ಭಾರತದಲ್ಲಿ ನಥಿಂಗ್ ಫೋನ್ 2 ದರ ಭರ್ಜರಿ ಇಳಿಕೆ: ಇನ್ಮುಂದೆ ಬೆಲೆ ಹೆಚ್ಚಾಗುವುದಿಲ್ಲ
Nothing Phone (2) Price discounted: ಈ ವರ್ಷದ ಜುಲೈನಲ್ಲಿ ಭಾರತದಲ್ಲಿ ಅನಾವರಣಗೊಂಡ ನಥಿಂಗ್ ಕಂಪನಿಯ ಎರಡನೇ ಸ್ಮಾರ್ಟ್ಫೋನ್ ನಥಿಂಗ್ ಫೋನ್ (2) ಬೆಲೆಯನ್ನು ಭಾರತದಲ್ಲಿ ಶಾಶ್ವತವಾಗಿ ಇಳಿಕೆ ಮಾಡಲಾಗಿದೆ. ಈ ಸ್ಮಾರ್ಟ್ಫೋನ್ನ 8GB + 128GB ಸ್ಟೋರೇಜ್ ಈ ಮೊದಲು ರೂ. 44,999 ಕ್ಕೆ ಬಿಡುಗಡೆ ಮಾಡಲಾಗಿತ್ತು.
ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆ ಆದ ನಥಿಂಗ್ ಕಂಪನಿಯ ಎರಡನೇ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 (Nothing Phone 2) ಬೆಲೆಯನ್ನು ಭಾರತದಲ್ಲಿ ಶಾಶ್ವತವಾಗಿ ಇಳಿಕೆ ಮಾಡಲಾಗಿದೆ. ಈ ಫೋನ್ ಈಗ ಮೊದಲಿಗಿಂತ ಹೆಚ್ಚು ಕೈಗೆಟಕುವ ಬೆಲೆಗೆ ಲಭ್ಯವಿದೆ. ಈ ಹ್ಯಾಂಡ್‌ಸೆಟ್ ಈ ವರ್ಷದ ಜುಲೈನಲ್ಲಿ ಭಾರತದಲ್ಲಿ ಅನಾವರಣಗೊಂಡಿತ್ತು. ಈ ಫೋನ್ ಸ್ನಾಪ್‌ಡ್ರಾಗನ್ 8+ Gen 1 SoC, 50MP ಡ್ಯುಯಲ್ ಕ್ಯಾಮೆರಾ ಸೆನ್ಸರ್‌ಗಳು ಮತ್ತು 120Hz AMOLED ಡಿಸ್‌ಪ್ಲೇಯಂತಹ ಪ್ರೀಮಿಯಂ ಫೀಚರ್ಸ್ನೊಂದಿಗೆ ಬರುತ್ತದೆ. ಹಾಗಾದರೆ ನಥಿಂಗ್ ಫೋನ್ (2) ನೂತನ ಬೆಲೆ ಎಷ್ಟು ನೋಡೋಣ.
ನಥಿಂಗ್ ಫೋನ್ (2) ನೂತನ ಬೆಲೆ:
ನಥಿಂಗ್ ಫೋನ್ (2) ಸ್ಮಾರ್ಟ್ಫೋನ್ನ 8GB + 128GB ಸ್ಟೋರೇಜ್ ಈ ಮೊದಲು ರೂ. 44,999 ಕ್ಕೆ ಬಿಡುಗಡೆ ಮಾಡಲಾಗಿತ್ತು. 12GB + 256GB ಮಾದರಿಗೆ 49,999 ಮತ್ತು 12GB + 512GB ಮಾದರಿಗೆ 54,999 ರೂ. ಇತ್ತು. ಇದೀಗ ಈ ಹ್ಯಾಂಡ್‌ಸೆಟ್ 8GB/128GB ಮಾದರಿಗೆ ರೂ. 39,999, 12GB/256GBಗೆ ರೂ. 44,999 ಮತ್ತು 12GB/512GB ಸ್ಟೋರೇಜ್ ಆಯ್ಕೆಗೆ 49,999 ರೂ. ನಿಗದಿ ಮಾಡಲಾಗಿದೆ. ಈ ಬೆಲೆಗಳು ಯಾವುದೇ ಬ್ಯಾಂಕ್ ರಿಯಾಯಿತಿಗಳನ್ನು ಒಳಗೊಂಡಿಲ್ಲ.
New SIM Card Rules: ಡಿಸೆಂಬರ್ 1 ರಿಂದ ಸಿಮ್ ಕಾರ್ಡ್ ಹೊಸ ನಿಯಮ: ರೂಲ್ಸ್ ಬ್ರೇಕ್ ಮಾಡಿದ್ರೆ 10 ಲಕ್ಷ ದಂಡ
ನಥಿಂಗ್ ಫೋನ್ (2) ಫೀಚರ್ಸ್:
ಡಿಸ್‌ಪ್ಲೇ: ನಥಿಂಗ್ ಫೋನ್ (2) 120Hz ಅಡಾಪ್ಟಿವ್ ರಿಫ್ರೆಶ್ ರೇಟ್‌ನೊಂದಿಗೆ 6.7-ಇಂಚಿನ OLED ಡಿಸ್‌ಪ್ಲೇ, 240Hz ಟಚ್ ಸ್ಯಾಂಪ್ಲಿಂಗ್ ರೇಟ್, HDR10+ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್: ಈ ಹ್ಯಾಂಡ್‌ಸೆಟ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌ನಿಂದ ಅಡ್ರಿನೊ ಜಿಪಿಯು ಜೊತೆ ಜೋಡಿಸಲ್ಪಟ್ಟಿದೆ.
RAM ಮತ್ತು ಸಂಗ್ರಹಣೆ: ಈ ಚಿಪ್‌ಸೆಟ್ 8GB RAM + 128GB ಸಂಗ್ರಹಣೆ, 12GB RAM + 256GB ಸಂಗ್ರಹಣೆ ಮತ್ತು 12GB RAM + 512GB ಸಂಗ್ರಹಣೆಯೊಂದಿಗೆ ಬರುತ್ತದೆ.
ಕ್ಯಾಮೆರಾ: OIS ಮತ್ತು EIS ಜೊತೆಗೆ 50MP Sony IMX890 ಸಂವೇದಕ ಮತ್ತು 50MP Samsung JN1 ಅಲ್ಟ್ರಾ-ವೈಡ್ ಸಂವೇದಕವಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಶೂಟರ್ ಇದೆ.
ಸಾಫ್ಟ್‌ವೇರ್: ಆಂಡ್ರಾಯ್ಡ್ 13-ಆಧಾರಿತ ನಥಿಂಗ್ ಓಎಸ್ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಬ್ಯಾಟರಿ: ಈ ಹ್ಯಾಂಡ್‌ಸೆಟ್ 4,700mAh ಬ್ಯಾಟರಿ, 45W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ