Rohit Sharma: ಭರ್ಜರಿ ಸೆಂಚುರಿಯೊಂದಿಗೆ 10 ದಾಖಲೆ ಬರೆದ ಹಿಟ್​ಮ್ಯಾನ್

Rohit Sharma's Records list: ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರಕ್ಕೆ ಅಫ್ಘಾನ್ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

TV9 Web
| Updated By: ಝಾಹಿರ್ ಯೂಸುಫ್

Updated on: Oct 11, 2023 | 9:20 PM

ಏಕದಿನ ವಿಶ್ವಕಪ್​ನ 9ನೇ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಹಿಟ್​ಮ್ಯಾನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

1 / 12
ರೋಹಿತ್ ಶರ್ಮಾ ಅವರ ಈ ಸಿಡಿಲಬ್ಬರಕ್ಕೆ ಅಫ್ಘಾನ್ ಬೌಲರ್​ಗಳು ಲಯ ತಪ್ಪಿದರು. ಇದರ ಸಂಪೂರ್ಣ ಲಾಭ ಪಡೆದ ರೋಹಿತ್ ಶರ್ಮಾ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

2 / 12
1- ವೇಗದ ಶತಕ: ಏಕದಿನ ವಿಶ್ವಕಪ್​ನಲ್ಲಿ ಅತೀ ವೇಗದ ಶತಕ ಸಿಡಿಸಿದ ಭಾರತೀಯ ಎಂಬ ಹೆಗ್ಗಳಿಕೆಗೆ ರೋಹಿತ್ ಶರ್ಮಾ ಪಾತ್ರರಾಗಿದ್ದಾರೆ. ಹಿಟ್​ಮ್ಯಾನ್ ಕೇವಲ 63 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ 72 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದ ಕಪಿಲ್ ದೇವ್ ಹೆಸರಿನಲ್ಲಿತ್ತು.

3 / 12
2- ವಿಶ್ವಕಪ್ ಶತಕವೀರ: ಏಕದಿನ ವಿಶ್ವಕಪ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಇದಕ್ಕೂ ಮುನ್ನ ಈ ವಿಶ್ವ ದಾಖಲೆ 6 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಇದೀಗ 7ನೇ ಶತಕದೊಂದಿಗೆ ಹಿಟ್​ಮ್ಯಾನ್ ಹೊಸ ಇತಿಹಾಸ ಬರೆದಿದ್ದಾರೆ.

4 / 12
3- ಆರಂಭಿಕನ ದಾಖಲೆ: ಏಕದಿನ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಅತ್ಯಧಿಕ ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟರ್ ಎಂಬ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಈ ಪಟ್ಟಿಯಲ್ಲಿ ಆರಂಭಿಕನಾಗಿ 45 ಶತಕ ಬಾರಿಸಿರುವ ಸಚಿನ್ ಅಗ್ರಸ್ಥಾನದಲ್ಲಿದ್ದರೆ, 29 ಶತಕ ಸಿಡಿಸಿರುವ ಹಿಟ್​ಮ್ಯಾನ್ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

5 / 12
4- ಭಾರತೀಯ ಶತಕವೀರ: ಏಕದಿನ ಕ್ರಿಕೆಟ್​ನಲ್ಲಿ ವೇಗದ ಶತಕ ಸಿಡಿಸಿದ ಐದನೇ ಭಾರತೀಯ ಎಂಬ ಹಿರಿಮೆಗೂ ಹಿಟ್​ಮ್ಯಾನ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 52 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇದೀಗ 63 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್ ಶರ್ಮಾ 5ನೇ ಸ್ಥಾನ ಅಲಂಕರಿಸಿದ್ದಾರೆ.

6 / 12
5- ಶತಕದ ಸರದಾರ: ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಶತಕ ಸಿಡಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಇದೀಗ ರೋಹಿತ್ ಶರ್ಮಾ 3ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ (49) ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ (47) ದ್ವಿತೀಯ ಸ್ಥಾನದಲ್ಲಿದ್ದಾರೆ. ಇದೀಗ 31 ಶತಕಗಳೊಂದಿಗೆ ಹಿಟ್​ಮ್ಯಾನ್ ಮೂರನೇ ಸ್ಥಾನಕ್ಕೇರಿದ್ದಾರೆ.

7 / 12
6- ಕಡಿಮೆ ಇನಿಂಗ್ಸ್​ನಲ್ಲಿ ಅತ್ಯಧಿಕ ಶತಕ: ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಕಡಿಮೆ ಇನಿಂಗ್ಸ್​ಗಳಲ್ಲಿ ಅತ್ಯಧಿಕ ಶತಕ ಸಿಡಿಸಿದ ವಿಶೇಷ ದಾಖಲೆ ರೋಹಿತ್ ಶರ್ಮಾ ಪಾಲಾಗಿದೆ. ಕೇವಲ 19 ಇನಿಂಗ್ಸ್​ಗಳ ಮೂಲಕ ಹಿಟ್​ಮ್ಯಾನ್ 7 ವರ್ಲ್ಡ್​ಕಪ್ ಶತಕಗಳನ್ನು ಸಿಡಿಸಿದ್ದಾರೆ.

8 / 12
7- 50 ಸಿಕ್ಸಸ್ ದಾಖಲೆ: ಏಕದಿನ ಕ್ರಿಕೆಟ್​ನಲ್ಲಿ ನಾಲ್ಕು ವರ್ಷಗಳಲ್ಲೂ 50 ಕ್ಕಿಂತ ಹೆಚ್ಚು ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಕೂಡ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ಹಿಟ್​ಮ್ಯಾನ್ 2017, 2018, 2019 ಮತ್ತು 2023 ರಲ್ಲಿ ಈ ಸಾಧನೆ ಮಾಡಿದ್ದಾರೆ.

9 / 12
8- 1000 ರನ್: ಏಕದಿನ ವಿಶ್ವಕಪ್​ನಲ್ಲಿ ಅತೀ ವೇಗವಾಗಿ ಸಾವಿರ ರನ್ ಪೂರೈಸಿದ ವಿಶೇಷ ದಾಖಲೆಯನ್ನೂ ಕೂಡ ರೋಹಿತ್ ಶರ್ಮಾ ನಿರ್ಮಿಸಿದ್ದಾರೆ. ಹಿಟ್​ಮ್ಯಾನ್ ಕೇವಲ 19 ಇನಿಂಗ್ಸ್​ಗಳ ಮೂಲಕ ಈ ಮೈಲುಗಲ್ಲನ್ನು ದಾಟಿದ್ದಾರೆ.

10 / 12
9- ಪವರ್​ ಹಿಟ್ಟರ್: ಏಕದಿನ ಕ್ರಿಕೆಟ್​ನ ಪವರ್​ಪ್ಲೇನಲ್ಲಿ ಅತ್ಯಧಿಕ ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ರೋಹಿತ್ ಶರ್ಮಾ ಹೆಸರಿಗೆ ಸೇರ್ಪಡೆಯಾಗಿದೆ.

11 / 12
10- ಸಿಕ್ಸರ್ ಕಿಂಗ್: ಈ ಪಂದ್ಯದಲ್ಲಿ 5 ಭರ್ಜರಿ ಸಿಕ್ಸ್​ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ವಿಶ್ವ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (553 ಸಿಕ್ಸ್) ಹೆಸರಿನಲ್ಲಿತ್ತು. ಇದೀಗ 556 ಸಿಕ್ಸ್​ಗಳನ್ನು ಬಾರಿಸುವ ಮೂಲಕ ಹಿಟ್​ಮ್ಯಾನ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

12 / 12
Follow us
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ