ಭಾರತದಲ್ಲಿ ಒಪ್ಪೋ ಕಂಪನಿಯ ಎರಡನೇ ಮಡಚುವ ಫೋನ್ ಬಿಡುಗಡೆ: ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ ಎಷ್ಟು?

Oppo Find N3 Flip launched in India: ಭಾರತದಲ್ಲಿ ಒಪ್ಪೋ ಫೈಂಡ್ N3 ಫ್ಲಿಪ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ ಏಕೈಕ 12GB RAM + 256GB ಸ್ಟೋರೇಜ್ ಆಯ್ಕೆಗೆ 94,999 ರೂ. ನಿಗದಿ ಮಾಡಲಾಗಿದೆ. ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ನೋಡೋಣ.

ಭಾರತದಲ್ಲಿ ಒಪ್ಪೋ ಕಂಪನಿಯ ಎರಡನೇ ಮಡಚುವ ಫೋನ್ ಬಿಡುಗಡೆ: ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ ಎಷ್ಟು?
oppo find n3 flip
Follow us
Vinay Bhat
|

Updated on: Oct 13, 2023 | 2:21 PM

ಚೀನಾದ ಪ್ರಸಿದ್ಧ ಸ್ಮಾರ್ಟ್‌ಫೋನ್ ತಯಾರಿಕ ಕಂಪನಿ ಒಪ್ಪೋ ಇದೀಗ ಭಾರತದಲ್ಲಿ ತನ್ನ ಹೊಸ ಕ್ಲಾಮ್‌ಶೆಲ್-ಶೈಲಿಯ ಫೋಲ್ಡಬಲ್ ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡಿದೆ. ಈ ಹ್ಯಾಂಡ್‌ಸೆಟ್ ಮೀಡಿಯಾ ಟೆಕ್‌ನ ಆಕ್ಟಾ-ಕೋರ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಜೊತೆಗೆ 12GB RAM ನಿಂದ ಚಾಲಿತವಾಗಿದೆ. ಜೊತೆಗೆ ಆಕರ್ಷಕವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಇದು ಮೂರು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನಿನ ಕುರಿತ ಸಂಪೂರ್ಣ ಮಾಹಿತಿ ನೋಡೋಣ.

ಭಾರತದಲ್ಲಿ ಒಪ್ಪೋ ಫೈಂಡ್ N3 ಫ್ಲಿಪ್ ಬೆಲೆ, ಲಭ್ಯತೆ:

ಭಾರತದಲ್ಲಿ ಒಪ್ಪೋ ಫೈಂಡ್ N3 ಫ್ಲಿಪ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ ಏಕೈಕ 12GB RAM + 256GB ಸ್ಟೋರೇಜ್ ಆಯ್ಕೆಗೆ 94,999 ರೂ. ನಿಗದಿ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್ ಕ್ರೀಮ್ ಗೋಲ್ಡ್, ಮಿಸ್ಟಿ ಪಿಂಕ್, ಸ್ಲೀಕ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಒಪ್ಪೋದ ಆನ್‌ಲೈನ್ ಸ್ಟೋರ್, ಫ್ಲಿಪ್‌ಕಾರ್ಟ್ ಮತ್ತು ದೇಶದಾದ್ಯಂತ ಚಿಲ್ಲರೆ ಅಂಗಡಿಗಳ ಮೂಲಕ ಈ ಫೋನ್ ಅಕ್ಟೋಬರ್ 22 ರಂದು ಸಂಜೆ 6 ಗಂಟೆಯಿಂದ ಮಾರಾಟವಾಗಲಿದೆ. ಒಪ್ಪೋ ಬಳಕೆದಾರರಿಗೆ ಹೆಚ್ಚುವರಿಯಾಗಿ 8,000 ರೂ. ವಿನಿಮಯ ರಿಯಾಯಿತಿ ಮತ್ತು 12,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ.

ಒಪ್ಪೋ ಫೈಂಡ್ N3 ಫ್ಲಿಪ್ ಫೀಚರ್ಸ್:

ಡ್ಯುಯಲ್-ಸಿಮ್ (Nano+eSIM) ಒಪ್ಪೋ ಫೈಂಡ್ N3 ಫ್ಲಿಪ್ ಆಂಡ್ರಾಯ್ಡ್ 13 ನ ಒಪ್ಪೋ ColorOS 13.2 ಸ್ಕಿನ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು 6.8-ಇಂಚಿನ ಪೂರ್ಣ-HD (1,080×2,520 ಪಿಕ್ಸೆಲ್‌ಗಳು) LTPO AMOLED ಇನ್ನರ್ ಡಿಸ್ ಪ್ಲೇ ಹೊಂದಿದ್ದು, 1Hz ಮತ್ತು 120Hz ನಡುವಿನ ಡೈನಾಮಿಕ್ ರಿಫ್ರೆಶ್ ದರದಿಂದ ಕೂಡಿದೆ. 3.26-ಇಂಚಿನ (382×720 ಪಿಕ್ಸೆಲ್‌ಗಳು) ಕವರ್ ಡಿಸ್‌ಪ್ಲೇಯು AMOLED ಪ್ಯಾನೆಲ್ ಜೊತೆಗೆ 900 ನಿಟ್‌ಗಳ ಗರಿಷ್ಠ ಬ್ರೈಟ್​ನೆಸ್ ಹೊಂದಿದೆ.

ಇದನ್ನೂ ಓದಿ
Image
ಮೋಟೋರೊಲಾ ಕಂಪನಿಯ ಫೋನ್ ಬೇಕೇ?: ಫ್ಲಿಪ್​ಕಾರ್ಟ್​ನಲ್ಲಿದೆ ಧಮಾಕ ಆಫರ್
Image
ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಭಾರತ ಸರ್ಕಾರ, ಏನು ವಿಷಯ?
Image
ಎಚ್ಚರ: ನೀವು ಯುಪಿಐ ಬಳಸುತ್ತಿದ್ದರೆ ಈ ವಿಷಯ ನೆನಪಿನಲ್ಲಿಡಿ
Image
ಹೊಸ ಸ್ಮಾರ್ಟ್ ಟಿವಿ ಬೇಕೇ?: ಕೂಡಲೇ ಖರೀದಿಸಿ, 15000 ರೂ. ಒಳಗೆ ಸಿಗುತ್ತಿದೆ

ಸದ್ದಿಲ್ಲದೆ ರಿಲೀಸ್ ಆಯಿತು ಮೋಟೋರೊಲಾ ಎಡ್ಜ್ 2023: ಭರ್ಜರಿ ಸೇಲ್ ಖಚಿತ

ಒಪ್ಪೋ ಫೈಂಡ್ N3 ಫ್ಲಿಪ್ 4nm ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್ ಜೊತೆಗೆ ARM Immortalis-G715 MC11 GPU ಅನ್ನು ಹೊಂದಿದೆ. ಇದು 12GB LPDDR5X RAM ಮತ್ತು 256GB UFS 4.0 ಅಂತರ್ಗತ ಸಂಗ್ರಹಣೆಯನ್ನು ಹೊಂದಿದೆ.

ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿದೆ. ಸೋನಿ IMX890 ಸಂವೇದಕ ಮತ್ತು f/1.8 ದ್ಯುತಿರಂಧ್ರದೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ನೀಡಲಾಗಿದೆ. ಸೋನಿ IMX581 ಸಂವೇದಕ ಮತ್ತು f/2.2 ದ್ಯುತಿರಂಧ್ರದೊಂದಿಗೆ 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹಾಗೂ ಸೋನಿ IMX709 ಸಂವೇದಕ ಮತ್ತು f/2.0 ದ್ಯುತಿರಂಧ್ರದೊಂದಿಗೆ 32-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ನೀಡಲಾಗಿದೆ.

ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಒಪ್ಪೋ ಫೈಂಡ್ N3 ಫ್ಲಿಪ್ 32-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಇನ್ನರ್ ಡಿಸ್ ಪ್ಲೇಯಲ್ಲಿದೆ. ಸೋನಿ IMX709 RGBW ಸಂವೇದಕವನ್ನು f/2.4 ದ್ಯುತಿರಂಧ್ರದಿಂದ ಕೂಡಿದೆ. ಈ ಹ್ಯಾಂಡ್‌ಸೆಟ್ ಡಾಲ್ಬಿ ಅಟ್ಮಾಸ್‌ನೊಂದಿಗೆ ಡ್ಯುಯಲ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ.

ಒಪ್ಪೋ ಫೈಂಡ್ N3 ಫ್ಲಿಪ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, NFC, GPS ಮತ್ತು USB ಟೈಪ್-C ಪೋರ್ಟ್ ಸೇರಿವೆ. ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹ್ಯಾಂಡ್‌ಸೆಟ್ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸಂವೇದಕವನ್ನು ಹೊಂದಿದೆ. ಇದು 44W SuperVOOC ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು