- Kannada News Photo gallery Oppo set to launch its new Foldable Phone Oppo Find N3 Flip in India Today
ಒಪ್ಪೋದಿಂದ ಇಂದು ಬಹುನಿರೀಕ್ಷಿತ ಮಡಚುವ ಸ್ಮಾರ್ಟ್ಫೋನ್ ಬಿಡುಗಡೆ: ಯಾವುದು ನೋಡಿ
Oppo Find N3 Flip India Launchಒಪ್ಪೋ ಫೈಂಡ್ N3 ಫ್ಲಿಪ್ ಭಾರತದಲ್ಲಿ ಕಂಪನಿಯ ಎರಡನೇ ಫೋಲ್ಡಬಲ್ ಸ್ಮಾರ್ಟ್ಫೋನ್ ಆಗಿದೆ. ಹಿಂದಿನದು ಫೈಂಡ್ N2 ಫ್ಲಿಪ್ ಆಗಿದೆ. ಇದು ಈ ವರ್ಷದ ಆರಂಭದಲ್ಲಿ ಅನಾವರಣಗೊಂಡಿತ್ತು. ಒಪ್ಪೋ ತನ್ನ ಹೊಸ ಫೋನಿನ ಕೆಲವು ಪ್ರಮುಖ ವಿಶೇತೆಗಳನ್ನು ಸಹ ದೃಢಪಡಿಸಿದೆ. ಒಪ್ಪೋ ಫೈಂಡ್ N3 ಫ್ಲಿಪ್ ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದಂತೆಯೇ ಇದೆ.:
Updated on: Oct 12, 2023 | 6:55 AM

ಒಪ್ಪೋ ಇಂಡಿಯಾ ಭಾರತದಲ್ಲಿ ಇಂದು (ಅಕ್ಟೋಬರ್ 12) ತನ್ನ ಹೊಸ ಮಡಚುವ ಸ್ಮಾರ್ಟ್ಫೋನ್ ಒಪ್ಪೋ ಫೈಂಡ್ N3 ಫ್ಲಿಪ್ (Oppo Find N3 Flip) ಅನ್ನು ಬಿಡುಗಡೆ ಮಾಡಲಿದೆ. ಈ ಈವೆಂಟ್ ಅನ್ನು ಸಂಜೆ 7 ಗಂಟೆಯಿಂದ ಒಪ್ಪೋ ಯೂಟ್ಯೂಬ್ ಚಾನೆಲ್ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

ಒಪ್ಪೋ ಫೈಂಡ್ N3 ಫ್ಲಿಪ್ ಭಾರತದಲ್ಲಿ ಕಂಪನಿಯ ಎರಡನೇ ಫೋಲ್ಡಬಲ್ ಸ್ಮಾರ್ಟ್ಫೋನ್ ಆಗಿದೆ. ಹಿಂದಿನದು ಫೈಂಡ್ N2 ಫ್ಲಿಪ್ ಆಗಿದೆ. ಇದು ಈ ವರ್ಷದ ಆರಂಭದಲ್ಲಿ ಅನಾವರಣಗೊಂಡಿತ್ತು. ಒಪ್ಪೋ ತನ್ನ ಹೊಸ ಫೋನಿನ ಕೆಲವು ಪ್ರಮುಖ ವಿಶೇತೆಗಳನ್ನು ಸಹ ದೃಢಪಡಿಸಿದೆ.

ಒಪ್ಪೋ ಫೈಂಡ್ N3 ಫ್ಲಿಪ್ ಈ ವರ್ಷದ ಆರಂಭದಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿದಂತೆಯೇ ಇದೆ. ಆದರೆ, ಇದರ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಒಪ್ಪೋ ಫೈಂಡ್ N3 ಫ್ಲಿಪ್ 90,000 ರೂ. ಗೆ ದೇಶದಲ್ಲಿ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ.

ಒಪ್ಪೋ ಫೈಂಡ್ N3 ಫ್ಲಿಪ್ ಮೀಡಿಯಾಟೆಕ್ ಡೈಮೆನ್ಸಿಟಿ 9200 ಪ್ರೊಸೆಸರ್ ಮೂಲಕ ರನ್ ಆಗುತ್ತದೆ. ಇದು 2 ನೇ ತಲೆಮಾರಿನ TSMC 4nm ಪ್ರಕ್ರಿಯೆಯನ್ನು ಆಧರಿಸಿದೆ. 3GHzನ ARM ಕಾರ್ಟೆಕ್ಸ್ X3 ಕೋರ್, ಮೂರು ಕಾರ್ಟೆಕ್ಸ್-A715 ಕೋರ್ ಮತ್ತು ನಾಲ್ಕು ಕಾರ್ಟೆಕ್ಸ್-A510 ಕೋರ್‌ಗಳನ್ನು ಒಳಗೊಂಡಿದೆ.

ವಿಶೇಷವಾಗಿ ಪ್ರೊಸೆಸರ್ನ AI ಕಾರ್ಯಗಳಿಗೆ ಸಹಾಯ ಮಾಡಲು ಮೀಡಿಯಾಟೆಕ್ APU 690 ಮತ್ತು ಹಾರ್ಡ್‌ವೇರ್-ಆಧಾರಿತ ರೇ ಟ್ರೇಸಿಂಗ್ ಬೆಂಬಲದೊಂದಿಗೆ ARM ನ Immortalis-G715 GPU ಅನ್ನು ಒಳಗೊಂಡಿದೆ. ಫೈಂಡ್ N3 ಫ್ಲಿಪ್ 12GB LPDDR5X RAM ಅನ್ನು ಹೊಂದಿರುತ್ತದೆ, ಇದು ಹಿಂದಿನ ತಲೆಮಾರಿನ LPDDR5 ಗಿಂತ 33 ಪ್ರತಿಶತ ವೇಗವಾಗಿದೆ ಎಂದು ಹೇಳಲಾಗುತ್ತಿದೆ.

ಈ ಫೋನ್‌ನ ಮುಖ್ಯ ಕ್ಯಾಮೆರಾವು ಸೋನಿ IMX709 ಸಂವೇದಕವನ್ನು ಮತ್ತು AI ಸ್ಮಾರ್ಟ್‌ಗಳನ್ನು ಒಳಗೊಂಡಿದೆ. 4,300mAh ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು 44W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಕೇವಲ 56 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಆಗುತ್ತದೆ.

ಫೈಂಡ್ N3 ಫ್ಲಿಪ್ ಪೂರ್ಣ-HD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ದರದೊಂದಿಗೆ 6.8-ಇಂಚಿನ ಫೋಲ್ಡಿಂಗ್ ಡಿಸ್ ಪ್ಲೇಯನ್ನು ಹೊಂದಿದೆ. ಹೊರಗಿನ ಡಿಸ್ ಪ್ಲೇಯು 3.26 ಇಂಚುಗಳಿಂದ ಕೂಡಿರುತ್ತದೆ. ಮುಖ್ಯ ಕ್ಯಾಮೆರಾದ ಜೊತೆಗೆ, 48-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಮತ್ತು 32-ಮೆಗಾಪಿಕ್ಸೆಲ್ ಪೋಟ್ರೇಟ್ ಕ್ಯಾಮೆರಾವನ್ನು ಸಹ ಹೊಂದಿದೆ. ಇದು 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ ಎಂದು ಹೇಳಲಾಗಿದೆ.




