Smart TV Under 15000: ಹೊಸ ಸ್ಮಾರ್ಟ್ ಟಿವಿ ಬೇಕೇ?: ಕೂಡಲೇ ಖರೀದಿಸಿ 15,000 ರೂ. ಒಳಗೆ ಸಿಗುತ್ತಿರುವ ಈ ಅದ್ಭುತ ಟಿವಿ

Amazon Great Indian Festival Sale 2023: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ನಡೆಯುತ್ತಿದೆ. ಈ ಸೇಲ್​ನಲ್ಲಿ ಏಸರ್, ಸ್ಯಾಮ್‌ಸಂಗ್ ಹೆಚ್ಚಿನ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್ ಟಿವಿಗಳು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಇದಲ್ಲದೆ, ವಿವಿಧ ಬ್ಯಾಂಕ್ ಕೊಡುಗೆಗಳು, ಕೂಪನ್ ಆಧಾರಿತ ರಿಯಾಯಿತಿಗಳು ಮತ್ತು ವಿನಿಮಯ ರಿಯಾಯಿತಿಗಳನ್ನು ಕೂಡ ಪಡೆಯಬಹುದು.

Smart TV Under 15000: ಹೊಸ ಸ್ಮಾರ್ಟ್ ಟಿವಿ ಬೇಕೇ?: ಕೂಡಲೇ ಖರೀದಿಸಿ 15,000 ರೂ. ಒಳಗೆ ಸಿಗುತ್ತಿರುವ ಈ ಅದ್ಭುತ ಟಿವಿ
Smart TV
Follow us
|

Updated on: Oct 12, 2023 | 2:05 PM

ಅಮೆಜಾನ್ ಇಂಡಿಯಾದಲ್ಲಿ ದೀಪಾವಳಿ ಮತ್ತು ದಸರಾಕ್ಕೆ ಮುಂಚಿತವಾಗಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 (Amazon Great Indian Festival Sale) ನಡೆಯುತ್ತಿದೆ. ಇ-ಕಾಮರ್ಸ್ ವೆಬ್‌ಸೈಟ್‌ನಲ್ಲಿ ಬೆಲೆ ಕಡಿತದೊಂದಿಗೆ ಸಾವಿರಾರು ಉತ್ಪನ್ನಗಳನ್ನು ಪಟ್ಟಿ ಮಾಡಲಾಗಿದೆ. ನಿಮ್ಮ ಪ್ರಸ್ತುತ ಸ್ಮಾರ್ಟ್ ಟಿವಿಯನ್ನು ಅಪ್‌ಗ್ರೇಡ್ ಮಾಡಲು ಅಥವಾ ಹೊಸದನ್ನು ಪಡೆಯಲು ಯೋಜಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯ. ಈ ಸೇಲ್​ನಲ್ಲಿ ಏಸರ್, ಸ್ಯಾಮ್‌ಸಂಗ್, ರೆಡ್ಮಿ, ಸೋನಿ, ಎಲ್‌ಜಿ ಮತ್ತು ಹೆಚ್ಚಿನ ಜನಪ್ರಿಯ ಬ್ರ್ಯಾಂಡ್‌ಗಳ ಸ್ಮಾರ್ಟ್ ಟಿವಿಗಳು ರಿಯಾಯಿತಿ ದರದಲ್ಲಿ ಮಾರಾಟ ಆಗುತ್ತಿದೆ. ಇದಲ್ಲದೆ, ವಿವಿಧ ಬ್ಯಾಂಕ್ ಕೊಡುಗೆಗಳು, ಕೂಪನ್ ಆಧಾರಿತ ರಿಯಾಯಿತಿಗಳು ಮತ್ತು ವಿನಿಮಯ ರಿಯಾಯಿತಿಗಳನ್ನು ಕೂಡ ಪಡೆಯಬಹುದು.

ಇಲ್ಲಿದೆ ನೋಡಿ 15,000 ರೂ. ಒಳಗೆ ಸಿಗುತ್ತಿರುವ ಅತ್ಯುತ್ತಮ ಸ್ಮಾರ್ಟ್ ಟಿವಿಗಳು:

ಏಸರ್ 32-ಇಂಚಿನ V ಸರಣಿ ಟಿವಿ

ಏಸರ್‌ನ 32-ಇಂಚಿನ V ಸರಣಿಯ HD-ರೆಡಿ ಸ್ಮಾರ್ಟ್ QLED ಟಿವಿ ಪ್ರಸ್ತುತ ರೂ. 14,999 ರಿಂದ ಕಡಿಮೆಗೆ ಸೇಲ್ ಆಗುತ್ತಿದೆ. ಇದರ ಮೂಲಬೆಲೆ 24,999 ರೂ. SBI ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು 1,500 ತ್ವರಿತ ರಿಯಾಯಿತಿ ಪಡೆಯಬಹುದು. ಗ್ರಾಹಕರು ಹೆಚ್ಚುವರಿ ವಿನಿಮಯ ಕೊಡುಗೆಯ ರಿಯಾಯಿತಿಯಿಂದ ಪ್ರಯೋಜನ ಪಡೆಯಬಹುದು. ಇದು ಗೂಗಲ್ ಟಿವಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 16GB ಸಂಗ್ರಹಣೆಯನ್ನು ನೀಡುತ್ತದೆ. ಈ ಸ್ಮಾರ್ಟ್ ಟಿವಿ ಡಾಲ್ಬಿ ಆಡಿಯೋ ಬೆಂಬಲದೊಂದಿಗೆ 30W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.

WhatsApp New Feature: ಒಂದೇ ವಾಟ್ಸ್​ಆ್ಯಪ್​ನಲ್ಲಿ 4-5 ಅಕೌಂಟ್: ಅರೇ, ಇದು ಹೇಗೆ ಸಾಧ್ಯ ಗೊತ್ತೇ?

ಇದನ್ನೂ ಓದಿ
Image
ಸದ್ದಿಲ್ಲದೆ ರಿಲೀಸ್ ಆಯಿತು ಮೋಟೋರೊಲಾ ಎಡ್ಜ್ 2023: ಭರ್ಜರಿ ಸೇಲ್ ಖಚಿತ
Image
ನಿಮ್ಮ ಮೊಬೈಲ್​ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿಲ್ಲವಾ? ಇಲ್ಲಿದೆ ಕಾರಣ
Image
ಪೊಲೀಸರು ಅರೆಸ್ಟ್ ಮಾಡುತ್ತಾರೆ: ಗೂಗಲ್​ನಲ್ಲಿ ಈ ವಿಷಯ ಹುಡುಕಲೇ ಬಾರದು
Image
ಒಪ್ಪೋದಿಂದ ಇಂದು ಬಹುನಿರೀಕ್ಷಿತ ಮಡಚುವ ಸ್ಮಾರ್ಟ್​ಫೋನ್ ಬಿಡುಗಡೆ: ಯಾವುದು?

ರೆಡ್ಮಿ ಸ್ಮಾರ್ಟ್ ಟಿವಿ 32 ಇಂಚು

ಅಮೆಜಾನ್ ಪ್ರಸ್ತುತ ರೆಡ್ಮಿಯ F-ಸರಣಿ 32-ಇಂಚಿನ ಸ್ಮಾರ್ಟ್ LED ಫೈರ್ ಟಿವಿಯನ್ನು 9,499 ರೂ. ಗೆ ಪಟ್ಟಿ ಮಾಡಿದೆ. ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವ ಗ್ರಾಹಕರು ಇದನ್ನು 1,500 ರೂ. ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ಖರೀದಿಸಬಹುದು. ನಿಮ್ಮ ಹಳೆಯ ಟಿವಿಯನ್ನು ಹೊಸ ಮಾದರಿಯೊಂದಿಗೆ ಬದಲಾಯಿಸಲು ನೀವು ಬಯಸಿದರೆ ಅಮೆಜಾನ್ ವಿನಿಮಯ ರಿಯಾಯಿತಿ ಆಯ್ಕೆಯನ್ನು ಸಹ ಹೊಂದಿದೆ. ವಿನಿಮಯ ಕೊಡುಗೆ ರೂ. 4,360 ವರೆಗೆ ಇದೆ. ರೆಡ್ಮಿ ಸ್ಮಾರ್ಟ್ ಟಿವಿ 32 60Hz ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು ಶವೋಮಿಯ ವಿವಿಡ್ ಪಿಕ್ಚರ್ ಎಂಜಿನ್ ಅನ್ನು ಒಳಗೊಂಡಿದೆ ಮತ್ತು Dolby Audio ಮತ್ತು DTS ವರ್ಚುವಲ್: X ಬೆಂಬಲದೊಂದಿಗೆ 20W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.

LG 32-ಇಂಚಿನ HD ರೆಡಿ ಟಿವಿ

ಅಮೆಜಾನ್ LG ಯ 32-ಇಂಚಿನ HD-ರೆಡಿ ಸ್ಮಾರ್ಟ್ LED ಟಿವಿಯನ್ನು 13,490 ರೂ. ಗೆ ಸೇಲ್ ಮಾಡುತ್ತಿದೆ. SBI ಕಾರ್ಡ್‌ಗಳ ಮೂಲಕ ಮಾಡಿದ ಖರೀದಿಗಳಿಗೆ ರಿಯಾಯಿತಿಗಳು ಸಹ ಇವೆ. ಅಲ್ಲದೆ, ಅಮೆಜಾನ್ ಪೇ, ICICI ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ಖರೀದಿಗಳಿಗೆ 300 ಕ್ಯಾಶ್‌ಬ್ಯಾಕ್ ಮತ್ತು 2,200 ವೆಲ್​ಕಮ್ ಗಿಫ್ಟ್ ಇದೆ. ಈ ಸ್ಮಾರ್ಟ್ ಟಿವಿ WebOS ನಲ್ಲಿ ರನ್ ಆಗುತ್ತದೆ ಮತ್ತು 60Hz ರಿಫ್ರೆಶ್ ದರವನ್ನು ನೀಡುತ್ತದೆ. ಇದು 8GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು 16W ಔಟ್‌ಪುಟ್‌ನೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಸ್ಯಾಮ್​ಸಂಗ್ 32-ಇಂಚಿನ ವಂಡರ್‌ಟೈನ್‌ಮೆಂಟ್ ಸರಣಿ ಟಿವಿ

ಸ್ಯಾಮ್‌ಸಂಗ್‌ನ 32-ಇಂಚಿನ HD-ರೆಡಿ ವಂಡರ್‌ಟೈನ್‌ಮೆಂಟ್ ಸರಣಿಯ LED ಸ್ಮಾರ್ಟ್ ಟಿವಿ ಪ್ರಸ್ತುತ 11,990 ರೂ. ಗೆ ಲಭ್ಯವಿದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ 4,360 ರೂ. ಗೆ ಪಡೆಯಬಹುದು. SBI ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದರೆ 1,500 ರೂ. ವರೆಗೆ ಡಿಸಕೌಂಟ್ ಇದೆ. ಈ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್ ಡಿಸ್ಪ್ಲೇ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ತಂತ್ರಜ್ಞಾನ ಮತ್ತು 20W ಔಟ್‌ಪುಟ್‌ನೊಂದಿಗೆ ಸ್ಪೀಕರ್‌ಗಳನ್ನು ಒಳಗೊಂಡಿದೆ.

ಏಸರ್ 32-ಇಂಚಿನ ಅಡ್ವಾನ್ಸ್​ಡ್ I ಸರಣಿ HD ಟಿವಿ

ಏಸರ್​ನ 32-ಇಂಚಿನ ಅಡ್ವಾನ್ಸ್​ಡ್ I ಸರಣಿ HD ರೆಡಿ ಸ್ಮಾರ್ಟ್ LED ಟಿವಿಯನ್ನು ರೂ. 10,499 ಕ್ಕೆ ಖರೀದಿಸಬಹುದು. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಶಾಪಿಂಗ್ ಮಾಡುವ ಗ್ರಾಹಕರು ಅದನ್ನು 1,500 ರೂ. ಗಳ ಹೆಚ್ಚುವರಿ ರಿಯಾಯಿತಿಯೊಂದಿಗೆ ಪಡೆಯಬಹುದು. ನಿಮ್ಮ ಹಳೆಯ ಟಿವಿಯನ್ನು ಹೊಸ ಮಾದರಿಯೊಂದಿಗೆ ಬದಲಾಯಿಸಲು ನೀವು ಬಯಸಿದರೆ ಅಮೆಜಾನ್ ವಿನಿಮಯ ರಿಯಾಯಿತಿ ಆಯ್ಕೆಯನ್ನು ಸಹ ಹೊಂದಿದೆ. ಈ ಏಸರ್ TV 60Hz ರಿಫ್ರೆಶ್ ರೇಟ್ ಡಿಸ್ಪ್ಲೇಯನ್ನು ಹೊಂದಿದೆ. ಇದು 16GB ಸಂಗ್ರಹಣೆಯನ್ನು ಒಳಗೊಂಡಿದೆ ಮತ್ತು Dolby Audio ತಂತ್ರಜ್ಞಾನದೊಂದಿಗೆ 30W ಸ್ಪೀಕರ್‌ಗಳನ್ನು ಪ್ಯಾಕ್ ಮಾಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಮಂಗಳೂರು, ಉಡುಪಿಯಲ್ಲಿ ಮಳೆ, ಕೆಲ ಪ್ರವಾಸಿ ತಾಣಗಳಿಗೆ ತೆರಳದಂತೆ ನಿರ್ಬಂಧ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
‘ಈ ಸ್ಥಿತಿ ಬಂದಿದ್ದಕ್ಕೆ ​ ಜೈಲಿನಲ್ಲಿ ದರ್ಶನ್ ಸಾಕಷ್ಟು ನೋವಿನಲ್ಲಿದ್ದಾರೆ’
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ