AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಸ್ಟ್ ಕ್ಯಾಮೆರಾ ಫೋನ್ ಬೇಕೇ?: ಒಪ್ಪೋ ರೆನೋ 10 ಪ್ರೊ ಫೋನ್ ಬೆಲೆಯಲ್ಲಿ ಇಳಿಕೆ

OPPO Reno 10 Pro 5G Price Cut: ಒಪ್ಪೋ ರೆನೋ 10 ಪ್ರೊ, ಆರಂಭದಲ್ಲಿ 12GB + 256GB ಮಾದರಿಗೆ 39,999 ರೂ. ಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ 2,000 ರೂ. ಬೆಲೆ ಕಡಿತದ ನಂತರ, ಒಪ್ಪೋ ರೆನೋ 10 ಪ್ರೊ ಭಾರತದಲ್ಲಿ 37,999 ರೂ. ಗೆ ಸೇಲ್ ಆಗುತ್ತಿದೆ.

ಬೆಸ್ಟ್ ಕ್ಯಾಮೆರಾ ಫೋನ್ ಬೇಕೇ?: ಒಪ್ಪೋ ರೆನೋ 10 ಪ್ರೊ ಫೋನ್ ಬೆಲೆಯಲ್ಲಿ ಇಳಿಕೆ
oppo reno 10 pro 5g
Follow us
Vinay Bhat
|

Updated on:Dec 03, 2023 | 4:08 PM

ಆಕರ್ಷಕ ಕ್ಯಾಮೆರಾ ಫೀಚರ್​ಗಳನ್ನು ಒಳಗೊಂಡಿರುವ ಒಪ್ಪೋ ಕಂಪನಿಯ ಒಪ್ಪೋ ರೆನೋ 10 ಪ್ರೊ (OPPO Reno 10 Pro 5G) ಸ್ಮಾರ್ಟ್​ಫೋನ್ ಭಾರತದಲ್ಲಿ ಈ ವರ್ಷದ ಜುಲೈನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಜೊತೆಗೆ ಒಪ್ಪೋ ರೆನೋ 10 ಮತ್ತು ಒಪ್ಪೋ ರೆನೋ 10 ಪ್ರೊ+ ಕೂಡ ಅನಾವರಣಗೊಂಡಿತ್ತು. ಪ್ರೊ ರೂಪಾಂತರವನ್ನು ಮಿಡ್-ಸೆಗ್ಮೆಂಟ್​ನಲ್ಲಿ ರಿಲೀಸ್ ಮಾಡಲಾಗಿತ್ತು. ಇದೀಗ ಕಂಪನಿ ಈಗಾಗಲೇ ಚೀನಾದಲ್ಲಿ ಪಾದರ್ಪಣೆ ಮಾಡಿರುವ ರೆನೋ 11 ಸರಣಿಯನ್ನು ದೇಶದಲ್ಲಿ ಬಿಡುಗಡೆ ಸಜ್ಜಾಗುತ್ತಿದೆ. ಹೀಗಿರುವಾಗ ಭಾರತೀಯ ಗ್ರಾಹಕರಿಗೆ ಒಪ್ಪೋ ರೆನೋ 10 ಪ್ರೊನ ಬೆಲೆಯನ್ನು 2,000 ರೂ. ಗಳಷ್ಟು ಕಡಿಮೆ ಮಾಡಿದೆ.

ಭಾರತದಲ್ಲಿ ಒಪ್ಪೋ ರೆನೋ 10 ಪ್ರೊ 5G ಬೆಲೆ, ಲಭ್ಯತೆ:

ಒಪ್ಪೋ ರೆನೋ 10 ಪ್ರೊ, ಆರಂಭದಲ್ಲಿ 12GB + 256GB ಮಾದರಿಗೆ 39,999 ರೂ. ಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ 2,000 ರೂ. ಬೆಲೆ ಕಡಿತದ ನಂತರ, ಒಪ್ಪೋ ರೆನೋ 10 ಪ್ರೊ ಭಾರತದಲ್ಲಿ 37,999 ರೂ. ಗೆ ಸೇಲ್ ಆಗುತ್ತಿದೆ. ಹೊಸ ಬೆಲೆಗಳು ಈಗಾಗಲೇ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಇತರ ಆನ್‌ಲೈನ್ ಚಾನೆಲ್‌ಗಳಲ್ಲಿ ಲಭ್ಯವಿದೆ.

ವಿವೋದಿಂದ ಬಜೆಟ್ ಬೆಲೆಗೆ ಮತ್ತೊಂದು ವಿವೋ Y100i ಸ್ಮಾರ್ಟ್​ಫೋನ್ ಬಿಡುಗಡೆ: ಏನಿದೆ ಫೀಚರ್ಸ್

ಇದನ್ನೂ ಓದಿ
Image
ಪೋಕೋ M6 ಪ್ರೊ 5G ಫೋನಿಗೆ ಭರ್ಜರಿ ಬೇಡಿಕೆ: ಹೊಸ 8GB + 256GB ಬಿಡುಗಡೆ
Image
ನಥಿಂಗ್ ಫೋನ್ 2 ದರ ಭರ್ಜರಿ ಇಳಿಕೆ: ಇನ್ಮುಂದೆ ಬೆಲೆ ಹೆಚ್ಚಾಗುವುದಿಲ್ಲ
Image
ನಿಮ್ಮ ಫೋನ್ ಸ್ಪೀಕರ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ?: ಹಾಗಿದ್ರೆ ಈ
Image
ಸ್ಮಾರ್ಟ್​ಫೋನ್ ಅಂದ್ರೆ ಇದು: 6,000mAh ಬ್ಯಾಟರಿ, 108MP ಕ್ಯಾಮೆರಾ

ಒಪ್ಪೋ ರೆನೋ 10 ಪ್ರೊ 5G ಫೀಚರ್ಸ್:

ಡಿಸ್ ಪ್ಲೇ: ಒಪ್ಪೋ ರೆನೋ 10 ಪ್ರೊ 6.74-ಇಂಚಿನ OLED AMOLED ಕರ್ವ್ಡ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರವನ್ನು ಹೊಂದಿದೆ.

ಚಿಪ್ಸೆಟ್: ಈ ಸ್ಮಾರ್ಟ್​ಫೋನ್ ಕ್ವಾಲ್ಕಂ ಸ್ನಾಪ್​ಡ್ರಾಗನ್ 778G ಪ್ರೊಸೆಸರ್​ನಿಂದ ಚಾಲಿತವಾಗಿದೆ.

ಹಿಂದಿನ ಕ್ಯಾಮೆರಾಗಳು: ಒಪ್ಪೋ ರೆನೋ 10 ಪ್ರೊ 50MP Sony IMX890 ಪ್ರಾಥಮಿಕ ಸಂವೇದಕ, 32MP ಟೆಲಿಫೋಟೋ ಲೆನ್ಸ್ ಮತ್ತು 8MP ಅಲ್ಟ್ರಾವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ.

ಸೆಲ್ಫಿ ಕ್ಯಾಮೆರಾ: ಸೆಲ್ಫಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಸಾಫ್ಟ್‌ವೇರ್: ಒಪ್ಪೋ ರೆನೋ 10 ಪ್ರೊ ColorOS 13.1 ಅನ್ನು ರನ್ ಆಗುತ್ತದೆ.

ಬ್ಯಾಟರಿ: ಈ ಫೋನ್ 80W SUPERVOOC ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿರುವ 4,600mAh ಬ್ಯಾಟರಿಯನ್ನು ಹೊಂದಿದ್ದು, 28 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಆಗುತ್ತದಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:07 pm, Sun, 3 December 23

ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!