ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಾರಿದ ಪಾಕ್; ಅಫ್ಘಾನ್ ಮಣಿಸಿದ ಭಾರತಕ್ಕೆ ಭರ್ಜರಿ ಮುಂಬಡ್ತಿ!
ICC World Cup 2023 Updated Points Table: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ತನ್ನ ಎರಡನೇ ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್ಗಳಿಂದ ಮಣಿಸಿರುವ ಭಾರತ ಈ ಮಹಾ ಈವೆಂಟ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಅಫ್ಘಾನ್ ತಂಡವನ್ನು ಇನ್ನು 15 ಓವರ್ಗಳು ಬಾಕಿ ಇರುವಂತೆಯೇ ಮಣಿಸಿದ ಭಾರತ ಅಂಕಪಟ್ಟಿಯಲ್ಲೂ ಜಿಗಿತ ಕಂಡಿದೆ.