12GB RAM ಹೊಂದಿರುವ ಈ 5G ಸ್ಮಾರ್ಟ್​ಫೋನ್ ಬೆಲೆ ಕೇವಲ 9,999 ರೂ. ಎಂದರೆ ನಂಬಲೇಬೇಕು

ಐಟೆಲ್ P55 5G ಫೋನ್‌ನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ AI ಲೆನ್ಸ್ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಅಗ್ಗದ ಫೋನ್‌ನಲ್ಲಿ ಗ್ರಾಹಕರಿಗೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಬಜೆಟ್ ಸ್ಮಾರ್ಟ್‌ಫೋನ್‌ನ ಪ್ರಮುಖ ವಿಶೇಷವೆಂದರೆ ಇದು 12 GB RAM ವರೆಗಿನ ಆಯ್ಕೆಯನ್ನು ಹೊಂದಿದೆ.

12GB RAM ಹೊಂದಿರುವ ಈ 5G ಸ್ಮಾರ್ಟ್​ಫೋನ್ ಬೆಲೆ ಕೇವಲ 9,999 ರೂ. ಎಂದರೆ ನಂಬಲೇಬೇಕು
itel P55 5G
Follow us
Vinay Bhat
|

Updated on: Dec 04, 2023 | 2:05 PM

ನೀವು ಹೊಸ 5G ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ ಮತ್ತು ನಿಮ್ಮ ಬಜೆಟ್ ಕೇವಲ 10,000 ರೂ. ವರೆಗೆ ಇದ್ದರೆ, ಈ ಬೆಲೆ ಶ್ರೇಣಿಯಲ್ಲಿ ಅತ್ಯುತ್ತಮ ಮೊಬೈಲ್ ಒಂದು ಮಾರುಕಟ್ಟೆಯಲ್ಲಿದೆ. ಅದುವೇ ಐಟೆಲ್ P55 5G (itel P55 5G) ಸ್ಮಾರ್ಟ್​ಫೋನ್. ಈ ಅಗ್ಗದ ಫೋನ್‌ನಲ್ಲಿ ಗ್ರಾಹಕರಿಗೆ ಹಲವು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಬಜೆಟ್ ಸ್ಮಾರ್ಟ್‌ಫೋನ್‌ನ ಪ್ರಮುಖ ವಿಶೇಷವೆಂದರೆ ಇದು 12 GB RAM ವರೆಗಿನ ಆಯ್ಕೆಯನ್ನು ಹೊಂದಿದೆ. ಮಾತ್ರವಲ್ಲದೆ, ಕಂಪನಿಯು ಈ ಫೋನ್‌ನೊಂದಿಗೆ ಒಂದು ವರ್ಷವಲ್ಲ ಎರಡು ವರ್ಷಗಳ ವ್ಯಾರಂಟಿಯನ್ನು ನೀಡುತ್ತಿದೆ. ಐಟೆಲ್ P55 5G ಫೋನ್‌ನ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಐಟೆಲ್ P55 5G ಸ್ಮಾರ್ಟ್​ಫೋನ್ ಬೆಲೆಗೆ ತಕ್ಕಂತೆ 180 Hz ಟಚ್ ಸ್ಯಾಂಪ್ಲಿಂಗ್ ದರದೊಂದಿಗೆ 6.6-ಇಂಚಿನ ಪೂರ್ಣ-HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. 90 Hz ರಿಫ್ರೆಶ್ ದರದೊಂದಿಗೆ ಬರುತ್ತಿರುವ ಈ ಬಜೆಟ್ ಫೋನ್​ನಲ್ಲಿ ಗ್ರಾಫಿಕ್ಸ್‌ಗಾಗಿ Mali G57 GPU ಜೊತೆಗೆ ವೇಗ ಮತ್ತು ಮಲ್ಟಿಟಾಸ್ಕಿಂಗ್‌ಗಾಗಿ ಮೀಡಿಯಾಟೆಕ್ ಡೈಮನ್ಸಿಟಿ 6080 ಚಿಪ್‌ಸೆಟ್ ಅನ್ನು ಬಳಸಲಾಗಿದೆ.

ಪೋಕೋ M6 ಪ್ರೊ 5G ಫೋನಿಗೆ ಭರ್ಜರಿ ಬೇಡಿಕೆ: ಹೊಸ 8GB + 256GB ರೂಪಾಂತರ ಬಿಡುಗಡೆ

ಇದನ್ನೂ ಓದಿ
Image
ವಾಟ್ಸ್​ಆ್ಯಪ್ ಮೂಲಕ ಹೊಸ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆಯುವುದು ಹೇಗೆ?
Image
ವಾಟ್ಸ್​ಆ್ಯಪ್​ನಲ್ಲಿ ಶೆಡ್ಯೂಲ್ ಮಾಡಿಟ್ಟು ಮೆಸೇಜ್ ಕಳುಹಿಸುವುದು ಹೇಗೆ?
Image
ಬೆಲೆ ಘೋಷಿಸದೆ ಹೊಸ ಸ್ಮಾರ್ಟ್​ಫೋನ್ ಪರಿಚಯಿಸಿದ ಟೆಕ್ನೋ: ಯಾವುದು ನೋಡಿ
Image
ಬೆಸ್ಟ್ ಕ್ಯಾಮೆರಾ ಫೋನ್ ಬೇಕೇ?: ಒಪ್ಪೋ ರೆನೋ 10 ಪ್ರೊ ಫೋನ್ ಬೆಲೆಯಲ್ಲಿ ಇಳಿ

ಕಂಪನಿಯು ಫೋನ್‌ನಲ್ಲಿ 6 GB RAM ಅನ್ನು ನೀಡಿದ್ದರೂ, 6 GB ವರ್ಚುವಲ್ RAM ಮೂಲಕ RAM ಅನ್ನು 12 GB ವರೆಗೆ ಹೆಚ್ಚಿಸಬಹುದು. ಫೋಟೋಗಳು, ವಿಡಿಯೋಗಳು ಮತ್ತು ಇತರ ಫೈಲ್​ಗಳನ್ನು ಸೇವ್ ಮಾಡಲು ಈ ಹ್ಯಾಂಡ್‌ಸೆಟ್ 128 GB ಸಂಗ್ರಹವನ್ನು ಹೊಂದಿದೆ. ಮತ್ತು ಮೈಕ್ರೋ SD ಕಾರ್ಡ್‌ನ ಸಹಾಯದಿಂದ 1 TB ವರೆಗೆ ವಿಸ್ತರಿಸಬಹುದಾದ ಆಯ್ಕೆ ಕೂಡ ಇದೆ.

ಐಟೆಲ್ P55 5G ಫೋನ್‌ನ ಹಿಂಭಾಗದಲ್ಲಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾದೊಂದಿಗೆ AI ಲೆನ್ಸ್ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದ್ದು, 18 ವ್ಯಾಟ್ ವೇಗದ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ, 3.5 ಎಂಎಂ ಆಡಿಯೋ ಜ್ಯಾಕ್, ಭದ್ರತೆಗಾಗಿ ಸೈಡ್ ಮೌಂಟ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಫೀಚರ್ ಕೂಡ ಇದೆ.

ಭಾರತದಲ್ಲಿ ಐಟೆಲ್ P55 5G ಬೆಲೆ:

ಐಟೆಲ್ P55 5G ಸ್ಮಾರ್ಟ್‌ಫೋನ್‌ನ 6 GB RAM + 128 GB ರೂಪಾಂತರದ ಬೆಲೆ 9,999 ರೂ. ಆಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಮಾರಾಟಕ್ಕೆ ಲಭ್ಯವಿದೆ. ಮಿಂಟ್ ಗ್ರೀನ್ ಮತ್ತು ಗ್ಯಾಲಕ್ಸಿ ಬ್ಲೂ ಬಣ್ಣಗಳಲ್ಲಿ ಖರೀದಿಸಬಹುದು.

ನೀವು 10 ಸಾವಿರದವರೆಗಿನ ಬೆಲೆಯಲ್ಲಿ ಉತ್ತಮ 5G ಮೊಬೈಲ್ ಫೋನ್ ಹುಡುಕುತ್ತಿದ್ದರೆ ಐಟೆಲ್ P55 ಅತ್ಯುತ್ತಮ ಆಯ್ಕೆ ಆಗಿದೆ. ಈ ಫೋನಿನ ವಿಶೇಷವೆಂದರೆ ಇದು 12 GB RAM ಮತ್ತು ಎರಡು ವರ್ಷಗಳ ವಾರಂಟಿಯೊಂದಿಗೆ ಬರುತ್ತದೆ. ಈ ಅಗ್ಗದ 5G ಫೋನ್‌ನಲ್ಲಿ ಏನೆಲ್ಲ ಇದೆ ನೋಡೋಣ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ