IND vs AFG, ICC World Cup: ಪಂದ್ಯದ ಬಳಿಕ ತನ್ನ ಶತಕದ ಬಗ್ಗೆ ಏನೂ ಹೇಳದ ರೋಹಿತ್ ಶರ್ಮಾ: ಆಡಿದ ಮಾತುಗಳೇನು ನೋಡಿ

Rohit Sharma Post Match Presentation, India vs Afghanistan: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ತನ್ನ ಶತಕದ ಬಗ್ಗೆ ಏನನ್ನೂ ಹೇಳಲಿಲ್ಲ. ಬದಲಾಗಿ ಏನೆಲ್ಲ ಮಾತನಾಡಿದರು ಎಂಬುದನ್ನು ನೋಡಿ.

Vinay Bhat
|

Updated on: Oct 12, 2023 | 7:32 AM

ಐಸಿಸಿ ಏಕದಿನ ವಿಶ್ವಕಪ್ 2023 ರಲ್ಲಿ ಬುಧವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ರೋಹಿತ್ ಶರ್ಮಾ ಅವರ ಸ್ಫೋಟಕ ಶತಕ, ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಕಂಡಿತು.

1 / 7
ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ರೋಹಿತ್ ಶರ್ಮಾ ತನ್ನ ಶತಕದ ಬಗ್ಗೆ ಏನನ್ನೂ ಹೇಳಲಿಲ್ಲ. ಬದಲಾಗಿ ಇದು ನಮಗೆ ಸಿಕ್ಕ ಉತ್ತಮ ಗೆಲುವಾಗಿದೆ. ಪಂದ್ಯಾವಳಿಯ ಆರಂಭದಲ್ಲಿ ಈರೀತಿಯ ಗೆಲುವು ಬಹಳ ಮುಖ್ಯವಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.

2 / 7
ಎದುರಾಳಿ ಕಠಿಣ ಬೌಲಿಂಗ್ ಮಾಡಿದರೆ ನಾವು ಒತ್ತಡಕ್ಕೆ ಸಿಲುಕುತ್ತೇವೆ. ಈ ಸಂದರ್ಭ ಅದನ್ನು ಗಮನಿಸಿ ಫೀಲ್ಡ್​ನಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಪಂದ್ಯಾವಳಿಯ ಮುಂಚೂಣಿಯಲ್ಲಿ ನಾವು ಅಂತಹ ಆಟಗಳನ್ನು ಆಡಿದ್ದೇವೆ ಎಂದು ರೋಹಿತ್ ಶರ್ಮಾ ಪಂದ್ಯದ ಬಳಿಕ ತಿಳಿಸಿದ್ದಾರೆ.

3 / 7
ನಮ್ಮ ತಂಡದಲ್ಲಿ ವಿಭಿನ್ನ ಕೌಶಲ್ಯ ಹೊಂದಿರುವ ಆಟಗಾರರಿದ್ದಾರೆ. ಅವರು ತಂಡಕ್ಕೆ ತಮ್ಮ ವಿಭಿನ್ನ ಆಟದ ಮೂಲಕ ಕೊಡುಗೆ ನೀಡುತ್ತಾರೆ. ನೀವು ಅಂತಹ ಆಟಗಾರರನ್ನು ಹೊಂದಿರುವಾಗ ತಂಡ ಉತ್ತಮ ಸ್ಥಾನಗಳಲ್ಲಿ ಇರುತ್ತದೆ. ಬ್ಯಾಟ್‌ನೊಂದಿಗೆ ನಿರ್ಭೀತ ಕ್ರಿಕೆಟ್ ಆಡುವ ಮತ್ತು ಕೊನೆಯ ಪಂದ್ಯದಂತೆ ತಂಡಕ್ಕೆ ಆಸರೆಯಾಗುವ ಹುಡುಗರನ್ನು ನಾವು ಪಡೆದುಕೊಂಡಿದ್ದೇವೆ ಎಂದು ರೋಹಿತ್ ಹೇಳಿದ್ದಾರೆ.

4 / 7
ಇದೇವೇಳೆ ಪಾಕಿಸ್ತಾನ ವಿರುದ್ಧದ ಪಂದ್ಯದ ಬಗ್ಗೆ ಕೇಳಿದಾಗ, ನಮಗೆ ಆ ಪಂದ್ಯ ನಿರ್ಣಾಯಕವಾಗಿದೆ. ಆದರೆ, ನಾವು ಹೊರಗಿನ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಮ್ಮಿಂದ ಏನು ನಿಯಂತ್ರಿಸಬಹುದು ಅದನ್ನು ಮಾತ್ರ ನೋಡುತ್ತೇವೆ. ನಾವು ಉತ್ತಮವಾಗಿ ಹೇಗೆ ಆಡಬೇಕು ಎಂದು ಮಾತ್ರ ಯೋಚಿಸುತ್ತೇವೆ - ರೋಹಿತ್ ಶರ್ಮಾ.

5 / 7
ಪಿಚ್ ಹೇಗೆ ವರ್ತಿಸುತ್ತದೆ, ನೀವು ಯಾವ ಆಟಗಾರರನ್ನು ಆಡಿಸುತ್ತೀರಿ ಮತ್ತು ಪಂದ್ಯವನ್ನು ನೀವು ಹೇಗೆ ಕಂಟ್ರೋಲ್​ನಲ್ಲಿ ಇಟ್ಟುಕೊಳ್ಳುತ್ತೀರಿ ಎಂಬುದು ಮುಖ್ಯ. ಹೊರಗೆ ಏನಾಗುತ್ತದೆಯೋ ಅದರ ಬಗ್ಗೆ ನಾವು ಚಿಂತಿಸುವುದಿಲ್ಲ. ಇದು ಕೇವಲ ಆಟಗಾರರಾಗಿ ನಾವು ಏನು ಮಾಡಬಹುದು ಮತ್ತು ನಾವು ಹೇಗೆ ಪ್ರದರ್ಶನ ನೀಡಬಹುದು ಎಂಬುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ರೋಹಿತ್ ಹೇಳಿದ್ದಾರೆ.

6 / 7
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ 50 ಓವರ್​ಗಳಲ್ಲಿ 272 ರನ್ ಗಳಿಸಿತು. ಟಾರ್ಗೆಟ್ ಬೆನ್ನಟ್ಟಿದ ಟೀಮ್ ಇಂಡಿಯಾ 35 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಸಿಡಿಸಿ ಜಯ ಸಾಧಿಸಿತು. ರೋಹಿತ್ 84 ಎಸೆತಗಳಲ್ಲಿ 131 ರನ್ ಚಚ್ಚಿದರೆ, ಕೊಹ್ಲಿ 56 ಎಸೆತಗಳಲ್ಲಿ ಅಜೇಯ 55 ರನ್ ಬಾರಿಸಿದರು.

7 / 7
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ