡ್ ಒನ್​ಪ್ಲಸ್ ತನ್ನ ಒನ್​ಪ್ಲಸ್ 12 5G ಫೋನ್ ಅನ್ನು ಇದೇ ತಿಂಗಳು ರಿಲೀಸ್ ಮಾಡಲಿದೆ. ಒನ್​ಪ್ಲಸ್ ಡಿಸೆಂಬರ್ 5 ರಂದು ಜಾಗತಿಕ ಮಾರುಕಟ್ಟೆಗೆ ಅಪ್ಪಳಿಸಲಿದೆ. ವರದಿಗಳ ಪ್ರಕಾರ, ಜಾಗತಿಕ ಬಿಡುಗಡೆಯ ನಂತರ, ಈ ಫೋನ್ ಜನವರಿ 23 ರಂದು ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆಯಿದೆ.

ರಿಯಲ್ ಮಿ GT 5 ಪ್ರೊ

ರಿಯಲ್ ಮಿ GT 5 ಪ್ರೊ ಫ್ಲ್ಯಾಗ್‌ಶಿಪ್ ಫೋನ್ ಡಿಸೆಂಬರ್ 7 ರಂದು ಅನಾವರಣಗೊಳ್ಳಲಿದೆ. ಇತ್ತೀಚೆಗೆ, ಕಂಪನಿಯು ವಿಡಿಯೋ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಸುದ್ದಿಯನ್ನು ಬಹಿರಂಗಪಡಿಸಿದೆ. ಈ ಟೀಸರ್ ಪ್ರಕಾರ, ಮುಂಬರುವ ಫೋನ್‌ನಲ್ಲಿ ನೀವು 50 ಮೆಗಾಪಿಕ್ಸೆಲ್, 3x, ಸೋನಿ IMX890 ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಪಡೆಯಬಹುದು.

ರೆಡ್ಮಿ ನೋಟ್ 13 ಪ್ರೊ ಸರಣಿ

ರೆಡ್ಮಿ ನೋಟ್ 13 ಪ್ರೊ ಸರಣಿಯು ಈ ತಿಂಗಳು ಜಾಗತಿಕವಾಗಿ ಪದಾರ್ಪಣೆ ಮಾಡಬಹುದು. ಮುಂಬರುವ ರೆಡ್ಮಿ ನೋಟ್ 13 ಪ್ರೊ 5G ಸರಣಿಯಲ್ಲಿ ನೀವು 6.67-ಇಂಚಿನ AMOLED ಡಿಸ್ಪ್ಲೇಯನ್ನು ಪಡೆಯಬಹುದು. ಕ್ವಾಲ್ಕಂ ಸ್ನಾಪ್​ಡ್ರಾಗನ್ 7s Gen 2 SoC ಚಿಪ್‌ಸೆಟ್‌ನೊಂದಿಗೆ ಅಳವಡಿಸಬಹುದಾಗಿದೆ. 16 GB RAM ಮತ್ತು 512 GB ಸಂಗ್ರಹಣೆಯೊಂದಿಗೆ ಬರಬಹುದು. ಇದರಲ್ಲಿ ನಿಮಗೆ ಬ್ಯಾಟರಿಯ ಬಗ್ಗೆ ಯಾವುದೇ ಟೆನ್ಶನ್ ಇರುವುದಿಲ್ಲ. ಯಾಕಂದ್ರೆ ಈ ಫೋನ್ 67W ವೇಗದ ಚಾರ್ಜಿಂಗ್ ಆಯ್ಕೆಯೊಂದಿಗೆ 5,000 mAh ಬ್ಯಾಟರಿಯನ್ನು ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ