ಸರ್ಕಾರ ಕಳುಹಿಸುವ ಎಮರ್ಜೆನ್ಸಿ ಅಲರ್ಟ್ ಟೆಸ್ಟ್ ಮೆಸೇಜ್ ನಿಮ್ಮ ಮೊಬೈಲ್​ಗೆ ಬಂದಿಲ್ಲವಾ? ಕಾರಣಗಳೇನಿರಬಹುದು?

Emergency Alert Test Message: ಎಮರ್ಜೆನ್ಸಿ ಅಲರ್ಟ್ ಸಿಸ್ಟಂನ ಭಾಗವಾಗಿ ಸೆಲ್ ಬ್ರಾಡ್​ಕ್ಯಾಸ್ಟ್ ಸಿಸ್ಟಂ ಅನ್ನು ರೂಪಿಸಲಾಗಿದೆ. ಈ ಸಿಸ್ಟಂ ಅನ್ನು ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ಭಾಗವಾಗಿ ಇವತ್ತು ಎಲ್ಲರ ಮೊಬೈಲ್ ನಂಬರ್​ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿರಬಹುದು. ಕೆಲವರ ಮೊಬೈಲ್​ಗೆ ಈ ಅಲರ್ಟ್ ಬಂದಿಲ್ಲದೇ ಇರಬಹುದು. ಅದಕ್ಕೆ ಸಂಭಾವ್ಯ ಕಾರಣಗಳೇನು ಎಂಬ ವಿವರ ಇಲ್ಲಿದೆ.

ಸರ್ಕಾರ ಕಳುಹಿಸುವ ಎಮರ್ಜೆನ್ಸಿ ಅಲರ್ಟ್ ಟೆಸ್ಟ್ ಮೆಸೇಜ್ ನಿಮ್ಮ ಮೊಬೈಲ್​ಗೆ ಬಂದಿಲ್ಲವಾ? ಕಾರಣಗಳೇನಿರಬಹುದು?
ಅಲರ್ಟ್ ಮೆಸೇಜ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Oct 12, 2023 | 1:55 PM

ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಎಮರ್ಜೆನ್ಸಿ ಅಲರ್ಟ್ ಸಿಸ್ಟಂನ (Emergency Alert System) ಭಾಗವಾಗಿ ಸೆಲ್ ಬ್ರಾಡ್​ಕ್ಯಾಸ್ಟ್ ಸಿಸ್ಟಂ (Cell Broadcast System) ಅನ್ನು ರೂಪಿಸಲಾಗಿದೆ. ಈ ಸಿಸ್ಟಂ ಅನ್ನು ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ಭಾಗವಾಗಿ ಇವತ್ತು ಎಲ್ಲರ ಮೊಬೈಲ್ ನಂಬರ್​ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿರಬಹುದು. ಇದು ಕೇವಲ ಸ್ಯಾಂಪಲ್ ಮೆಸೇಜ್ ಮಾತ್ರವೇ ಆಗಿರುತ್ತದೆ. ಯಾರು ಗಾಬರಿ ಆಗಬಾರದೆಂದು ಮೊನ್ನೆಯೇ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿತ್ತು.

ಹಿಂದೆ ಇದರ ಪರೀಕ್ಷಾರ್ಥ ಪ್ರಯೋಗಗಳು ನಡೆದಿದ್ದವು. ಜುಲೈ 20, ಆಗಸ್ಟ್ 17 ಮತ್ತು ಸೆಪ್ಟೆಂಬರ್ 21ರಂದು ದೇಶದ ವಿವಿಧೆಡೆ ಟೆಸ್ಟ್ ಮೆಸೇಜ್​​ಗಳು ಬಂದಿದ್ದವು. ಆಗ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅಲರ್ಟ್ ಮೆಸೇಜ್ ನೀಡಲಾಗಿತ್ತು. ಈಗ ಬಹುತೇಕ ಎಲ್ಲರಿಗೂ ಅಲರ್ಟ್ ಮೆಸೇಜ್ ಬಂದಿರುತ್ತದೆ. ಕೆಲ ನಿಮಿಷಗಳ ಅಂತರದಲ್ಲಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮೆಸೇಜ್ ಕಳುಹಿಸಲಾಗಿದೆ. ಕನ್ನಡದಲ್ಲಿ ಮೆಸೇಜ್ ಈ ಕೆಳಕಂಡಂತಿರುತ್ತದೆ:

Emergency alert: Extreme

‘ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.’

Emergency Alert Test Message, Have You Not Received, Here Are Possible Reasons

ಅಲರ್ಟ್ ಮೆಸೇಜ್

ಇದನ್ನೂ ಓದಿ: ನಿಮ್ಮ ಮೊಬೈಲ್​ಗೆ ಎಮರ್ಜೆನ್ಸಿ ಅಲರ್ಟ್ ಬಂದಿದ್ದರೆ ಗಾಬರಿ ಬೇಡ; ಇದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ

ನಿಮ್ಮ ಮೊಬೈಲ್​ಗೆ ಟೆಸ್ಟ್ ಮೆಸೇಜ್ ಬಂದಿಲ್ಲವಾ? ಇವಿರಬಹುದು ಕಾರಣಗಳು

ತಮ್ಮ ಮೊಬೈಲ್​ಗೆ ಅಲರ್ಟ್ ಮೆಸೇಜ್ ಬಂದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಸಂಭಾವ್ಯ ಕಾರಣಗಳು ಇಲ್ಲಿವೆ:

  • ಎಲ್ಲರಿಗೂ ಏಕಕಾಲದಲ್ಲಿ ಟೆಸ್ಟ್ ಮೆಸೇಜ್ ಬಂದಿರುವುದಿಲ್ಲ. ಏರ್​ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ. ಇಂದು (ಅ.12) ಏರ್ಟೆಲ್ ಗ್ರಾಹಕರಿಗೆ ಮೊದಲು ಅಲರ್ಟ್ ಬಂದಿದೆ. ಕೆಲ ಹೊತ್ತಿನ ಬಳಿಕ ಜಿಯೋ ಬಳಕೆದಾರರಿಗೆ ಅಲರ್ಟ್ ಬಂದಿದೆ. ಬಳಿಕ ವೊಡಾಫೋನ್ ಐಡಿಯಾ ಸಿಮ್ ಹೊಂದಿರುವವರಿಗೆ ಟೆಸ್ಟಿಂಗ್ ಅಲರ್ಟ್ ಸಂದೇಶ ಸಿಕ್ಕಿದೆ.
  • ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ. ಈ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ. ಈ 30 ನಿಮಿಷದ ಅವಧಿಯೊಳಗೆ ನಿಮ್ಮ ಮೊಬೈಲ್ ಸ್ವಿಚ್ ಆನ್ ಆದಾಗ ಮೆಸೇಜ್ ಬರುತ್ತದೆ. ಅವಧಿ ಮೀರಿದ ಬಳಿಕ ಸ್ವಿಚ್ ಆನ್ ಮಾಡಿದರೂ ಮೆಸೇಜ್ ಬರುವುದಿಲ್ಲ. ಏರ್​ಪ್ಲೇನ್ ಮೋಡ್​ನಲ್ಲಿದ್ದರೂ ಅಲರ್ಟ್ ಸಿಗುವುದಿಲ್ಲ.
  • ಫೋನ್ ಸೆಟಿಂಗ್​ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿರಬಹುದು.
  • ಹಳೆಯ ಫೋನ್ ಆಗಿದ್ದರೆ ಅಲರ್ಟ್ ಬರದೇ ಹೋಗಬಹುದು. ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ನಿಮ್ಮ ಫೋನ್ ಹೊಂದಿಕೆಯಾಗಿರುವುದಿಲ್ಲ. ಇತ್ತೀಚಿನ ಫೋನ್​ನಲ್ಲಿ ಈ ಸಮಸ್ಯೆ ಇರದು.
  • ಪ್ರದೇಶವಾರು ಬೇರೆ ಬೇರೆ ಸಮಯದಲ್ಲಿ ಅಲರ್ಟ್ ಬಂದಿರಬಹುದು.

ಇದನ್ನೂ ಓದಿ: ಐದು ವರ್ಷದೊಳಗೆ ಪಿಎಫ್ ಹಣ ಹಿಂಪಡೆದರೆ ತೆರಿಗೆ ಕಡಿತ; ಈ ಇಪಿಎಫ್ ನಿಯಮಗಳು ತಿಳಿದಿರಲಿ

ಸೆಟ್ಟಿಂಗ್​ನಲ್ಲಿ ಅಲರ್ಟ್ ಸಿಸ್ಟಂ ಅನ್ ಮಾಡುವುದು ಹೇಗೆ?

  • ನಿಮ್ಮ ಆಂಡ್ರಾಯ್ಡ್ ಮೊಬೈಲ್​ನ ಸೆಟಿಂಗ್ಸ್​ಗೆ ಹೋಗಿ
  • ಸರ್ಚ್ ಬಾರ್​ನಲ್ಲಿ ವೈರ್ಲೆಸ್ ಎಮರ್ಜೆನ್ಸಿ ನೋಟಿಫಿಕೇಶನ್ ಎಂದು ಸರ್ಚ್ ಮಾಡಿ.
  • ಅಲ್ಲಿ ಅಲರ್ಟ್ಸ್ ಆಫ್ ಆಗಿದ್ದರೆ ಅದನ್ನು ಆನ್ ಮಾಡಿ

ಇನ್ನಷ್ಟು ತಂತ್ರಜ್ಞಾನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:05 pm, Thu, 12 October 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್